ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆಗೆ ಕಡಪದಲ್ಲಿ ಚಪ್ಪಲಿ ಎಸೆತ, ಪ್ರತಿಭಟನೆ

news18
Updated:September 1, 2018, 9:42 PM IST
ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆಗೆ ಕಡಪದಲ್ಲಿ ಚಪ್ಪಲಿ ಎಸೆತ, ಪ್ರತಿಭಟನೆ
news18
Updated: September 1, 2018, 9:42 PM IST
ನ್ಯೂಸ್​18 ಕನ್ನಡ

ಕಡಪ (ಸೆ. 1): ಆಂಧ್ರಪ್ರದೇಶದ ಕಡಪದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ಅವರ ಕಾರಿನ ಮೇಲೆ ಚಪ್ಪಲಿ ಬಿಸಾಡಿದ ಘಟನೆ ಇಂದು ನಡೆದಿದೆ.

ಎಡಪಂಥೀಯ ಪಕ್ಷಗಳ ಬೆಂಬಲಿಗರು ಅನಂತಕುಮಾರ್​ ಹೆಗಡೆ ಕುಳಿತಿದ್ದ ಕಾರನ್ನು ಅಡ್ಡ ಹಾಕಿ ರಸ್ತೆಯಲ್ಲೇ ಮಲಗಿ ಮುಂದೆ ಸಾಗಲು ತಡೆಯೊಡ್ಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕೇಂದ್ರ ಸಚಿವರ ಮುಂಭಾಗದ ಗಾಜಿಗೆ ಚಪ್ಪಲಿ ಬಿಸಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡುವಂತೆ ಮತ್ತು ಕಡಪದಲ್ಲಿ ಸ್ಟೀಲ್​ ಫ್ಯಾಕ್ಟರಿಗೆ ಆಗ್ರಹಿಸಿ ಕೇಂದ್ರ ಸಚಿವರ ಕಾರನ್ನು ಅಡ್ಡಗಟ್ಟಿದ ಜನರು ಗಲಾಟೆಯೆಬ್ಬಿಸಿದ್ದಾರೆ. ಇಷ್ಟಾದರೂ ಕಾರಿನಿಂದ ಕೆಳಗೆ ಇಳಿಯದೆ ಒಳಗೇ ಕುಳಿತುಕೊಂಡ ಸಚಿವರ ವಿರುದ್ಧ ಆಕ್ರೋಶಗೊಂಡ ಮಹಿಳಾ ಪ್ರತಿಭಟನಾಕಾರ್ತಿಯೊಬ್ಬರು ಚಪ್ಪಲಿ ಬಿಸಾಡಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಅನಂತ್​ಕುಮಾರ್​ ಹೆಗಡೆ ಅವರ ಕಾರಿಗೆ ದಾರಿ ಮಾಡಿಕೊಟ್ಟಿದ್ದಾರೆ.

First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ