Street Dogs: ಬೀದಿನಾಯಿಗಳಿಗೂ ಆಹಾರದ ಹಕ್ಕಿದೆ! ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

Supreme Court: ಪ್ರಾಣಿಗಳಿಗೂ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿದೆ. ಈಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ ದೆಹಲಿ ಹೈಕೋರ್ಟ್, ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ ಎಂದು ಆದೇಶ ನೀಡಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೀದಿಗಳಲ್ಲಿ ವಾಸಿಸುವ ನಾಯಿಗಳಿಗೆ (Street Dogs) ಆಹಾರವನ್ನು ಪಡೆದುಕೊಳ್ಳುವ ಹಕ್ಕು ಮತ್ತು ನಾಗರಿಕರಿಗೆ ಬೀದಿನಾಯಿಗಳಿಗೆ ಆಹಾರ ನೀಡುವ ಹಕ್ಕುಗಳ ಕುರಿತು ದೆಹಲಿ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್  ಶುಕ್ರವಾರ ತಡೆಯಾಜ್ಞೆ ನೀಡಿದೆ. ಬೀದಿನಾಯಿಗಳಿಗೆ ಆಹಾರ (Food to Street Dogs) ನೀಡುವುದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ (Delhi High Court) ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ (Supreme Court) ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board of India) ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

ಜೂನ್ 24 2021 ರಲ್ಲಿ, ದೆಹಲಿ ಹೈಕೋರ್ಟ್ ಆದೇಶವು ಬೀದಿ ನಾಯಿಗಳಿಗೆ ಆಹಾರ ನೀಡುವ ಕುರಿತು ಹಲವು ನಿರ್ದೇಶನಗಳನ್ನು ನೀಡಿತ್ತು. ದೆಹಲಿಯ ಹೈಕೋರ್ಟ್ನ ಈ ಆದೇಶಕ್ಕೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಅನಿರುದ್ಧ ಬೋಸ್ ಅವರ ನೇತೃತ್ವದ ಪೀಠವು ತಡೆಯಾಜ್ಞೆ AWBI ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ.

ಬೀದಿನಾಯಿಗಳಿಗೆ ಆಹಾರ ನೀಡುವ ಹಕ್ಕಿದೆ!
ಪ್ರಾಣಿಗಳಿಗೂ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿದೆ. ಈಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ ದೆಹಲಿ ಹೈಕೋರ್ಟ್, ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ ಎಂದು ಆದೇಶ ನೀಡಿತ್ತು. ನಾಗರಿಕರಿಗೆ ಸಮುದಾಯ ಪ್ರದೇಶಗಳಲ್ಲಿ ವಾಸಿಸುವ ಬೀದಿ ನಾಯಿಗಳಿಗೆ ಆಹಾರ ನೀಡುವ ಹಕ್ಕಿದೆ. ಈ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಬೇಕು ಎಂದು ಆದೇಶ ನೀಡಿತ್ತು.

ಆದರೆ ಅದು ಇತರರ ಹಕ್ಕುಗಳಿಗೆ ಅಡ್ಡಿಯಾಗದಂತೆ ಅಥವಾ ಯಾವುದೇ ಹಾನಿಯನ್ನುಂಟು ಮಾಡದಂತೆ ಖಚಿತಪಡಿಸಿಕೊಳ್ಳಬೇಕು. ಹಕ್ಕನ್ನು ಚಲಾಯಿಸುವಾಗ, ಸಮಾಜದಲ್ಲಿನ ಇತರರ ಕುರಿತು ಕಾಳಜಿ ಮತ್ತು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಸಹ ದೆಹಲಿ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖ ಮಾಡಿತ್ತು. ಆದರೆ ದೆಹಲಿ ಹೈಕೋರ್ಟ್ನ ಈ ಆದೇಶಕ್ಕೆ ಇದೀಗ ತಡೆ ಬಿದ್ದಂತಾಗಿದೆ.

Freedom Fighter: ಸ್ವಾತಂತ್ರ್ಯ ಹೋರಾಟಗಾರರ ಆಸ್ತಿ ಮುಟ್ಟುಗೋಲು, 5 ಕೋಟಿ ಪರಿಹಾರಕ್ಕೆ ಸುಪ್ರೀಂ ಆದೇಶ

ನಿವಾಸಿ ಕಲ್ಯಾಣ ಸಂಘಗಳು ಅಥವಾ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್ನೊಂದಿಗೆ ಸಮಾಲೋಚಿಸಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಗೊತ್ತುಪಡಿಸಿದ ಪ್ರದೇಶಗಳಲ್ಲಿ ಬೀದಿಗಳಲ್ಲಿ ವಾಸಿಸುವ ನಾಯಿಗಳಿಗೆ ಆಹಾರವನ್ನು ನೀಡಬೇಕು. ಬೀದಿನಾಯಿಗಳಿಗೆ ಆಹಾರ ನೀಡಲು ಗೊತ್ತುಪಡಿಸಿದ ಪ್ರದೇಶವನ್ನು ನಿರ್ಧರಿಸುವಾಗ, ಮುನ್ಸಿಪಲ್ ಕಾರ್ಪೊರೇಷನ್​ಗಳಿಗೆ ಮಾಹಿತಿ ಒದಗಿಸಬೇಕು ಎಂದಿತ್ತು.

ಬೀದಿ ನಾಯಿಯೂ ಆ ಪ್ರದೇಶದ ನಿವಾಸಿ!
ಪ್ರತಿಯೊಂದು ಪ್ರದೇಶಗಳಲ್ಲಿ ವಾಸಿಸುವ ನಾಯಿಯೂ ಸಹ ಅಲ್ಲಿಯ ನಿವಾಸಿ ಎಂದೇ ಪರಿಗಣಿಸಬೇಕು. ಆದ್ದರಿಂದ ಸಮುದಾಯದ ನಾಯಿಗಳಿಗೆ ತಮ್ಮ ಪ್ರದೇಶದೊಳಗಿನ ಸ್ಥಳಗಳಲ್ಲಿ ಆಹಾರ ಮತ್ತು ಒಲವು ನೀಡಬೇಕು ಎಂಬ ಅಂಶವನ್ನು ದೆಹಲಿ ಹೈಕೋರ್ಟ್ ಒತ್ತುನೀಡಿ ಈ ಆದೇಶ ನೀಡಿತ್ತು.

ಈ ಪ್ರದೇಶದಲ್ಲಿ ಪಾಲನೆ ಮಾಡುವವರು ಅಥವಾ ಬೀದಿನಾಯಿ ಸಾಕಣೆದಾರರ ಅನುಪಸ್ಥಿತಿಯಲ್ಲಿ ಪ್ರತಿ ಪ್ರದೇಶದಲ್ಲಿನ ಪ್ರತಿಯೊಂದು ಸಮುದಾಯದ ನಾಯಿಯು ಆಹಾರ ಮತ್ತು ನೀರಿನ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವುದು ಪ್ರತಿ ನಿವಾಸಿ ಕಲ್ಯಾಣ ಸಂಘಗಳು ಅಥವಾ ಮುನ್ಸಿಪಲ್ ಕಾರ್ಪೊರೇಶನ್ ಕರ್ತವ್ಯ ಮತ್ತು ಬಾಧ್ಯತೆಯಾಗಿದೆ ಎಂದು ಸಹ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.

Marriage: ಗಂಡನೊಂದಿಗೆ ಸೆಕ್ಸ್​​ಗೆ ಒಲ್ಲೆ ಎಂದ ಹೆಂಡತಿ.. ಹೈಕೋರ್ಟ್ ಹೇಳಿದಿಷ್ಟು..

ಸಮಾಜದಲ್ಲಿನ ಮಾನವ-ಪ್ರಾಣಿ ಸಂಘರ್ಷವನ್ನು ಪರಿಹರಿಸುವ ಉದ್ದೇಶವನ್ನು ಹೊಂದಿರುವ ಲಾಭರಹಿತ ಸಂಘಟನೆ ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಅಂಡ್ ಅನಿಮಲ್ಸ್ ಈ ಅರ್ಜಿಯನ್ನು ಸಲ್ಲಿಸಿತ್ತು. ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಅಂಡ್ ಅನಿಮಲ್ಸ್ನ ಸಹ-ಸಂಸ್ಥಾಪಕಿ ಮೇಘನಾ ಉನಿಯಾಲ್ ಅವರು ದೆಹಲಿ ಹೈಕೋರ್ಟ್ನ ಆದೇಶದಿಂದ ನೊಂದಿದ್ದೇನೆ ಎಂದು ಹೇಳಿದ್ದರು.

ಅಲ್ಲದೇ ದೆಹಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಸಂಜಯ್ ಸರಿನ್ ಅವರು ಅರ್ಜಿದಾರರಾದ ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಮತ್ತು ಅನಿಮಲ್ಸ್ ಪರವಾಗಿ ವಾದ ಮಂಡಿಸಿದರು. ವಕೀಲ ತರುಣ್ ರಾಣಾ ಅರ್ಜಿದಾರರ ಸಂಘಟನೆಯನ್ನು ಪ್ರತಿನಿಧಿಸಿದ್ದರು.
Published by:guruganesh bhat
First published: