ಪರೀಕ್ಷೆಗಳ ಡಿಜಿಟಲೀಕರಣಕ್ಕೆ ಸುಪ್ರೀಂ ಕೋರ್ಟ್​ ಒತ್ತು, ಶೀಘ್ರದಲ್ಲೇ ಆನ್​ಲೈನ್​ ಪರೀಕ್ಷೆಗಳಿಗೆ ಅಂಕಿತ?

ಎಸ್​ಎಸ್​ಸಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿವೆ.ಇದನ್ನು ತಡೆಗಟ್ಟಲು ಕ್ರಮಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು

G Hareeshkumar | news18
Updated:January 10, 2019, 4:15 PM IST
ಪರೀಕ್ಷೆಗಳ ಡಿಜಿಟಲೀಕರಣಕ್ಕೆ ಸುಪ್ರೀಂ ಕೋರ್ಟ್​ ಒತ್ತು, ಶೀಘ್ರದಲ್ಲೇ ಆನ್​ಲೈನ್​ ಪರೀಕ್ಷೆಗಳಿಗೆ ಅಂಕಿತ?
ಸಾಂದರ್ಭಿಕ ಚಿತ್ರ
G Hareeshkumar | news18
Updated: January 10, 2019, 4:15 PM IST
ನವದೆಹಲಿ (ಜ.10) : ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್ ಲೈನ್​ ನಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರಶ್ನೆಪತ್ರಿಗಳು ಸೋರಿಕೆ ಹೆಚ್ಚಾಗಿದೆ. ಇದರಿಂದ ಪರೀಕ್ಷಾ ವ್ಯವಸ್ಥೆಯ ಮೇಲೆ ಜನಸಾಮಾನ್ಯರಲ್ಲಿ ಅಪನಂಬಿಕೆ ಮೂಡುವಂತಾಗಿದೆ. ಇದು ಕೇವಲ ಒಂದೋ ಎರಡೋ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಪರೀಕ್ಷಾ ವಿಧಾನಗಳಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಸಮಸ್ಯೆಯಾಗಿತ್ತು.

ಈ ಸಂಬಂಧ ಸುಪ್ರೀಂ ಕೋರ್ಟ್ ಇನ್ಪೋಸಿಸ್ ಸಹ ಸಂಸ್ಥಾಪಕ ಮತ್ತು ಇತ್ತೀಚೆಗಷ್ಟೇ ಭಾರತೀಯ ರಿಸರ್ವ್​ ಬ್ಯಾಂಕ್​ನ ಡಿಜಿಟಲ್​ ಪಾವತಿ ಸಮತಿಯ ಸದಸ್ಯರಾದ ನಂದನ್ ನೀಲೇಕಣಿ ಹಾಗೂ ಕಂಪ್ಯೂಟರ್ ವಿಜ್ಞಾನಿ ವಿಜಯ್ ಭಟ್ಕರ್ ನೇತೃತ್ವದಲ್ಲಿ ಸಮಿತಿ ಯೊಂದನ್ನು ರಚಿಸಿದ್ದು, ಈ ಸಮಿತಿಯು ಕೇಂದ್ರ ಸರ್ಕಾರಕ್ಕೆ ಆನ್​ ಲೈನ್ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಹೇಳಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಿಎಂ ಮೀನಾಮೇಷ !

ಈ  ಹೊಸ ವ್ಯವಸ್ಥೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ. ಎಸ್​ಎಸ್​ಸಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿವೆ, ಇದನ್ನು ತಡೆಗಟ್ಟಲು ಕ್ರಮಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈಗಾಗಲೇ ಐಐಟಿ- ಜೆಇಟಿ, ನೀಟ್ ಸೇರಿದಂತೆ ಕೆಲವೇ ಪರೀಕ್ಷೆಗಳು ಮಾತ್ರ ಆನ್​ಲೈನ್ ನಲ್ಲಿ ನಡೆಸಲಾಗುತ್ತಿದೆ. ಉಳಿದ ಎಲ್ಲಾ ಪರೀಕ್ಷೆಗಳು ಪ್ರಶ್ನೆಪತ್ರಿಕೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತಿದೆ.

ಈ ವರ್ಷದಿಂದ ಆನ್ ಲೈನ್​ನಲ್ಲಿ ವೃತ್ತಿಪರ ಕೋರ್ಸ್​ಗಳ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸಿದೆ. ಎಂಜಿನಿಯರಿಂಗ್, ಕೃಷಿ ಮತ್ತು ಪಶು ವೈದ್ಯ ವಿಜ್ಞಾನ, ಅರ್ಕಿಟೆಕ್ಟರ್ ಮತ್ತಿತರ ಕೋರ್ಸ್ ಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಲಾಗುತ್ತದೆ. ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಮಾಹಿತಿ ಕೇಂದ್ರ ಈಗಾಗಲೇ ಸಾಪ್ಟ್ ವೇರ್ ಸಿದ್ಧಪಡಿಸಿದೆ.

ಇದನ್ನೂ ಓದಿ :  ಕುತೂಹಲ ಮೂಡಿಸಿದ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ; ರೈ ಬೆನ್ನಿಗೆ ಆಮ್ ಆದ್ಮಿ?

ನಿನ್ನೆಯಷ್ಟೆ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಇನ್ನು ಮುಂದೆ ಸಿಇಟಿ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಎಲ್ಲಾ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಲಾಗುವುದು ಎಂದು ಹೇಳಿದ್ದರು.
Loading...

"ಕೆಇಎ ನಡೆಸುವ ಎಲ್ಲಾ ನೇಮಕಾತಿ ಹಾಗೂ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಲು ನಾವು ನಿರ್ಧರಿಸಿದ್ದೇವೆ," ಎಂದಿದ್ದರು. ಆದರೆ ಸಿಇಟಿ ಆನ್ ಲೈನ್ ಪರೀಕ್ಷೆಯೋ ಅಥವಾ ಬರೀ ಕಂಪ್ಯೂಟರ್ ಆಧಾರಿತವೊ ಎಂಬುದನ್ನು ಮಾತ್ರ ಸಚಿವರು ಸ್ಪಷ್ಟಪಡಿಸಿರಲಿಲ್ಲ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ