ದೆಹಲಿ(ಜು.01): ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳು ಗಲ್ಫ್ ರಾಷ್ಟ್ರಗಳಲ್ಲಿ (Gulf Nations) ಭಾರೀ ಆಕ್ರೋಶ ಮತ್ತು ದೇಶದಲ್ಲಿ ಪ್ರತಿಭಟನೆಗಳನ್ನು (Protest) ಉಂಟುಮಾಡಿದೆ. ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ (Nupur Sharma) ಅವರು ಇಡೀ ದೇಶದ ಕ್ಷಮೆ (Apology) ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಹೇಳಿದೆ. ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್ ಹೇಳಿದೆ. ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
ದೇಶದ ಭದ್ರತೆಗೇ ಬೆದರಿಕೆಯಾದರಾ ನೂಪುರ್?
ಅವಳು ಬೆದರಿಕೆಗಳನ್ನು ಎದುರಿಸುತ್ತಿದ್ದಾಖೆ ಅಥವಾ ಅವಳು ಭದ್ರತೆಗೆ ಬೆದರಿಕೆಯಾಗಿದ್ದಾಳಾ? ಅವಳು ದೇಶದಾದ್ಯಂತ ಭಾವನೆಗಳನ್ನು ಹೊತ್ತಿಸಿದ ರೀತಿಯಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನು ಕಾಣಬಹುದು. ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆ ಈ ಮಹಿಳೆ ಮಾತ್ರ ಜವಾಬ್ದಾರಳು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ಕ್ಷಮೆ ಕೇಳುವಂತೆ ನೂಪುರ್ ಶರ್ಮಾಗೆ ಸೂಚನೆ ನೀಡಲಾಗಿದ್ದು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ಕೊಟ್ಟಿದೆ. ನೂಪೂರ್ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿದೆ. ನೂಪುರ್ ಶರ್ಮಾ ದೇಶದ ಕ್ಷಮೆ ಕೇಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೋರ್ಟ್ ತರಾಟೆ
ನೂಪುರ್ ಶರ್ಮಾರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು ನೂಪುರ್ ಶರ್ಮಾ ಹೇಳಿಕೆಯಿಂದಲೇ ಉದಯಪುರದ ಘಟನೆ ನಡೆದಿದೆ ಎಂದು ಹೇಳಿದೆ. ನೂಪುರ್ ಶರ್ಮಾ ಬೇಜವಾಬ್ದಾರಿ ಹೇಳಿಕೆಯೇ ಉದಯಪುರ ಘಟನೆಗೆ ಕಾರಣ. ನೂಪುರ ಶರ್ಮಾ ಹೇಳಿಕೆ ಹಿಂತೆಗೆದುಕೊಂಡಿದ್ದು ಬಹಳ ತಡವಾಗಿ. ನೂಪುರ್ ಶರ್ಮಾ ದೂರಿನ ಆಧಾರದ ಮೇಲೆ ಓರ್ವ ವ್ಯಕ್ತಿಯ ಬಂಧನ ಆಗಿದೆ. ಆದರೆ ನೂಪುರ ಶರ್ಮಾ ಬಂಧನ ಏಕಾಗಿಲ್ಲ? ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: Presidential Election 2022: ರಾಷ್ಟ್ರಪತಿ ಆಗಲು 98 ಮಂದಿಯಿಂದ ನಾಮಪತ್ರ, ಮಾನ್ಯವಾಗಿದ್ದು ಇಬ್ಬರು ಮಾತ್ರ; ಏಕೆ?
ನೂಪೂರ್ ಶರ್ಮಾ ವಿರುದ್ಧ ಡಜನ್ ಎಫ್.ಐ.ಆರ್. ದಾಖಲಾದರೂ ಬಂಧನವಾಗಿಲ್ಲ. ದೇಶದಲ್ಲಿ ನಡೆಯುತ್ತಿರುವ ದುರ್ಘಟನೆಗೆ ನೂಪುರ ಶರ್ಮಾ ಹೊಣೆ. ಪಕ್ಷದ ವಕ್ತಾರೆ ಆದ ಕಾರಣದಿಂದ ಅಧಿಕಾರ ತಲೆಗೆ ಹತ್ತಿದೆ. ನೂಪೂರ್ ಶರ್ಮಾ ಧಾರ್ಮಿಕ ವ್ಯಕ್ತಿಯಲ್ಲ. ಎಲ್ಲ ಧರ್ಮದವರು ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ. ನೂಪುರ್ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ. ನೂಪುರ ಶರ್ಮಾ ಒಬ್ಬರೇ ಹಿಂಸಾಚಾರಗಳಿಗೆ ಜವಾಬ್ದಾರಿ ಎಂದು ನೂಪುರ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಹಿಗ್ಗಾಮಗ್ಗಾ ಜಾಡಿಸಿದೆ.
ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ
ನೂಪುರ ಶರ್ಮಾ ಹೈಕೋರ್ಟ್ ಗೆ ಹೋಗಿ ಅರ್ಜಿ ಸಲ್ಲಿಸಲಿ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನೂಪುರ ಶರ್ಮಾ ಮನವಿ ತಿರಸ್ಕರಿಸಿದೆ. ನೂಪುರ ಶರ್ಮಾಗೆ ದೆಹಲಿ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ಕೋರಿರಬೇಕು. ಇಷ್ಟು FIR ದಾಖಲಾದರೂ ದೆಹಲಿ ಪೊಲೀಸ್ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿರುವ ಕೋರ್ಟ್ ನೂಪೂರ್ ಶರ್ಮಾ ಬಂಧಿಸದ ದೆಹಲಿ ಪೊಲೀಸರಿಗೂ ಸುಪ್ರೀಂ ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ತಮ್ಮ ವಿರುದ್ಧದ ಎಲ್ಲ ಕೇಸ್ ಗಳನ್ನು ದೆಹಲಿಗೆ ವರ್ಗಾವಣೆ ಕೋರಿದ್ದ ನೂಪುರ ಶರ್ಮಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ