HOME » NEWS » National-international » SUPREME COURT FINISHES HEARING ARGUMENTS BY ALL PARTIES RESERVES JUDGMENT RH

Ayodhya Case | ಅಯೋಧ್ಯೆ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

Supreme Court on Ayodhya Case Latest News: 40 ದಿನಗಳಿಂದ ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್ 17ರಂದು ಪ್ರಕರಣದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

HR Ramesh | news18-kannada
Updated:October 16, 2019, 4:42 PM IST
Ayodhya Case | ಅಯೋಧ್ಯೆ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ರಾಜಕೀಯ ಸೂಕ್ಷ್ಮದ ಅಯೋಧ್ಯೆಯ ರಾಮ ಜನ್ಮ ಭೂಮಿ- ಬಾಬ್ರಿ ಮಸೀದಿ ಪ್ರಕರಣದ ಎರಡು ಕಡೆಯ ವಕೀಲರ ವಾದ-ಪ್ರತಿವಾದಗಳು ಇಂದಿಗೆ ಮುಕ್ತಾಯಗೊಂಡಿದೆ. ಸತತ 40 ದಿನಗಳಿಂದ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಅಯೋಧ್ಯೆ ಪ್ರಕರಣದ ಅಂತಿಮ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಾದ-ಪ್ರತಿವಾದವನ್ನು ಅಕ್ಟೋಬರ್ 17ರಂದು ಮುಗಿಸಬೇಕು ಎಂದು ಈ ಹಿಂದೆ ಗಡುವು ನಿಗದಿ ಮಾಡಲಾಗಿದ್ದು, ಆದಾಗ್ಯೂ, ನೆನ್ನೆಯ ವಿಚಾರಣೆಯಲ್ಲಿ ಸಿಜೆಐ ಅವರು, ಇದರಲ್ಲಿ ಒಂದು ದಿನವನ್ನು ಮೊಟಕುಗೊಳಿಸಿ, ಅ.16ರ ಸಂಜೆ 5 ಗಂಟೆಯೊಳಗೆ ವಾದ ಮುಗಿಸುವಂತೆ ಗಡುವು ನಿಗದಿ ಮಾಡಿದ್ದರು.

ಆದರೆ, ಇಂದು ಮಧ್ಯಾಹ್ನ ಕೋರ್ಟ್ ವಿಚಾರಣೆ ಆರಂಭವಾದಾಗ ದೊಡ್ಡ ಹೈಡ್ರಾಮಾವೇ ನಡೆಯಿತು. ಇದರಿಂದ ಅಸಮಾಧಾನಗೊಂಡ ಸಿಜೆಐ ಗೊಗೋಯ್ ಅವರು, ಸಾಕಾಪ್ಪ, ಸಾಕು ಈ ವಿಚಾರಣೆ. ಒಂದು ವೇಳೆ ಇದೇ ರೀತಿಯಾಗಿ ಪ್ರಕ್ರಿಯೆಗಳು ಮುಂದುವರೆದರೆ ನಾವು ಯಾರೊಬ್ಬರ ವಾದವನ್ನು ಕೇಳಲಾಗುವುದಿಲ್ಲ. ನಾವು ಕೇವಲ ಪತ್ರಗಳ ಮೂಲಕ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: Ayodhya Case: ಅಯೋದ್ಯ ಇಂದಿಗೆ ಅಂತ್ಯವಾಗಲಿದೆ ಅಯೋಧ್ಯೆ ಸುಪ್ರೀಂ ವಿಚಾರಣೆ; ನವೆಂಬರ್ 17ಕ್ಕೆ ಐತಿಹಾಸಿಕ ತೀರ್ಪು; ಸಿಜೆಐ ರಂಜನ್​ ಗೊಗೋಯ್

2010ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 2.77 ಎಕರೆ ಅಯೋಧ್ಯೆ ಭೂಮಿಯನ್ನು ರಾಮ್ ಲಲ್ಲಾ, ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಮಂಡಲಿಗೆ ಸಮನಾಗಿ ಹಂಚಿಕೆ ಮಾಡಿ ಕೈತೊಳೆದುಕೊಂಡಿತ್ತು. ಆದರೆ, ಮೂರೂ ಕಕ್ಷೀದಾರರಿಗೆ ಈ ತೀರ್ಪು ತೃಪ್ತಿ ನೀಡದ ಕಾರಣ ಎಲ್ಲರೂ ಸುಪ್ರೀಂ ಕೋರ್ಟ್​ನಲ್ಲಿ  ಮೇಲ್ಮನವಿ ಸಲ್ಲಿಸಿದ್ದರು. ಅಂದಿನಿಂದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​, ಸೆ.6ರಂದು ಪ್ರತಿದಿನ ಪ್ರಕರಣದ ವಿಚಾರಣೆ ನಡೆಸಲು ಅವಕಾಶ ನೀಡಿ, ಎರಡು ಕಡೆಯ ವಕೀಲರು ತಮ್ಮ ಅ.17ರವರೆಗೂ ವಾದ-ಪ್ರತಿವಾದ ಮಾಡಲು ಅನುವು ನೀಡಿ, ಗಡುವು ನಿಗದಿ ಮಾಡಿತ್ತು. ಆದಾಗ್ಯೂ ನೆನ್ನೆ ಈ ಗಡುವಿನಲ್ಲಿ ಒಂದು ದಿನವನ್ನು ಮೊಟಕುಗೊಳಿಸಿ, ಅ.16ರ 5 ಗಂಟೆಯೊಳಗೆ ವಾದ ಮುಗಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ 40 ದಿನಗಳಿಂದ ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್ 17ರಂದು ಪ್ರಕರಣದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

First published: October 16, 2019, 4:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories