HOME » NEWS » National-international » SUPREME COURT GIVES CHIDAMBARAM INTERIM BAIL IN ED CASE TILL MONDAY GNR

ಐಎನ್​​​ಎಕ್ಸ್​​ ಮೀಡಿಯಾ ಪ್ರಕರಣ; ಇ.ಡಿ. ಎದುರು ಚಿದಂಬರಂಗೆ ಮಧ್ಯಂತರ ಜಾಮೀನು; ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ಸಿಬಿಐ ವಿಶೇಷ ನ್ಯಾಯಾಲಯ ಆದೇಶದ ಮೇರೆಗೆ ಚಿದಂಬರಂ ಅವರನ್ನು ಐದು ದಿನಗಳ ಕಾಲ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಚಿದಂಬರಂ ಅವರೀಗ ಸಿಬಿಐ ವಶದಲ್ಲಿದ್ದಾರೆ. ಹಾಗಾಗಿ ಖಾಯಂ ಜಾಮೀನಿಗೆ ಮತ್ತೊಂದು ಅರ್ಜಿ ಸಲ್ಲಿಸಬೇಕಾಗಿದೆ.

news18
Updated:August 23, 2019, 2:05 PM IST
ಐಎನ್​​​ಎಕ್ಸ್​​ ಮೀಡಿಯಾ ಪ್ರಕರಣ; ಇ.ಡಿ. ಎದುರು ಚಿದಂಬರಂಗೆ ಮಧ್ಯಂತರ ಜಾಮೀನು; ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ
ಪಿ. ಚಿದಂಬರಂ
  • News18
  • Last Updated: August 23, 2019, 2:05 PM IST
  • Share this:
ನವದೆಹಲಿ(ಆಗಸ್ಟ್​​.23): ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಪ್ರಕರಣದಲ್ಲಿ ತನ್ನನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳಿಂದ ಬಂಧನ ಮುಕ್ತಿಗೊಳಿಸುವಂತೆ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ದೆಹಲಿ ಹೈಕೋರ್ಟ್ ಚಿದಂಬರಂಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ತನ್ನ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ​ ಪಿ.ಚಿದಂಬರಂ ಮತ್ತೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ಧಾರೆ. ಸದ್ಯ ಪಿ. ಚಿದಂಬರಂ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಮಂಗಳವಾರ ದೆಹಲಿ ಹೈಕೋರ್ಟ್​​ ಚಿದಂಬರಂಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಬುಧವಾರ ಸಿಬಿಐ ಅಧಿಕಾರಿಗಳು ಕಾಂಗ್ರೆಸ್​​ ಹಿರಿಯ ನಾಯಕನನ್ನು ಬಂಧಿಸಿದರು. ಸಿಬಿಐ ವಿಶೇಷ ನ್ಯಾಯಾಲಯ ಆದೇಶದ ಮೇರೆಗೆ ಚಿದಂಬರಂ ಅವರನ್ನು ಐದು ದಿನಗಳ ಕಾಲ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ್ಯಾಯಾಲಯ ಮುಂದೂಡಿತ್ತು. ಚಿದಂಬರಂ ಅವರೀಗ ಸಿಬಿಐ ವಶದಲ್ಲಿದ್ದಾರೆ. ಹಾಗಾಗಿ ಖಾಯಂ ಜಾಮೀನಿಗೆ ಮತ್ತೊಂದು ಅರ್ಜಿ ಸಲ್ಲಿಸಬೇಕಾಗಿದೆ.

ಜಾರಿ ನಿರ್ದೇಶನಾಲಯದ(ಈಡಿ) ಬಂಧನದಿಂದ ತನ್ನನ್ನು ರಕ್ಷಿಸುವಂತೆ ಚಿದಂಬರಂ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​​ ಇಂದು ವಿಚಾರಣೆ ನಡೆಸಿದೆ. ಅಲ್ಲದೇ ಇಡಿ ಕೇಸ್​​ನಲ್ಲಿ ಮಾತ್ರ ಮಧ್ಯಂತರ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆ ಸೋಮವಾರಕ್ಕೆ ಮುಂದೂಡಿ ಆದೇಶಿಸಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಅಂತ್ಯ?; ಗೌಡರ ಕುಟುಂಬದ ಮೇಲೆ ಸಿದ್ದರಾಮಯ್ಯ ಭಾರೀ ಪ್ರಹಾರ

ಏನಿದು ಪ್ರಕರಣ?: 2007ರಲ್ಲಿ ಪೀಟರ್ ಮತ್ತು ಇಂದ್ರಾಣಿ ಒಡೆತನದಲ್ಲಿದ್ದ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು, 3.5 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ಮೇಲಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಇಂದ್ರಾಣಿ ಮುಖರ್ಜಿ ಅವರು, ದೆಹಲಿ ಹೋಟೆಲ್​​ವೊಂದರಲ್ಲಿ ಕಾರ್ತಿ ಚಿದಂಬರಂ ನನ್ನ ಭೇಟಿ ಮಾಡಿದ್ದರು. ಪಿಐಪಿಬಿ ವ್ಯವಹಾರಕ್ಕೆ ಅನುವು ಮಾಡಿಕೊಡಲು 1 ಮಿಲಿಯನ್ ಡಾಲರ್ 1 ಮಿಲಿಯನ್ ಡಾಲರ್ ಭೇಡಿಕೆ ಇಟ್ಟಿದ್ದರು ಎಂದು ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಚಿಂದಬರಂ ಮೇಲಿನ ಆರೋಪ: 2007ರಲ್ಲಿ ನವದೆಹಲಿಯ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ಭೇಟಿ ಮಾಡಿದ್ದ ಪೀಟರ್ ಮತ್ತು ಇಂದ್ರಾಣಿ, ಐಎನ್​ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದೇವೇಳೆ, ಚಿದಂಬರಂ ಇದಕ್ಕೆ ಪ್ರತಿಯಾಗಿ ತಮ್ಮ ಮಗನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ--------------
First published: August 23, 2019, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading