BS Yediyurappa: ಬಿ ಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್, ರಾಜಾಹುಲಿ ಈಗ ನಿರಾಳ

ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ರಿಲೀಫ್ ನೀಡಿದೆ.

ಬಿ. ಎಸ್.ಯಡಿಯೂರಪ್ಪ

ಬಿ. ಎಸ್.ಯಡಿಯೂರಪ್ಪ

  • Share this:
    ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ (Corruption Cases) ಸುಪ್ರೀಂಕೋರ್ಟ್ (Supreme Court On BS Yediyurappa)  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ಈಮುನ್ನ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ (FIR) ರದ್ದುಗೊಳಿಸಲು ನಿರಾಕರಿಸಿತ್ತು. ಬಿಎಸ್​ವೈ ಮೇಲಿದ್ದ ಡಿನೋಟಿಫೈ (Denotifying) ಪ್ರಕರಣಕ್ಕೆ ಸಂಬಂಧಿಸಿ ದೇಶದ ಸರ್ವೋಚ್ಛ ನ್ಯಾಯಾಲಯ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ನಿರಾಳ ಉಸಿರು ಬಿಡುವಂತಾಗಿದೆ. 

    2006-07ರಲ್ಲಿನ ಡಿನೋಟಿಫೈ ಪ್ರಕರಣಗಳಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶದ ವಿರುದ್ದ ಬಿಎಸ್​ವೈ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

    ಇದಿಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಮೇಲಿದ್ದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಈಮೂಲಕ ರಾಜಾಹುಲಿ ಪರ ಸದ್ಯ ಸುಪ್ರೀಂಕೋರ್ಟ್​ನಲ್ಲಿ  ಎಸ್.ಯಡಿಯೂರಪ್ಪ ಅವರ ಪರ ಆದೇಶ ಪ್ರಕಟವಾಗಿದೆ.

    ಇದನ್ನೂ ಓದಿ: BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ; ರಾಜಾಹುಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ

    ಜುಲೈ 22, ಬಿಎಸ್​ವೈಗೆ ಮಹತ್ವದ ದಿನ
    ಇಂದೇ, ಅಂದರೆ ಜುಲೈ 22ರಂದೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಹತ್ವದ ಘೋಷಣೆ ಮಾಡಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ  ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು, ತಮ್ಮ ಕ್ಷೇತ್ರವನ್ನು ಕಿರಿಯ ಪುತ್ರ, ಬಿ ವೈ ವಿಜಯೇಂದ್ರ  ಅವರಿಗೆ ಬಿಟ್ಟುಕೊಡೋದಾಗಿ ಯಡಿಯೂರಪ್ಪನವರು ಹೇಳಿದ್ದಾರೆ. 1983ರಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಯಡಿಯೂರಪ್ಪನವರು ಒಟ್ಟು 8 ಬಾರಿ ಗೆದ್ದಿದ್ದಾರೆ.

    ಇದನ್ನೂ ಓದಿ: Shiradi Ghat: ಬೆಂಗಳೂರು ಟು ಮಂಗಳೂರು ಪ್ರಯಾಣಕ್ಕೆ ಶಿರಾಡಿ ಘಾಟ್ ಓಪನ್; ಈ ನಿಯಮ ಅನ್ವಯ

    1999ರಲ್ಲಿ ಒಮ್ಮೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾದಾಗ, ಹಿರಿಯ ಪುತ್ರ ಬಿ.ವೈ.ರಾಘವೇಂದ್ರ  ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. 1983ರಿಂದ ಇಲ್ಲಿಯವರಗೆ ಶಿಕಾರಿಪುರ ಕ್ಷೇತ್ರ ಯಡಿಯೂರಪ್ಪ ಅವರ ಭದ್ರಕೋಟೆಯಾಗಿದೆ. 2023ರ ಚುನಾವಣೆಯಲ್ಲಿ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದೆ.
    Published by:guruganesh bhat
    First published: