• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Siddiqui Kappan: ಜೈಲಿನಲ್ಲಿದ್ದ ಪತ್ರಕರ್ತ ಸಿದ್ದಿಕಿ ಕಪ್ಪನ್​​ಗೆ ಸುಪ್ರೀಂನಿಂದ ಜಾಮೀನು ಮಂಜೂರು!

Siddiqui Kappan: ಜೈಲಿನಲ್ಲಿದ್ದ ಪತ್ರಕರ್ತ ಸಿದ್ದಿಕಿ ಕಪ್ಪನ್​​ಗೆ ಸುಪ್ರೀಂನಿಂದ ಜಾಮೀನು ಮಂಜೂರು!

ಪತ್ರಕರ್ತ ಸಿದ್ದಿಕಿ ಕಪ್ಪನ್

ಪತ್ರಕರ್ತ ಸಿದ್ದಿಕಿ ಕಪ್ಪನ್

ಪಿಎಫ್ಐನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ಕೇರಳ ರಾಜ್ಯದ ಒಬ್ಬ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಿದ್ದರು. ಈಗ ಈ ಪ್ರಕರಣದಲ್ಲಿ ಆದಂತಹ ಒಂದು ಹೊಸ ಬೆಳವಣಿಗೆ ಏನೆಂದರೆ, ಬಂಧಿಸಲ್ಪಟ್ಟ ಪತ್ರಕರ್ತ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಮುಂದೆ ಓದಿ ...
  • Share this:

ಸುಮಾರು ಎರಡು ವರ್ಷಗಳ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದ (Uttar Pradesh) ಪೊಲೀಸರು ಕೇರಳ ರಾಜ್ಯದ ಒಬ್ಬ ಪತ್ರಕರ್ತ ಸಿದ್ದಿಕಿ ಕಪ್ಪನ್ (Siddique Kappan) ಅವರನ್ನು ಬಂಧಿಸಿದ್ದರು. ಈಗ ಈ ಪ್ರಕರಣದಲ್ಲಿ ಆದಂತಹ ಒಂದು ಹೊಸ ಬೆಳವಣಿಗೆ ಏನೆಂದರೆ, ಬಂಧಿಸಲ್ಪಟ್ಟ ಪತ್ರಕರ್ತ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ನೇತೃತ್ವದ ಪೀಠವು ಅವರನ್ನು ಮೂರು ದಿನಗಳೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿತು, ಅದು ಸೂಕ್ತವೆಂದು ಭಾವಿಸುವ ಷರತ್ತುಗಳ ಮೇಲೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.


ಜೈಲಿನಿಂದ ಹೊರ ಬಂದ್ರೂ ಕೇರಳಕ್ಕೆ ಹೋಗುವಂತಿಲ್ಲಾ
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೂ ಒಳಗೊಂಡ ನ್ಯಾಯಪೀಠವು ಕೆಲವು ದಾಖಲೆಗಳ ಮೂಲಕ ನ್ಯಾಯಾಲಯದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. "ಈ ಹಂತದಲ್ಲಿ, ತನಿಖೆಯ ಪ್ರಗತಿ ಮತ್ತು ಪ್ರಾಸಿಕ್ಯೂಷನ್ ನಿಂದ ಸಂಗ್ರಹಿಸಲಾದ ಸಾಮಗ್ರಿಗಳ ಬಗ್ಗೆ ವ್ಯವಹರಿಸುವುದರಿಂದ ಮತ್ತು ಪ್ರತಿಕ್ರಿಯಿಸುವುದರಿಂದ ನಾವು ದೂರವಿರುತ್ತೇವೆ" ಎಂದು ನ್ಯಾಯಪೀಠ ಹೇಳಿದೆ.


ಆದಾಗ್ಯೂ, "ಅರ್ಜಿದಾರರು ಅನುಭವಿಸಿದ ಕಸ್ಟಡಿಯ ಅವಧಿ ಮತ್ತು ಪ್ರಕರಣದ ವಿಲಕ್ಷಣ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ" ಅವರಿಗೆ ಜಾಮೀನು ನೀಡುತ್ತಿರುವುದಾಗಿ ನ್ಯಾಯಪೀಠ ಹೇಳಿದೆ. ಆದರೆ ‌ಜಾಮೀನು ಅಂದ ತಕ್ಷಣ ಅವರು ನೇರವಾಗಿ ಅವರ ತವರು ಕೇರಳ ರಾಜ್ಯಕ್ಕೆ ಹೋಗುವ ಅವಕಾಶವನ್ನು ಅವರು ಪಡೆದಿಲ್ಲ.


ಇದನ್ನೂ ಓದಿ: Bharat Jodo: ಯೇಸು ಮಾತ್ರ ನಿಜವಾದ ದೇವರು: ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ, ಕೈ ಸಮರ!


ಕಪ್ಪನ್ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಆರು ವಾರಗಳ ಕಾಲ ದೆಹಲಿಯಲ್ಲಿಯೇ ಇರಬೇಕು ಮತ್ತು ಪ್ರತಿ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ವರದಿ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಈ ಅವಧಿಯ ನಂತರ, ಅವರು ಕೇರಳಕ್ಕೆ ಹೋಗಬಹುದು, ಅಲ್ಲಿಗೆ ಹೋದರೂ ಸಹ ಅಲ್ಲಿ ಅವರು ಪ್ರತಿ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಬೇಕು ಎಂದು ಹೇಳಲಾಗಿದೆ.


ಪ್ರಕರಣದ ಕುರಿತು ಸಿದ್ದಿಕಿ ಅವರಪತ್ನಿ ಏನು ಹೇಳಿದ್ದಾರೆ?
ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಮತ್ತು ವಿವಾದಕ್ಕೆ ಸಂಬಂಧಿಸಿದ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನ್ಯಾಯಾಲಯವು ಕಪ್ಪನ್ ಅವರಿಗೆ ಸೂಚಿಸಿದೆ ಕಪ್ಪನ್ ವಿರುದ್ಧ ಜಾರಿ ನಿರ್ದೇಶನಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿರುವುದಾಗಿ ಅವರ ಪತ್ನಿ ರೈಹಾನಾ ಸಿದ್ದಿಕಿ ಅವರು ಹೇಳಿದ್ದಾರೆ.


"ಇಡಿ ಪ್ರಕರಣದಲ್ಲೂ ಕಪ್ಪನ್ ಶೀಘ್ರದಲ್ಲಿಯೇ ಜಾಮೀನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯನ್ನು ದಾಖಲಿಸಲಾಗಿದೆ. ಈ ಕಾನೂನು ಹೋರಾಟದಲ್ಲಿ ನನ್ನೊಂದಿಗೆ ಮತ್ತು ನನ್ನ ಕುಟುಂಬದೊಂದಿಗೆ ನಿಂತ ಪ್ರತಿಯೊಬ್ಬರಿಗೂ ನಾನು ತುಂಬಾನೇ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ನಾವು ಅನುಭವಿಸಿದ ಆಘಾತವನ್ನು ನಾವು ವಿವರಿಸಲು ಸಾಧ್ಯವಿಲ್ಲ" ಎಂದು ಸಿದ್ದಿಕಿ ಅವರ ಪತ್ನಿ ಹೇಳಿದರು.


ಈ ಘಟನೆ ಏನು 
ಇನ್ನೂ ಈ ಘಟನೆಯ ಬಗ್ಗೆ ಹೇಳುವುದಾದರೆ, ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶದ ಮಥುರಾದಿಂದ ಹತ್ರಾಸ್ ಗೆ ತೆರಳುತ್ತಿದ್ದಾಗ ಪತ್ರಕರ್ತರಾದ ಕಪ್ಪನ್ ಮತ್ತು ಇತರರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು, ಅಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು.


ಇದನ್ನೂ ಓದಿ:  KPTCL ನೇಮಕಾತಿ ಅಕ್ರಮ; N-95 ಮಾಸ್ಕ್​​, ಬನಿಯನ್​ಗಳಲ್ಲಿ ಇಲೆಕ್ಟ್ರಾನಿಕ್ ಡಿವೈಸ್; ಪ್ರಮುಖ ಆರೋಪಿ ಅರೆಸ್ಟ್


ಕಪ್ಪನ್ ಅವರು ಈ ಘಟನೆಯ ಬಗ್ಗೆ ವರದಿ ಮಾಡಲು ಹೊರಟಿದ್ದಾರೆ ಎಂದು ಪೊಲೀಸರಿಗೆ ಹೇಳಿದರೂ, ಪೊಲೀಸರು, ಪತ್ರಕರ್ತಈ ಪ್ರವಾಸ ಸಮಾಜದಲ್ಲಿ ಅಸಮಧಾನವನ್ನು ಹರಡಲು ಹೋಗುತ್ತಿದ್ದಾರೆ ಮತ್ತು ಇದಕ್ಕೆಲ್ಲಾ ಭಯೋತ್ಪಾದಕ ಗ್ಯಾಂಗ್ ನಿಂದ ಹಣವನ್ನು ಒದಗಿಸಿದ್ದಾರೆ ಎಂದು ವಾದಿಸಿ, ಇವರನ್ನು ಬಂಧಿಸಿದ್ದರು.

top videos
    First published: