• Home
  • »
  • News
  • »
  • national-international
  • »
  • Supreme Court: ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಕೇಂದ್ರಕ್ಕೆ ಸುಪ್ರೀಂ ಅನುಮತಿ

Supreme Court: ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಕೇಂದ್ರಕ್ಕೆ ಸುಪ್ರೀಂ ಅನುಮತಿ

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

ಕೇಂದ್ರ ಸರ್ಕಾರ ಅಂಬಾನಿ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಪ್ರಶ್ನಿಸಿ ತ್ರಿಪುರಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

  • Share this:

    ದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಅಂಬಾನಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಭದ್ರತೆ ನೀಡುವುದನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.  ಕೇಂದ್ರ ಸರ್ಕಾರ (Central Government)  ಅಂಬಾನಿ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಪ್ರಶ್ನಿಸಿ ತ್ರಿಪುರಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈಗಿನ ಪದ್ಧತಿಯಂತೆ, ಅಂಬಾನಿ ಕುಟುಂಬವು (Ambani Family) ಭದ್ರತೆಗೆ ತಗಲುವ  ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿದೆ. ಲೈವ್ ಲಾ ಜಾಲತಾಣ ವರದಿ ಮಾಡಿದ ಪ್ರಕಾರ ಸಿಜೆಐ ರಮಣ, (CJI NV Ramana) ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಿಐಎಲ್ ಸಲ್ಲಿಸಿದ ಅರ್ಜಿದಾರರ ಸ್ಥಾನವನ್ನು ಪ್ರಶ್ನಿಸಿದೆ.


    ಅಲ್ಲದೇ ತ್ರಿಪುರಾ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈಗಿನ ಪದ್ಧತಿಯಂತೆ ಅಂಬಾನಿ ಕುಟುಂಬವು ಅಂತಹ ಭದ್ರತೆಯನ್ನು ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿದೆ.


    ಸುಪ್ರೀಂ ಕೋರ್ಟ್ ಹೇಳಿದ್ದೇನು?
    ಜುಲೈ 22 ರಂದು ನೀಡಲಾದ ಆದೇಶದಲ್ಲಿ ಪ್ರಕರಣದಲ್ಲಿ ಅರ್ಜಿದಾರರು ಖಾಸಗಿ ವ್ಯಕ್ತಿಗೆ ಒದಗಿಸಲಾದ ಭದ್ರತಾ ವಿವರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನಿಸಲು ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿದ್ದಾಗಿ ತಿಳಿಸಿದೆ.


    ತ್ರಿಪುರಾ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ
    ಕೇಂದ್ರ ಸರ್ಕಾರವು ಅಂಬಾನಿ ಕುಟುಂಬಕ್ಕೆ ಬೆದರಿಕೆ ಗ್ರಹಿಕೆಗೆ ಸಂಬಂಧಿಸಿದ ಸ್ಥಿತಿಯ ವರದಿಯನ್ನು ಒದಗಿಸುವಂತೆ ಸರ್ಕಾರಕ್ಕೆ ತಿಳಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ತ್ರಿಪುರಾ ಹೈಕೋರ್ಟ್ ನೀಡಿದ ಆದೇಶವನ್ನು ಕೇಂದ್ರ ಸರ್ಕಾರವು ಪ್ರಶ್ನಿಸಿತ್ತು. ಆನಂತರ ಈ ಅರ್ಜಿಯ ವಿಷಯವು ಸುಪ್ರೀಂ ಕೋರ್ಟ್‌ಗೆ ತಲುಪಿತ್ತು.


    ಪ್ರಕರಣದ ವಿವರವಾದ ವಿಚಾರಣೆ ನಡೆಸಿದ ನಂತರ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಜೂನ್‌ನಲ್ಲಿ ತಡೆ ನೀಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.


    ಇದನ್ನೂ ಓದಿ: Drugs ವಿರುದ್ಧ ನಮ್ಮ ಶೈಲಿಯ ಆಪರೇಷನ್​ ಸಕ್ಸಸ್ ಆಗಿದೆ ಎಂದ ಅಮಿತ್ ಶಾ; 30,000 kg ಡ್ರಗ್ಸ್ ನಾಶ


    ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದವೇನು?
    ವಾದದ ನ್ಯಾಯಾಲಯದ ಸಂದರ್ಭದಲ್ಲಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಮುಂದೆ ಸಮಸ್ಯೆಯನ್ನು  ಪ್ರಶ್ನಿಸಲು  ಅರ್ಜಿದಾರರ ಸ್ಥಾನವನ್ನು ಅಥವಾ ಕಾನೂನು ನಿಲುವನ್ನು ಪ್ರಶ್ನಿಸಿದರು. ಯಾವುದೇ ಬೆದರಿಕೆ ಗ್ರಹಿಕೆಯನ್ನು ಕೂಲಂಕಷವಾಗಿ ವಿಶ್ಲೇಷಿಸಿದ ನಂತರ ಭದ್ರತಾ ನಿಯೋಜನೆಯನ್ನು ನೀಡಲಾಗುತ್ತದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದರು.


    ಇದನ್ನೂ ಓದಿ: Gururaj Poojary: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕನ್ನಡಿಗನ ಸಾಧನೆ; ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಕಂಚು


    ಅಲ್ಲದೇ ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವು ಅರ್ಜಿದಾರರನ್ನು ಅವರ ಸ್ಥಾನದ ಬಗ್ಗೆ ಪ್ರಶ್ನಿಸಿತು.  "ನಿಮ್ಮ ಸ್ಥಾನ ಯಾವುದು ಮತ್ತು ನೀವು ಭದ್ರತೆಯ ಬಗ್ಗೆ ಏಕೆ ತಲೆಕೆಡಿಸಿಕೊಂಡಿದ್ದೀರಿ? ಇದರ ಕುರಿತು ನಿರ್ಧಾರ ಕೈಗೊಳ್ಳಲು ಸರ್ಕಾರವಿದೆ. ಅವರು ನೋಡಿಕೊಳ್ಳುತ್ತಾರೆ. ನೀವು ಯಾಕೆ ತಲೆಕೆಡಿಸಿಕೊಂಡಿದ್ದೀರಿ? ಎಂದು ಸುಪ್ರೀಂ ಕೋರ್ಟ್​ ಪೀಠ ಪ್ರಶ್ನಿಸಿದ್ದಾಗಿ ಲೈವ್ ಲಾ ವರದಿ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅನುಮತಿಯನ್ನು ಮುಂದುವರೆಸಿದೆ.

    Published by:guruganesh bhat
    First published: