Congress Toolkit: ನಿಮಗೆ ಇಷ್ಟ ಇಲ್ಲ ಎಂದರೆ, ನಿರ್ಲಕ್ಷಿಸಿ; ಅರ್ಜಿ ವಜಾಗೊಳಿಸಿದ ಸುಪ್ರೀಂ

ಟೂಲ್​ಕಿಟ್​ ರಾಜಕೀಯ ಪ್ರಚಾರದ ಭಾಗವಾಗಿದೆ ಮತ್ತು ಅರ್ಜಿದಾರರು ಅವರಿಗೆ ಇಷ್ಟವಿಲ್ಲದಿದ್ದರೆ ಅವುಗಳನ್ನು ನಿರ್ಲಕ್ಷಿಸಬಹುದು ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್​.

ಸುಪ್ರೀಂ ಕೋರ್ಟ್​.

 • Share this:
  ನವದೆಹಲಿ (ಜು. 5):  ದೇಶದ ವರ್ಚಸ್ಸುನ್ನು ಕುಗ್ಗಿಸುವ ಸಲುವಾಗಿ ಕಾಂಗ್ರೆಸ್​ ಟೂಲ್​ಕಿಟ್​ ( Congress toolkit) ಸೃಷ್ಟಿಸಿದೆ. ಈ ಹಿನ್ನಲೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಎಸ್ಐಟಿ ತನಿಖೆ ನಡೆಸುವಂತೆ ಕೋರಿಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ನಿರಾಕರಿಸಿದೆ ಎಂದು ಬಾರ್​ ಅಂಡ್​ ಬೆಂಚ್​ ವರದಿ ಮಾಡಿದೆ. ಶಶಾಂಕ್​ ಶೇಖರ್​ ಜಾ ವರ್ಸಸ್ ಭಾರತೀಯ ಕಾಂಗ್ರೆಸ್​ ಈ ಪ್ರಕರಣದಲ್ಲಿ ಅರ್ಜಿದಾರ ವಕೀಲ ಶಂಶಕ್​ ಶೇಖರ್​ ಜಾ, ಟೂಲ್ಕಿಟ್ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಇತರ ವಿಭಾಗಗಳ ಅಡಿಯಲ್ಲಿ ಅಪರಾಧದ ಯಾವುದೇ ಪುರಾವೆಗಳನ್ನು ಹೊಂದಿದೆಯೇ ಹಾಗೂ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 13, ಮತ್ತು ಟೂಲ್‌ಕಿಟ್‌ನ ಬಂಧನವನ್ನು ಪಡೆದುಕೊಳ್ಳಲು ಸಾಧ್ಯವೆ ಎಂಬ ಕುರಿತು ತನಿಖೆ ನಡೆಸಬೇಕೆಂದು ಕೇಳಿಕೊಂಡಿದ್ದರು.

  ಈ ಕುರಿತು ತಿಳಿಸಿದ ನ್ಯಾಯಾಲಯ, ಈ ಟೂಲ್​ಕಿಟ್​ ರಾಜಕೀಯ ಪ್ರಚಾರದ ಭಾಗವಾಗಿದೆ ಮತ್ತು ಅರ್ಜಿದಾರರು ಅವರಿಗೆ ಇಷ್ಟವಿಲ್ಲದಿದ್ದರೆ ಅವುಗಳನ್ನು ನಿರ್ಲಕ್ಷಿಸಬಹುದು ಎಂದು ಸ್ಪಷ್ಟಪಡಿಸಿದೆ.

  ಮಿ. ಜಾ ನಿಮಗೆ ಟೂಲ್​ಕಿಟ್​ ಇಷ್ಟವಿಲ್ಲ ಎಂದರೆ ನಿರ್ಲಕ್ಷ್ಯಿಸಿ. ಇದು ರಾಜಕೀಯ ಪ್ರಚಾರದ ಭಾಗವಾಗಿದೆ. ನಿಮಗೆ ಒಂದು ವೇಳೆ ಇಷ್ಟವಾಗಿಲ್ಲ ಎಂದರೆ ನಿರ್ಲಕ್ಷಿಸಿ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ತಿಳಿಸಿದ್ದಾರೆ.

  ಮತ್ತೊಂದು ಕಡೆ ಟೂಲ್​ ಕಿಟ್​ ಕೋಮುವಾದ ಎನ್ನಲಾಗುತ್ತದೆ. ಇಂತಹ ಪದಗಳು ಹಿಂದೂಗಳನ್ನು ಕೋಮುವಾದಿಕರಿಸುವಂತಹ ಶಬ್ಧಗಳು. ಸಿಂಗಾಪೂರ ಕೂಡ ಇಂತಹ ಶಬ್ಧಗಳನ್ನು ನಿಷೇಧಿಸಿದೆ ಎಂದರು.

  ಇದನ್ನು ಓದಿ: ಮಹಿಳೆಯರ ಮೇಲಿನ ಗೌರವಕ್ಕೆ ದೇವೇಗೌಡರು ತೆನೆ ಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆ ಮಾಡಿದ್ರು, ಆದರೆ, ಇವರು...

  ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಇದು ನಿಮಗೂ ಗೊತ್ತಿರುವ ವಿಷಯ, ವಿಧಿ 32ಅನ್ನು ಯಾಕೆ ನಿರ್ದೇಶಿಸಿದ್ದೇವೆ. ಇಂತಹಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಬಳಿಕ ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆದಿದ್ದಾರೆ.
  ಕಾಂಗ್ರೆಸ್ ಪಕ್ಷದ ವಿರುದ್ಧದ ಆರೋಪಗಳು ನಿಖರವೆಂದು ತೋರಿಸಿದರೆ ಅದನ್ನು ನೋಂದಾಯಿಸುವಂತೆ ನ್ಯಾಯಾಲಯದಿಂದ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಲಾಗಿದೆ.

  ಅರ್ಜಿದಾರರು, ಪ್ರತಿಯೊಂದು ರಾಜಕೀಯ ಪಕ್ಷ, ಗುಂಪು ಮತ್ತು ವ್ಯಕ್ತಿಗೆ ಎಲ್ಲಾ ರೀತಿಯ ರಾಷ್ಟ್ರ ವಿರೋಧಿ ಸಂಗ್ರಹಣೆಗಳನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರವು ಸೂಚನೆಗಳನ್ನು ನೀಡಬೇಕು ಎಂದು ಕೋರಿದ್ದರು.

  ಇದನ್ನು ಓದಿ: 6 ತಿಂಗಳು ಮಾತ್ರ ರಕ್ಷ ರಾಮಯ್ಯಗೆ ಸ್ಥಾನ, ಬಳಿಕ ನಲಪಾಡ್​​ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ

  ಇನನು ಈ ಟೂಲ್​ಕಿಟ್​ ಆರೋಪವನ್ನು ಅಲ್ಲಗಳೆದಿದ್ದ ಕಾಂಗ್ರೆಸ್ ಬಿಜೆಪಿ ನಕಲಿ ಟೂಲ್​ಕಿಟ್​ ಸೃಷ್ಟಿಸುತ್ತಿದೆ ಎಂದು ಆರೋಪಿಸಿತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಕಾಂಗ್ರೆಸ್​ ಕೆಡಿಸಲು ಮುಂದಾಗಿದೆ. ಇದಕ್ಕಾಗಿ ಟೂಲ್​ ಕಿಟ್​ ಪಿತೂರಿ ನಡೆಸುತ್ತಿದೆ ಎಂಬ ದಾಖಲೆಯನ್ನು ಬಿಜೆಪಿ ನಾಯಕರು ಆರೋಪಿಸಿದ್ದರು.

  ಬಿಜೆಪಿ ವಕ್ತಾರ ಸಂಬಿತ್​ ಪಾತ್ರ ಮತ್ತು ರಾಮನ್​ ಸಿಂಗ್​ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಚತ್ತೀಸ್​ಗಢದಲ್ಲಿ ಪ್ರಕರಣ ದಾಖಲಿಸಿದ್ದರು. ಚತ್ತೀಸ್​ಗಢ ಹೈಕೋರ್ಟ್ ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಎಫ್‌ಐಆರ್ ಅನ್ನು ಸ್ಥಗಿತಗೊಳಿಸಿತ್ತು

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: