• Home
  • »
  • News
  • »
  • national-international
  • »
  • Supreme Court: ನ್ಯಾಯಮೂರ್ತಿಗಳನ್ನೇ "ಆತಂಕವಾದಿ" ಎಂದ ವ್ಯಕ್ತಿ! ಬೇಷರತ್ ಕ್ಷಮೆಯಾಚನೆಗೆ ಕೋರ್ಟ್​ ಆದೇಶ

Supreme Court: ನ್ಯಾಯಮೂರ್ತಿಗಳನ್ನೇ "ಆತಂಕವಾದಿ" ಎಂದ ವ್ಯಕ್ತಿ! ಬೇಷರತ್ ಕ್ಷಮೆಯಾಚನೆಗೆ ಕೋರ್ಟ್​ ಆದೇಶ

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

ಇದೇ ಸಂದರ್ಭದಲ್ಲಿ ನ್ಯಾ. ಚಂದ್ರಚೂಡ್ ಅವರಿದ್ದ ಪೀಠವು ವ್ಯಕ್ತಿಯನ್ನು ಕುರಿತು ನಿಮ್ಮನ್ನು ಕೆಲವು ತಿಂಗಳುಗಳವರೆಗೆ ಜೈಲಿನಲ್ಲಿರಿಸಿದಾಗ ನಿಮಗೆ ನಿಮ್ಮ ತಪ್ಪಿನ ಅರಿವಾಗುತ್ತದೆ ಎಂದು ಹೇಳುವ ಮೂಲಕ ತನ್ನ ಮುನಿಸನ್ನು ಹೊರಹಾಕಿತು.

  • Share this:

ಸಾಮಾನ್ಯವಾಗಿ ಕೋರ್ಟ್ (Court) ಕಲಾಪಗಳೆಂದಾಗ ಒಂದು ರೀತಿಯ ಅಸಹನೆ ಸಹಜವಾಗಿ ಉಂಟಾಗುತ್ತದೆ ಕಾರಣ ಪ್ರಕರಣಗಳು ಎಷ್ಟು ವಿಳಂಬವಾಗಬಹುದೇನೋ ಅಂತ. ಆದರೂ ನ್ಯಾಯಾಲಯಗಳು ತಮ್ಮ ಶಕ್ತಿಗನುಗುಣವಾಗಿ ವಿಚಾರಣೆಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸುತ್ತಿರುತ್ತವೆ. ಹಾಗಾಗಿ ಕೋರ್ಟ್ ವಿಚಾರಣೆಗಳೆಂದಾಗ ಸಹನೆ/ತಾಳ್ಮೆ ಇರುವುದು ಅವಶ್ಯಕವಗಿರುತ್ತದೆ. ಆದರೆ, ಕೆಲವೊಮ್ಮೆ ಜನರು ತಮ್ಮ ಕೋಪದ ಕೈವಶವಾಗಿ ಮಾಡಬಾರದ ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಸದ್ಯ ದೆಹಲಿಯ (Delhi) ಸರ್ವೋಚ್ಛ ನ್ಯಾಯಾಲಯದಲ್ಲೂ (Supreme Court) ಸಹ ಕಳೆದ ಶುಕ್ರವಾರದಂದು ಇಂತಹುದ್ದೇ ಒಂದು ಪ್ರಕರಣ ನಡೆದಿದ್ದು ವ್ಯಕ್ತಿಯೊಬ್ಬ ನ್ಯಾಯಾಲಯದಿಂದ ಒಂದು ರೀತಿಯಲ್ಲಿ ಚೀಮಾರಿ ಹಾಕಿಸಿಕೊಂಡ ಘಟನೆ ನಡೆದಿದೆ.


ಅಷ್ಟೇ ಅಲ್ಲದೆ, ನ್ಯಾಯಾಲಯವು ಆ ವ್ಯಕ್ತಿಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸಿದಾಗಲೇ ತಾನು ಮಾಡಿರುವ ತಪ್ಪಿನ ಅರಿವಾಗುತ್ತದೆ ಎಂಬ ಸಿಟ್ಟನ್ನು ಹೊರಹಾಕಿದೆ. ಕಳೆದ ಶುಕ್ರವಾರದಂದು ವ್ಯಕ್ತಿಯೊಬ್ಬ ಸುಪ್ರೀಂ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರನ್ನು "ಆತಂಕವಾದಿ" ಎಂದು ಹೇಳುವ ಮೂಲಕ ತನ್ನ ಕಾಲಿನ ಮೇಲೆ ತಾನೇ ಪೆಟ್ಟು ಹಾಕಿಕೊಂಡ ಘಟನೆ ನಡೆದಿದೆ.


ಬೇಷರತ್ ಕ್ಷಮಾಪಣೆ ಕೋರಲು ತಿಳಿಸಿದ ಕೋರ್ಟ್
ಬಾಕಿ ಇದ್ದ ಸೇವಾ ಪ್ರಕರಣವೊಂದನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ವ್ಯಕ್ತಿಯೊಬ್ಬ ಸರ್ವೋಚ್ಛ ನ್ಯಾಯಾಲಯದಲ್ಲಿ ತ್ವರಿತ ಆಲಿಸುವಿಕೆಯ ಬಗ್ಗೆ ಮನವಿ ಮಾಡಿದ್ದ. ಪ್ರಕರಣ ಆಲಿಸುವ ಸಂದದರ್ಭದಲ್ಲಿ ಆ ದಾವೇದಾರನನ್ನು ಪ್ರತಿನಿಧಿಸಿದ್ದ ವಕೀಲರು ಕೋರ್ಟ್ ಅನ್ನು ಕುರಿತು ತಾವು ತಮ್ಮ ಕಕ್ಷೀದಾರರಿಂದ ಬೇಕಾಗಿದ್ದ ಫೈಲ್ ಅನ್ನು ಪಡೆದು ನೋಡಿದ ನಂತರ ಅವರಿಗೆ ಬೇಷರತ್ ಕ್ಷಮಾಪಣೆ ಕೋರಬೇಕೆಂದು ಹೇಳಿರುವುದಾಗಿ ತಿಳಿಸಿದರು.


ಕೋರ್ಟ್ ವಕೀಲರನ್ನು ಕುರಿತು ದಾವೇದಾರನು ಬೇಷರತ್ ಕ್ಷಮಾಪಣೆ ಕೋರಿದಾಗ ಮಾತ್ರ ಅವನನ್ನು ಪ್ರತಿನಿಧಿಸಲು ಅನುಮತಿ ನೀಡುವುದಾಗಿ ಹೇಳಿತು. ಆಗ ದಾವೇದಾರನು ನ್ಯಾಯಮೂರ್ತಿಗಳ ಎದುರು ಕ್ಷಮಾಪಣೆ ಕೋರುತ್ತ ತಾನು "ಅತಿಶಯವಾದ ಮಾನಸಿಕ ಆತಂಕದಿಂದ ಬಳಲುತ್ತಿದ್ದೆ ಎಂದು ಹೇಳುತ್ತ, ನನ್ನನ್ನು ಕ್ಷಮಿಸಿ" ಎಂದು ತಪ್ಪೊಪ್ಪಿಗೆ ಕೊಂಡಿದ್ದಾನೆ.


ಶೋಕಾಸ್ ನೋಟಿಸ್ ಜಾರಿ
ಒಟ್ಟಿನಲ್ಲಿ ಆ ವ್ಯಕ್ತಿ ನ್ಯಾಯಮೂರ್ತಿಗಳ ಆತಂಕವಾದಿ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದನೆನ್ನಲಾಗಿದೆ. ಇನ್ನು ಮುಂದುವರೆದಂತೆ ನ್ಯಾಯಮೂರ್ತಿಗಳು ವ್ಯಕ್ತಿಯನ್ನು ಕುರಿತು, "ಇದೊಂದು ಹಗರಣ" ಎಂದು ಹೇಳುವ ಮೂಲಕ "ನಾವು ನಿಮಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತ "ನಿಮ್ಮ ಮೇಲೆ ಯಾಕೆ ಕ್ರಿಮಿನಲ್ ಅವಹೇಳನಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬಾರದು"ಎಂದು ಹೇಳಿದೆ.


ಇದನ್ನೂ ಓದಿ: Vande Bharat Express Train: 2023ರ ಬಜೆಟ್​ನಲ್ಲಿ 300ರಿಂದ 400 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಘೋಷಣೆಯ ಸಾಧ್ಯತೆ


ಇದೇ ಸಂದರ್ಭದಲ್ಲಿ ನ್ಯಾ, ಡಿ.ವೈ ಚಂದ್ರಚೂಡ್ ಅವರಿದ್ದ ಪೀಠವು, ನೀವು ನ್ಯಾಯಮೂರ್ತಿ ಆತಂಕವಾದಿ ಎಂದು ಕರೆದಿದ್ದೀರಿ. ನ್ಯಾಯಾಧೀಶರು ಹಾಗೂ ಪ್ರೊಸಿಡೀಂಗ್​ಗೆ ಯಾವ ಸಂಬಂಧ? ಜಡ್ಜ್ ಗಳ ಮೇಲೆ ಹೀಗೆ ಆರೋಪ ಹೊರಿಸಲಾಗುತ್ತದೆಯೆ? ಇದು ತುಂಬ ಕೆಟ್ಟದಾಗಿದ್ದು ನಿಜಕ್ಕೂ ಶಾಕಿಂಗ್ ಆಗಿದೆ ಎಂದು ಪೀಠ ಹೇಳಿತು.


ಜೈಲಲ್ಲಿಟ್ಟರೆ ತಪ್ಪಿನ ಅರಿವಾಗುತ್ತೆ
ಮುಂದುವರೆಸುತ್ತ ಪೀಠವು ನಾವು ಅರ್ಲಿ ಹಿಯರಿಂಗ್ ಅನುಮೋದಿಸಲು ಉತ್ಸುಕರಾಗಿಲ್ಲ ಹಾಗೂ ನಿಮ್ಮ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದೇ ಸಂದರ್ಭದಲ್ಲಿ ನ್ಯಾ. ಚಂದ್ರಚೂಡ್ ಅವರಿದ್ದ ಪೀಠವು ವ್ಯಕ್ತಿಯನ್ನು ಕುರಿತು ನಿಮ್ಮನ್ನು ಕೆಲವು ತಿಂಗಳುಗಳವರೆಗೆ ಜೈಲಿನಲ್ಲಿರಿಸಿದಾಗ ನಿಮಗೆ ನಿಮ್ಮ ತಪ್ಪಿನ ಅರಿವಾಗುತ್ತದೆ ಎಂದು ಹೇಳುವ ಮೂಲಕ ತನ್ನ ಮುನಿಸನ್ನು ಹೊರಹಾಕಿತು.


ಇದನ್ನೂ ಓದಿ: Nitin Gadkari: ಭತ್ತದ ಹುಲ್ಲು ಬಳಸಿ ಡಾಂಬರು ರಸ್ತೆ ನಿರ್ಮಾಣ; ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ


ಅಲ್ಲದೆ, ನ್ಯಾಯಾಧೀಶರು, ಮುಂದಿನ ವಿಚಾರಣೆಗಾಗಿ ವ್ಯಕ್ತಿಯ ವಿರುದ್ಧ ನೋಟಿಸ್ ಜಾರಿ ಮಾಡಲು ಸೂಚನೆ ನೀಡುತ್ತ ಮುಂದಿನ ಕೆಲವು ವಾರಗಳಿಗೆ ವಿಚಾರಣೆಯನ್ನು ಮುಂದೂಡಿ ಅಷ್ಟರಲ್ಲಿ ಆ ವ್ಯಕ್ತಿಯು ತನ್ನ ಮೇಲೆ ಜಾರಿಯಾಗಿರುವ ನೋಟಿಸಿಗೆ ಸಮರ್ಪಕವಾಗಿ ಉತ್ತರಿಸುತ್ತ ಅಫಿಡವಿಟ್ ಸಲ್ಲಿಸಲು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕೋರ್ಟ್ ನೀವು ಯಾವುದೇ ಸಕಾರಣಗಳಿಲ್ಲದೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಈ ರೀತಿ ಆರೋಪ ಮಾಡಲಾಗದು ಎಂದು ಕಟುವಾಗಿ ಹೇಳಿದೆ.

Published by:ಗುರುಗಣೇಶ ಡಬ್ಗುಳಿ
First published: