News18 India World Cup 2019

'ಚೌಕಿದಾರ್ ಚೋರ್​ ಹೈ' ಎಂದು ಸುಪ್ರೀಂಕೋರ್ಟೇ ಹೇಳಿದೆ ಎಂದ ರಾಹುಲ್ ಗಾಂಧಿಯಿಂದ ವಿವರಣೆ ಕೇಳಿದ ಸರ್ವೊಚ್ಚ ನ್ಯಾಯಾಲಯ

ಇಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ “ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ತಪ್ಪಾಗಿ ಅರ್ಥೈಸಿದ್ದಾರೆ” ಎಂದು ರಾಹುಲ್ ವಿರುದ್ದ ಹರಿಹಾಯ್ದಿದೆ.

MAshok Kumar | news18
Updated:April 15, 2019, 4:44 PM IST
'ಚೌಕಿದಾರ್ ಚೋರ್​ ಹೈ' ಎಂದು ಸುಪ್ರೀಂಕೋರ್ಟೇ ಹೇಳಿದೆ ಎಂದ ರಾಹುಲ್ ಗಾಂಧಿಯಿಂದ ವಿವರಣೆ ಕೇಳಿದ ಸರ್ವೊಚ್ಚ ನ್ಯಾಯಾಲಯ
ಸಾಂದರ್ಭಿಕ ಚಿತ್ರ
MAshok Kumar | news18
Updated: April 15, 2019, 4:44 PM IST
ನವದೆಹಲಿ: ಚೌಕಿದಾರ್ ಚೋರ್ ಹೈ ಎಂದು ಸ್ವತಃ ಸುಪ್ರೀಂ ಕೋರ್ಟೇ​ ಹೇಳಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ನೊಟೀಸ್ ಜಾರಿಗೊಳಿಸಿರುವ ಸರ್ವೊಚ್ಚ ನ್ಯಾಯಾಲಯ ಏಪ್ರಿಲ್ 22ರ ಒಳಗಾಗಿ ವಿವರಣೆ ನೀಡುವಂತೆ ತಾಕೀತು ಮಾಡಿದೆ.

ಏ.10 ರಂದು ರಫೇಲ್ ಒಪ್ಪಂದದ ಕುರಿತ ತೀರ್ಪು ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೇಂದ್ರ ಸರಕಾರದ ಆಕ್ಷೇಪವನ್ನು ವಜಾಗೊಳಿಸಿ ಅರ್ಜಿ ಮರುಪರಿಶೀಲನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ನ್ಯಾಯಾಲಯದ ಇದೇ ಹೇಳಿಕೆಯನ್ನು ತನ್ನ ರಾಜಕೀಯ ಭಾಷಣೆಕ್ಕೆ ಬಳಸಿಕೊಂಡಿದ್ದ ರಾಹುಲ್ ಗಾಂಧಿ “ಚೌಕಿದಾರ್ ಚೋರ್ ಹೈ” ಎಂದು ಸ್ವತಃ ಸುಪ್ರೀಂ ತೀರ್ಪು ನೀಡಿದೆ ಎಂದು ಹೇಳಿಕೆ ನೀಡಿದ್ದರು. ಇಂದು ಸ್ವತಃ ಅವರ ಹೇಳಿಕೆಯೇ ಅವರಿಗೆ ಕಂಟಕವಾಗಿದೆ.

ಇದನ್ನೂ ಓದಿ : VIDEO: ಐಪಿಎಲ್​ ಪಂದ್ಯದ ವೇಳೆ ಮೊಳಗಿತು 'ಚೌಕಿದಾರ್ ಚೋರ್ ಹೈ' ಘೋಷಣೆ..!

ರಾಹುಲ್ ಗಾಂಧಿ ಅವರ ಈ ಹೇಳಿಕೆ ವಿರುದ್ಧವಾಗಿ ಬಿಜೆಪಿ ಪಕ್ಷದ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಬಿಜೆಪಿ ಪರ ಹಾಜರಾಗಿದ್ದರು. ಇಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ “ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ತಪ್ಪಾಗಿ ಅರ್ಥೈಸಿದ್ದಾರೆ” ಎಂದು ರಾಹುಲ್ ವಿರುದ್ದ ಹರಿಹಾಯ್ದಿದೆ.

ಇದನ್ನೂ ಓದಿ : ‘ಮೈ ಭೀ ಚೌಕಿದಾರ್’ – ವೈರಲ್ ಆಗುತ್ತಿದೆ ಮೋದಿ ಪರ ಅಭಿಯಾನ

ಈ ಕುರಿತು ಮಾತನಾಡಿರುವ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್, “ರಾಹುಲ್ ಗಾಂಧಿ ಹೇಳಿರುವಂತೆ ನಾವು ಹಾಗೆ ಹೇಳಿಯೇ ಇಲ್ಲ. ರಫೆಲ್ ಒಪ್ಪಂದದ ಕುರಿತು ತೀರ್ಪು ಮರುಪರಿಶೀಲನೆಗೆ ಒಪ್ಪಿದ್ದ ನ್ಯಾಯಾಲಯ ಆ ಕುರಿತು ಸ್ಪಷ್ಟ ತೀರ್ಪು ನೀಡಿದೆ.  ಅಲ್ಲದೆ ಸೂಕ್ತ ದಾಖಲೆಗಳನ್ನು ಶೀಘ್ರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರಕ್ಕೆ ಆದೇಶಿಸಲಾಗಿದೆ. ಆದರೆ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ಅರ್ಥೈಸುವ ಮೂಲಕ ರಾಹುಲ್ ಗಾಂಧಿ ಮಾಧ್ಯಮ ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ” ಎಂದು ಕಿಡಿಕಾರಿದರು.
Loading...

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...