PM Security Breach: ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಸಮಿತಿ ರಚಿಸಿದ ಸುಪ್ರೀಂ

ಚಂಡೀಗಢ ಡಿಜಿಪಿ,  ಎನ್‌ಐಎ ಐಜಿ, ರಿಜಿಸ್ಟ್ರಾರ್ ಜನರಲ್ ಮತ್ತು ಹೆಚ್ಚುವರಿ ಡಿಜಿ, ಗುಪ್ತಚರ ವಿಭಾಗವನ್ನು ಸಮಿತಿಯಲ್ಲಿ ಸೇರಿಸುವಂತೆ ನ್ಯಾಯಾಲಯ ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ನವದೆಹಲಿ (ಜ. 10):  ಪಂಜಾಬ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Security Breach) ಭದ್ರತೆಯ ಉಲ್ಲಂಘನೆ ವಿಚಾರ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ಮುಂದಾಗಿದೆ. ಇದಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ತನಿಖೆ ನಡೆಸಲಿದೆ. ಇದೇ ವೇಳೆ ಸುಪ್ರೀಂ ಕೋರ್ಟ್​ ಕೂಡ ಕೇಂದ್ರ ಮತ್ತು ಪಂಜಾಬ್​ ಸರ್ಕಾರ ಘಟನೆ ಕುರಿತು ತನಿಖೆ ವಿಚಾರಣೆ ನಡೆಸದಂತೆ ತಿಳಿಸಿದೆ.

    ಶೀಘ್ರದಲ್ಲೇ ಈ ಕುರಿತು ಆದೇಶ

    ಈ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಹೊಸ ಸಮಿತಿಯ ಬಗ್ಗೆ ವಿವರವಾದ ಆದೇಶಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಿದರು.

    ಚಂಡೀಗಢ ಡಿಜಿಪಿ,  ಎನ್‌ಐಎ ಐಜಿ, ರಿಜಿಸ್ಟ್ರಾರ್ ಜನರಲ್ ಮತ್ತು ಹೆಚ್ಚುವರಿ ಡಿಜಿ, ಗುಪ್ತಚರ ವಿಭಾಗ ಸಮಿತಿಯಲ್ಲಿ ಸೇರಿಸುವಂತೆ  ನ್ಯಾಯಾಲಯ ಹೇಳಿದೆ.
    ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ಪ್ರಧಾನಿಯವರ ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸೂಚಿಸಿತ್ತು.

    ಇದನ್ನು ಓದಿ: ಭೀಕರ ಅಗ್ನಿ ದುರಂತಕ್ಕೆ 19 ಮಂದಿ ಬಲಿ- 13 ಜನರ ಸ್ಥಿತಿ ಚಿಂತಾಜನಕ

    ಪಂಜಾಬ್​ ಸರ್ಕಾರದಿಂದ ಸಂಪೂರ್ಣ ಭದ್ರತಾ ವೈಫಲ್ಯ ಎಂದು ಸಾಲಿಸಿಟರ್​ ಜನರಲ್​

    ಇನ್ನು ಈ ಸಂಬಂಧ ವಿವರಣೆ ನೀಡಲು ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಂಜಾಬ್​ ಸರ್ಕಾರದ ವಿರುದ್ಧ ಆರೋಪ ಮಾಡಿದ್ದು, ಸಂಪೂರ್ಣ ಗುಪ್ತಚರ ವೈಫಲ್ಯಆಗಿದೆ. ಜೊತೆಗೆ ಎಸ್‌ಪಿಜಿ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಈ ಮಾರ್ಗದಲ್ಲಿ ಪ್ರತಿಭಟನಾಕಾರರು ಇದ್ದಾರೆ ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೂ, ಪ್ರಧಾನಿಯವರ ಭದ್ರತೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.
    ಇನ್ನು ಪಂಜಾಬ್ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಡಿಎಸ್ ಪಟ್ವಾಲಿಯಾ ಅವರು ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ದಾಖಲಿಸಿದರು. ಇದೇ ವೇಳೆ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಏಳು ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದ್ದು, ಯಾವುದೇ ವಿಚಾರಣೆಯ ಅವಕಾಶವಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

    ಇದನ್ನು ಓದಿ: ದೇಶದಲ್ಲಿ ಕೊರೋನಾ ಉಲ್ಭಣ ಹಿನ್ನೆಲೆ, ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ

    ಜೀವಂತವಾಗಿ ಬದುಕಿ ಬಂದೆ ಎಂದ ಪ್ರಧಾನಿ

    ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಂಜಾಬ್​​ಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರ ಭದ್ರತೆಯಲ್ಲಿ ಭಾರೀ ಲೋಪ ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ದೇಶದ ಪ್ರಧಾನ ಮಂತ್ರಿಗಳು ಬರುತ್ತಾರೆ ಎಂದು ಗೊತ್ತಿದ್ದು, ಪಂಜಾಬ್​ ಸರ್ಕಾರ  ರಸ್ತೆ ಸಂಚಾರದಲ್ಲಿ ಸುರಕ್ಷತೆ ವಹಿಸಿಲ್ಲ. ಇದರಿಂದಾಗಿ ಫ್ಲೈ ಒವರ್​ ಮೇಲೆ ಪ್ರಧಾನಿ ಅವರ ಕಾರು 15-20 ನಿಮಿಷ ಸಿಲುಕಿತು. ಜೊತೆಗೆ ಹೆಚ್ಚುವರಿ ಭದ್ರತೆ ನೀಡುವಲ್ಲಿ ಕೂಡ ವಿಫಲವಾಗಿತ್ತು. ಈ ಘಟನೆ ಬಳಿಕ ತಿಳಿಸಿದ ಮೋದಿ ನಾನು ಜೀವಂತವಾಗಿ ಬದುಕಿ ಬಂದೆ. ಇದಕ್ಕೆ ಸಹಕರಿಸಿದ ಪಂಜಾಬ್​ ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದರು.

    ಪ್ರಧಾನಿ ಮೋದಿ ಅವರು  ಸಂಚರಿಸುವ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿ ರಸ್ತೆ ತಡೆಗೆ ಮುಂದಾದರು. ಈ ವೇಳೆ ಅವರ ಕಾರ್​ ಫ್ಲೈಓವರ್​ ಮೇಲೆ ಸಿಲುಕಿಕೊಂಡಿತು. ಈ ವೇಳೆ ಮುನ್ನೆಚ್ಚರಿಕೆ ವಹಿಸಿದ ಎಸ್‌ಪಿಜಿ ಸಿಬ್ಬಂದಿಗಳು ಕಾರಿನಿಂದ ಕೆಳಗೆ ಇಳಿದು ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರ ಕಾರನ್ನು ಸುತ್ತುವರೆದರು.
    Published by:Seema R
    First published: