ಸುಪ್ರೀಂ ಕೋರ್ಟ್​​ಗೆ ನೂತನ 4 ನ್ಯಾಯಮೂರ್ತಿಗಳ ನೇಮಕ

ಸುಪ್ರೀಂ ಕೋರ್ಟ್​​ನಲ್ಲಿ ಖಾಲಿ ಉಳಿದಿದ್ದ 4 ನ್ಯಾಯಮೂರ್ತಿಗಳ ಸ್ಥಾನಕ್ಕೆ ಈ ನಾಲ್ವರು ಜಡ್ಜ್​ಗಳನ್ನು ನೇಮಕ ಮಾಡುವಂತೆ ಆಗಸ್ಟ್​ 30ರಂದು ಸುಪ್ರೀಂ ಕೋರ್ಟ್​ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

Latha CG | news18-kannada
Updated:September 23, 2019, 1:23 PM IST
ಸುಪ್ರೀಂ ಕೋರ್ಟ್​​ಗೆ ನೂತನ 4 ನ್ಯಾಯಮೂರ್ತಿಗಳ ನೇಮಕ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಸೆ. 23): ಇಂದು ಸುಪ್ರೀಂ ಕೋರ್ಟ್​​ಗೆ ಹೊಸದಾಗಿ 4 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಯಿತು. ನಾಲ್ಕು ಜಡ್ಜ್​ಗಳು ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್​ನಲ್ಲಿರುವ ಜಡ್ಜ್​ಗಳ ಸಂಖ್ಯೆ 34ಕ್ಕೆ ಏರಿದೆ.

ಕೃಷ್ಣ ಮುರಾರಿ(61), ರವೀಂದ್ರ ಭಟ್​(60), ರಾಮಸುಬ್ರಮಣಿಯನ್​(61) ಮತ್ತು ಹೃಷಿಕೇಶ್​ ರಾಯ್​(59) ಸುಪ್ರೀಂ ಕೋರ್ಟ್​ಗೆ ಹೊಸದಾಗಿ ನೇಮಕವಾದ ನ್ಯಾಯಮೂರ್ತಿಗಳು.

ವಿ. ರಾಮಸುಬ್ರಮಣಿಯನ್​ ಹಿಮಾಚಲ ಪ್ರದೇಶ ಹೈ ಕೋರ್ಟ್​​ನ ನ್ಯಾಯಮೂರ್ತಿ ಆಗಿದ್ದರು. ಎಸ್​ ರವೀಂದ್ರ ಭಟ್​ ರಾಜಸ್ಥಾನ ಹೈ ಕೋರ್ಟ್​​ನ ನ್ಯಾಯಮೂರ್ತಿ ಆಗಿದ್ದರು. ಹೃಷಿಕೇಶ್​ ರಾಯ್ ಕೇರಳ ಹೈಕೋರ್ಟ್​​ನಲ್ಲಿ ಮುಖ್ಯ ನ್ಯಾಯಮೂರ್ತಿ ಆಗಿದ್ದರು. ಕೃಷ್ಣ ಮುರಾರಿ ಈ ಮೊದಲು ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು.

ಬಾಲಾಕೋಟ್ ಉಗ್ರರ ಕ್ಯಾಂಪ್ ಈಗಲೂ ಕಾರ್ಯನಿರ್ವಹಿಸುತ್ತಿದೆ, ದೇಶದೊಳಕ್ಕೆ ನುಸುಳಲು 500 ಉಗ್ರರು ಕಾಯುತ್ತಿದ್ದಾರೆ; ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸುಪ್ರೀಂ ಕೋರ್ಟ್​​ನಲ್ಲಿ ಖಾಲಿ ಉಳಿದಿದ್ದ 4 ನ್ಯಾಯಮೂರ್ತಿಗಳ ಸ್ಥಾನಕ್ಕೆ ಈ ನಾಲ್ವರು ಜಡ್ಜ್​ಗಳನ್ನು ನೇಮಕ ಮಾಡುವಂತೆ ಆಗಸ್ಟ್​ 30ರಂದು ಸುಪ್ರೀಂ ಕೋರ್ಟ್​ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

4 ಹೊಸ ಜಡ್ಜ್​ಗಳ ನೇಮಕ ಮಾಡಿರುವುದರಿಂದ ಸುಪ್ರೀಂ ಕೋರ್ಟ್​ನಲ್ಲಿ ಎರಡು ಹೆಚ್ಚುವರಿ ಕೋರ್ಟ್​ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಸುಪ್ರೀಂ ಕೋರ್ಟ್​ನಲ್ಲಿ 15 ಕೋರ್ಟ್​​ ರೂಂಗಳಿದ್ದವು, ಈಗ ಅವುಗಳ ಸಂಖ್ಯೆ 17 ಆಗಿದೆ.

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading