Supreme Court: ಬಳ್ಳಾರಿಯ ಬಾಲಕಿಗೆ 53 ಲಕ್ಷ ಪರಿಹಾರ; ಸುಪ್ರೀಂ ಆದೇಶ

ಬಾಲಕಿಯು ಇಡೀ ಜೀವನದಲ್ಲಿ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾಳೆ. ಮದುವೆಯ ಆಸೆಯನ್ನು ಕೈಬಿಡಬೇಕಾಗಿದೆ. ಬಾಲಕಿಯ ದೈಹಿಕ ಪರಿಸ್ಥಿತಿಯನ್ನು ಆಧರಿಸಿ ಕೃತಕ ಅಂಗಗಳನ್ನೂ ಜೋಡಿಸುವಂತಿಲ್ಲ ಎಂದು ಬಾಲಕಿಯ ಪರ ವಕೀಲರು ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿದ್ದರು.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

  • Share this:
    ದೆಹಲಿ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯವಾಗಿದ್ದ ಕರ್ನಾಟಕದ ಬಾಲಕಿಗೆ ಬರೋಬ್ಬರಿ 10 ವರ್ಷಗಳ ನಂತರ 53.07 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ (Supreme Court) ಆದೇಶ ಪ್ರಕಟಿಸಿದೆ. 10 ವರ್ಷಗಳ ಹಿಂದೆ ಬಳ್ಳಾರಿಯ (Ballari) ಕುಡಿತಿನಿಯಲ್ಲಿ ನಡೆದ ಅಪಘಾತದಲ್ಲಿ 6 ವರ್ಷದ ಬಾಲಕಿಯೊಬ್ಬಳಿಗೆ ಲಾರಿ ಡಿಕ್ಕಿ ಹೊಡೆದು ಕಾಲು ಕಳೆದುಕೊಂಡಿದ್ದಳು. ಅಲ್ಲದೇ ಗಂಭೀರ ಗಾಯಗಳಾಗಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಗಿತ್ತು.ಭವಿಷ್ಯದ ಹಣಕಾಸು (Futre Finance) ಗಳಿಕೆ ಮತ್ತು ಮದುವೆ ನಿರೀಕ್ಷೆಗಳ ಕನಸುಗಳನ್ನು ಬಾಲಕಿ ಕೈಬಿಡುವಂತಾಗಿತ್ತು. ಅಲ್ಲದೇ ವೈದ್ಯಕೀಯ ವೆಚ್ಚ, ನೋವು ಮತ್ತು ಸಂಕಟದಿಂದಾಗಿ ದಿನಕಳೆಯುವಂತಾಗಿತ್ತು. 

    ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಈ ಪರಿಹಾರ ನೀಡುವಂತೆ ಆದೇಶ ಪ್ರಕಟಿಸಿದೆ.

    ಪರಿಹಾರ ಹೆಚ್ಚಿಸಿದ್ದ ಹೈಕೋರ್ಟ್
    ಈ   ಮೂಲಕ ಸುಪ್ರೀಂಕೋರ್ಟ್ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯು ನೀಡಿದ್ದ 8.9 ಲಕ್ಷ ರೂ.ಗಳಿಂದ 13.65 ಲಕ್ಷಕ್ಕೆ ಹೆಚ್ಚಿಸಿತ್ತು. ಇದೀಗ ಸುಪ್ರೀಂಕೋರ್ಟ್ ಈ ಪರಿಹಾರ ಆದೇಶವನ್ನು 53.07 ಲಕ್ಷಕ್ಕೆ ಹೆಚ್ಚಿಸಿದಂತಾಗಿದೆ.

    ಬಾಲಕಿ ಪರ ವಕೀಲರ ಮನವಿ ಅಂಗೀಕಾರ
    ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರ ಪೀಠವು ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಿ ತಮ್ಮ ವಕೀಲರಾದ ಸಂಜಯ್ ಎಂ ನುಲಿ ಮೂಲಕ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿದೆ.

    ಬಾಲಕಿ ಜೀವನದಲ್ಲಿ ಇಷ್ಟೆಲ್ಲ ಕಷ್ಟ ಅನುಭವಿಸಬೇಕು
    ಬಾಲಕಿಯು ಇಡೀ ಜೀವನದಲ್ಲಿ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾಳೆ. ಮದುವೆಯ ಆಸೆಯನ್ನು ಕೈಬಿಡಬೇಕಾಗಿದೆ. ಬಾಲಕಿಯ ದೈಹಿಕ ಪರಿಸ್ಥಿತಿಯನ್ನು ಆಧರಿಸಿ ಕೃತಕ ಅಂಗಗಳನ್ನೂ ಜೋಡಿಸುವಂತಿಲ್ಲ ಎಂದು ಬಾಲಕಿಯ ಪರ ವಕೀಲರು ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿದ್ದರು. ದೇಶದ ಸರ್ವೋಚ್ಛ ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ಬಾಲಕಿಗೆ ನೀಡಬೇಕಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆದೇಶ ಪ್ರಕಟಿಸಿದೆ. 

    ಸುಪ್ರೀಂಕೋರ್ಟ್​ಗೆ ಹೊಸ ಮುಖ್ಯ ನ್ಯಾಯಮೂರ್ತಿ ನೇಮಕ
    ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ. ವಿಶೇಷವೆಂದರೆ ಉದಯ್ ಉಮೇಶ್ ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಏರಿದ ಭಾರತೀಯ ನ್ಯಾಯಾಂಗದ ಎರಡನೇ ಮುಖ್ಯಸ್ಥರಾಗಲಿದ್ದಾರೆ. 1971ರ ಜನವರಿಯಲ್ಲಿ 13ನೇ ಸಿಜೆಐ ಆದ ನ್ಯಾಯಮೂರ್ತಿ ಎಸ್ ಎಂ ಸಿಕ್ರಿ ಅವರ ನಂತರ ನ್ಯಾಯಮೂರ್ತಿ ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಏರಲಿದ್ದಾರೆ.

    CJI NV Ramana recommends Justice Uday U Lalit name as his successor and wrote letter to Kiran Rijiju
    ಸಿಜೆಐ ಎನ್​ವಿ ರಮಣ ಮತ್ತು ನ್ಯಾಯಮೂರ್ತಿ ಯು ಯು ಲಲಿತ್


    ಇದನ್ನೂ ಓದಿ: Wild Animals: ವಿದೇಶಿ ಪ್ರಾಣಿಗಳ ಕಳ್ಳಸಾಗಣೆಗೆ ಬ್ರೇಕ್! ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?

    ಹಾಲಿ ಸಿಜೆಐ ನ್ಯಾಯಮೂರ್ತಿ ಎನ್‌.ವಿ ರಮಣ ಅವರು ಅಧಿಕಾರ ತ್ಯಜಿಸಿದ ನಂತರ ನ್ಯಾಯಮೂರ್ತಿ ಲಲಿತ್ ಅವರು ಆಗಸ್ಟ್ 27ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಸೇವೆ
    49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಲಲಿತ್ ಅವರು ಸಿಜೆಐ ಆಗಿ ಮೂರು ತಿಂಗಳಿಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಲಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ರಂದು ನಿವೃತ್ತರಾಗಲಿದ್ದು, ಆ ನಂತರ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲಿದ್ದಾರೆ.

    ಇದನ್ನೂ ಓದಿ: Free Fall of Freebies: ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಂದ ಉಚಿತ ಕೊಡುಗೆ; ಸುಪ್ರೀಂಕೋರ್ಟ್ ಮಹತ್ವದ ಸೂಚನೆ

    ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಎನ್‌ವಿ ರಮಣ ಅವರು ನಿವೃತ್ತರಾದ ನಂತರ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್  ಅವರು ಆಗಸ್ಟ್ 27 ರಂದು ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ  ಅಧಿಕಾರ ವಹಿಸಿಕೊಳ್ಳಲಿದ್ದಾರೆ.  ನವೆಂಬರ್ 8 ರಂದು ಅಧಿಕಾರದಿಂದ ನಿರ್ಗಮಿಸಲಿರುವ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು 65 ನೇ ವರ್ಷಕ್ಕೆ ಕಾಲಿಡಲಿದ್ದಾರೆ.
    Published by:guruganesh bhat
    First published: