Supreme Court: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯದ ವಿರುದ್ಧ ಅರ್ಜಿ ವಜಾಗೊಳಿಸಿದ ಸುಪ್ರೀಂ

ಕೇವಲ ಸುದ್ದಿ ವರದಿಗಳನ್ನು ಆಧರಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು ತಜ್ಞರಿಂದ ಮಾಡಲ್ಪಟ್ಟಿದೆ ಎಂದು ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

  • Share this:
    ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ (GZRRC) ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಲಾಗುತ್ತಿರುವ ಮೃಗಾಲಯದ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ (Supreme Court) ವಜಾಗೊಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಿಂದ (Reliance Industries Limited) ಈ ಮೃಗಾಲಯ ಬೆಂಬಲಿತವಾಗಿದ್ದ ಈ ಮೃಗಾಲಯದ ಕುರಿತು ಕೆಲವು ಆರೋಪಗಳನ್ನು ಮಾಡಿ ಪಿಐಎಲ್ (PIL) ಸಲ್ಲಿಸಲಾಗಿತ್ತು. ಆದರೆ ಸದ್ಯ ಸುಪ್ರೀಂಕೋರ್ಟ್ ಈ ಪಿಐಎಲ್​ ಅನ್ನು ವಜಾಗೊಳಿಸಿದೆ. ಈ ಆರೋಪಗಳು ಕೇವಲ ಸುದ್ದಿ ವರದಿಗಳನ್ನು ಆಧರಿಸಿವೆ ಎಂದು ಸಹ ಗಮನಿಸಿರುವುದಾಗಿ ತಿಳಿಸಿದೆ.

    ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ ವಿರುದ್ಧ ಹೊರಿಸಲಾದ ಆರೋಪಗಳು ಯಾವುದೇ ತರ್ಕ ಅಥವಾ ಆಧಾರ ಹೊಂದಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಿದೆ.

    ಅಧಿಕಾರಿಗಳಿಂದಲೂ ತಪ್ಪು ನಡೆದಿಲ್ಲ
    ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ ಅನುಮತಿಗಳು ಮತ್ತು ಅನುಮೋದನೆಗಳನ್ನು ನೀಡುವ ಅಧಿಕಾರಿಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿರುವುದು ಕಂಡುಬಂದಿಲ್ಲ ಎಂದು ಸುಪ್ರೀಂಕೋರ್ಟ್ ಗಮನಿಸಿದ್ದಾಗಿ ಉಲ್ಲೇಖಿಸಿದೆ.  

    ಶೈಕ್ಷಣಿಕ ಉದ್ದೇಶವೇ ಹೊರತು ಮತ್ತೇನಲ್ಲ
    ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ ನ್ಯಾಯಾಲಯದ ಮುಂದೆ ಸ್ಪಷ್ಟನೆ ನೀಡಿದೆ. ಇದು ಶೈಕ್ಷಣಿಕ ಉದ್ದೇಶಗಳಿಗಾಗಿ ಸಾರ್ವಜನಿಕರಿಗಾಗಿ ತೆರೆದಿರುವ ಝೂಲಾಜಿಕಲ್ ಪಾರ್ಕ್ ಸ್ಥಾಪಿಸುವ ಉದ್ದೇಶ ಒಂದನ್ನೇ ಹೊಂದಿದೆ ಎಂದು ಸಂಸ್ಥೆಯು ಸುಪ್ರೀಂಕೋರ್ಟ್​ಗೆ ತಿಳಿಸಿದೆ. 

    ಪ್ರಾಣಿಗಳ ಕಲ್ಯಾಣಕ್ಕಾಗಿ ರಕ್ಷಣಾ ಕೇಂದ್ರ
    ಅಲ್ಲದೇ ಭಾರತದಿಂದ ಮಾತ್ರವಲ್ಲದೆ ಎಲ್ಲೆಡೆ ರಕ್ಷಣೆಯ ಅಗತ್ಯವಿರುವ ಪ್ರಾಣಿಗಳ ಕಲ್ಯಾಣಕ್ಕಾಗಿ ರಕ್ಷಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ. ಪ್ರಾಣಿಗಳ ಕಲ್ಯಾಣ, ರಕ್ಷಣೆ ಮತ್ತು ಪುನರ್ವಸತಿ ಮತ್ತು ಸಂರಕ್ಷಣೆಯ ಉದ್ದೇಶವನ್ನು ಸಹ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ ಹೊಂದಿದೆ ಎಂದು ಸಂಸ್ಥೆಯು ತಿಳಿಸಿದೆ.

    ಲಾಭೋದ್ದೇಶವಿಲ್ಲದ ಸಂಸ್ಥೆ ಎಂಬುದನ್ನು ಗಮನಿಸಿದ ಸುಪ್ರೀಂ
    ಈ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ ಪ್ರಾಣಿಗಳ ಕಲ್ಯಾಣ ಮತ್ತು ಮುಖ್ಯ ಉದ್ದೇಶವನ್ನು ಹೊಂದಿರುವ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದ್ದಾಗಿ ತಿಳಿಸಿದೆ.

    ಇದನ್ನೂ ಓದಿ: Zoonotic Disease: ವಿದೇಶಿ ಪ್ರಾಣಿಗಳಿಂದ Zoonotic ಕಾಯಿಲೆಯನ್ನು ತಡೆಯುವುದು ಹೇಗೆ? ಇದಕ್ಕೆ ಸರಕಾರ ಹೊರಡಿಸಿರುವ ಶಿಫಾರಸುಗಳೇನು?

    ವರದಿ ಆಧರಿಸಿ ಪಿಐಎಲ್ ಎಂದ ಕೋರ್ಟ್
    ಈ ಸಾರ್ವಜನಿಕ ಮೊಕದ್ದಮೆಯನ್ನು ಸಲ್ಲಿಸಿದ ಕಾರ್ಯಕರ್ತ ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿಲ್ಲ. ಕೇವಲ ಸುದ್ದಿ ವರದಿಗಳನ್ನು ಆಧರಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸಂಸ್ತೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು ತಜ್ಞರಿಂದ ಮಾಡಲ್ಪಟ್ಟಿದೆ ಎಂದು ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

    ಇದನ್ನೂ ಓದಿ: BSF Jawan Martyred: ಹೊಂಚುಹಾಕಿ ದಾಳಿ ಮಾಡಿದ ಉಗ್ರರು; ಬಿಎಸ್​ಎಫ್ ಯೋಧ ಹುತಾತ್ಮ

    ವಾರ್ಷಿಕ ವರದಿಯಲ್ಲಿ ಉದ್ದೇಶಗಳ ಉಲ್ಲೇಖ
    ತನ್ನ ವಾರ್ಷಿಕ ವರದಿ 2020-21 ರಲ್ಲಿ, GZRRC ಜೀವವೈವಿಧ್ಯದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಮತ್ತು ತಕ್ಷಣದ ಆರೈಕೆಯ ಅಗತ್ಯವಿರುವ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಮಾಡುವ ನೋಡಲ್ ಕೇಂದ್ರವಾಗಿದೆ. GZRRC ಅಳಿವಿನ ಅಂಚಿನಲ್ಲಿರುವ ಪ್ರದೇಶದಿಂದ ಅಳಿವಿನಂಚಿನಲ್ಲಿರುವ ಭಾರತೀಯ ಪ್ರಭೇದಗಳನ್ನು ಮರಳಿ ತರಲು ಕೆಲಸ ಮಾಡುವ ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವಾಗಿದೆ.
    Published by:guruganesh bhat
    First published: