ಸೀರೆಯುಟ್ಟು ಜಿಮ್​​ನಲ್ಲಿ ಕಸರತ್ತು ಮಾಡಿದ ಗಟ್ಟಿಗಿತ್ತಿ: ಸ್ಯಾರಿ ಸ್ಟೈಲ್​ಗೆ ಎಲ್ಲರೂ ಬೋಲ್ಡ್!

ಸೀರೆ ಎಂದಿಗೂ ಅಡೆ ತಡೆ ಆಗಬಾರದು. ಒಬ್ಬ ಮಹಿಳೆ ತನ್ನ ಬಗ್ಗೆ ಕಾಳಜಿವಹಿಸುವುದನ್ನು ತಡೆಯುವಂತಿರಬಾರದು.

ಸೀರೆಯುಟ್ಟು ಕಸರತ್ತು

ಸೀರೆಯುಟ್ಟು ಕಸರತ್ತು

 • Share this:
  ಜಿಮ್​​ಗೆ ಹೋಗಲು, ವ್ಯಾಯಾಮ ಮಾಡಲು ಮಾಡ್ರನ್​​ ಬಟ್ಟೆಯೇ ಸೂಕ್ತ ಅನ್ನೋರಿಗೆ ಸೀರೆಯಲ್ಲೂ ಆರಾಮಾಗಿ ವ್ಯಾಯಾಮ ಮಾಡಬಹುದು ಎಂದು ಮಹಾರಾಷ್ಟ್ರದ ಗಟ್ಟಿಗಿತ್ತಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಪುಣೆಯ ಡಾ.ಶಾರ್ವರಿ ಇನಾಮ್ದಾರ್ ನಮ್ಮೆಲ್ಲರಿಗೂ ಸ್ಫೂರ್ತಿ. ಸದ್ಯ ಇವರ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಜಿಮ್​​ನ ಉಡುಗೆಯ ಬದಲಿಗೆ ಮನೆಯ ಒಳಗಿನ ಜವಾಬ್ದಾರಿ ಹೊತ್ತ ಸಾಮಾನ್ಯ ಗೃಹಿಣಿಯರಂತೆ ಸೀರೆ ಧರಿಸಿ ಪುಷ್-ಅಪ್ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಆ ಮೂಲಕ ವೇಯ್ಟ್​ಲಿಫ್ಟ್​ ಗೃಹಿಣಿಯರಿಗೆ ಎಂದೂ ಎಟುಕದ ಕುಸುಮವಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ರಂಗೋಲಿ ಹಾಕುವ ಕೈಗಳು ಉಪ್ಪು, ಒಗ್ಗರಣೆಯ ಅಂದಾಜಿನಲ್ಲೇ ಕಳೆದು ಹೋಗದೇ ಭಾರವಾದ ತೂಕವನ್ನು ಎತ್ತಬಲ್ಲಳು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

  ಕೊರೊನಾ ಕಾರಣ ನಾವೆಲ್ಲರೂ ಮನೆಯಲ್ಲಿಯೇ ನಮ್ಮ ಸಮಯವನ್ನು ಕಳೆಯುವಂತಾಗಿದೆ. ಇದೇ ಸಮಯದಲ್ಲಿ ಅನೇಕ ಜನರು ಅಡುಗೆ ಮನೆಯಲ್ಲಿ ಹೊಸ ರುಚಿಗಳಿಗೆ ಮನಸೋತು ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ದೈಹಿಕ ಚಟುವಟಿಕೆ ಇಲ್ಲದೇ ಸೋಮಾರಿತನವು ಆವರಿಸಿದೆ.

  ಒಂದು ವೇಳೆ ನೀವು ದೇಹ ದಂಡಿಸಿ ಜಿಮ್ ಮಾಡಲು ಪ್ರೇರಣೆ ಹುಡುಕುತ್ತಿದ್ದರೆ, ಪುಣೆಯ ಡಾ.ಶಾರ್ವರಿ ಇನಾಮ್ದಾರ್ ಅವರ ದೈನಂದಿನ ವ್ಯಾಯಾಮದ ದಿನಚರಿಯಿಂದ ನಿಮಗೆ ಸ್ಫೂರ್ತಿ ಸಿಗುವುದು ಖಚಿತ. ಇನಾಮ್ದಾರ್ ಅವರು 9 ಗಜದ ಸೀರೆಯುಟ್ಟು ಜಿಮ್​ನಲ್ಲಿ ವೇಯ್ಟ್ ಟ್ರೈನಿಂಗ್ ಮಾಡುವ ವಿಡಿಯೋ ವೈರಲ್​ ಆಗಿದೆ.

  ಇದನ್ನೂ ಓದಿ: ಕೇವಲ ಒಂದೇ ದಿನದಲ್ಲಿ 10 ಅಂತಸ್ತಿನ ಅಪಾರ್ಟ್​​ಮೆಂಟ್​​ ನಿರ್ಮಾಣ: ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತಿರ!

  ಅಷ್ಟೇ ಅಲ್ಲ, ಅವರು ಕಳೆದ ಐದು ವರ್ಷಗಳಿಂದ ಕಟ್ಟುನಿಟ್ಟಾದ ಫಿಟ್‌ನೆಸ್ ತರಬೇತಿಯಲ್ಲಿದ್ದುಕೊಂಡು ಅದನ್ನು ಕರಗತ ಮಾಡಿಕೊಂಡಿದ್ದಾರೆ. ಪುಷ್-ಅಪ್‌ಗಳು, ಪುಲ್-ಅಪ್‌ಗಳು ಮತ್ತು ತೂಕ ತರಬೇತಿಯನ್ನು ಕರಗತ ಮಾಡಿಕೊಂಡಿದ್ದಾರೆ. ಜನಪ್ರಿಯ ವಿಡಿಯೋದಲ್ಲಿ ಸುಂದರವಾದ ಸೀರೆಯಟ್ಟು ಡಾ. ಶಾರ್ವರಿಯವರು ಪುಷ್-ಅಪ್​ಗಳು, ಲಿಫ್ಟ್ಸ್​​​, ಭಾರವಾದ ಡಂಬಲ್ಸ್​​ಗಳೊಂದಿಗೆ ಬೈಸಿಪ್ಸ್​ ಮತ್ತು ಇನ್ನಿತರ ಹಲವಾರು ಕಠಿಣ ಜಿಮ್ ತಾಲೀಮನ್ನು ಮಾಡಿದ್ದಾರೆ.

  "ಸ್ಪಷ್ಟವಾಗಿ ಹೇಳುವುದಾದರೆ, ಮಹಿಳೆಯರು ಪ್ರತಿದಿನ ಸೀರೆಗಳನ್ನು ಧರಿಸುವುದಿಲ್ಲ" ಎಂದು ಡಾ.ಶಾರ್ವರಿ ಇನಾಮ್ದಾರ್ ಅವರು ಜನಪ್ರಿಯ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದರು. 'ಸೀರೆ ಎಲ್ಲರ ಸೊಬಗನ್ನು ಹೆಚ್ಚಿಸುತ್ತದೆ, ಆದರೆ ಎಲ್ಲರಿಗೂ ಸೀರೆಯುಟ್ಟು ದಿನಚರಿ ನಿಭಾಯಿಸುವುದು ಕಷ್ಟ. ಭಾರತೀಯ ಮಹಿಳೆಯರಾದ ನಾವು ಸಂಭ್ರಮಾಚರಣೆಗಳಿಗೆ ಸೀರೆಯನ್ನು ಅಪ್ಪಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸೀರೆ ಎಂದಿಗೂ ಅಡೆ ತಡೆ ಆಗಬಾರದು. ಒಬ್ಬ ಮಹಿಳೆ ತನ್ನ ಬಗ್ಗೆ ಕಾಳಜಿವಹಿಸುವುದನ್ನು ತಡೆಯುವಂತಿರಬಾರದು. ಅದಕ್ಕಾಗಿಯೇ ನಾನು ಹೆಣ್ತನವನ್ನು ಗೌರವಿಸುತ್ತಿದ್ದೇನೆ' ಎಂದಿದ್ದಾರೆ.


  ಇದರೊಟ್ಟಿಗೆ ಪ್ರತಿ ಮಹಿಳೆಯೂ ಕೂಡ ತಮ್ಮ ಫಿಟ್ನೆಸ್​​ ವೇಳಾಪಟ್ಟಿಯಲ್ಲಿ ವೇಯ್ಟ್​ ಟ್ರೈನಿಂಗ್ ಅಳವಡಿಸಿಕೊಳ್ಳಬೇಕು ಎಂದರು. ಬಹುತೇಕ ಮಹಿಳೆಯರು ಯೋಗಾ, ಡ್ಯಾನ್ಸ್ ಗೆ ಮಾತ್ರವೇ ಸೀಮಿತರಾಗಿರುತ್ತಾರೆ. ವೇಯ್ಟ್ ಟ್ರೈನಿಂಗ್​ ಮಾಡುವುದರಿಂದ ಫಿಟ್ ಆಗುವುದರ ಜೊತೆಗೆ ಬಲರ್ಧನೆ ಆಗುತ್ತದೆ. ಸದಾ ತಾರೂಣ್ಯಪೂರ್ಣರಾಗಿ ಚಟುವಟಿಕೆಯಿಂದ ಇರಬಹುದು. ಇದು ಎಂದಿಗೂ ಮಹಿಳೆಯರನ್ನು ದುರ್ಬಲರನ್ನಾಗಿಸುವುದಿಲ್ಲ ಎಂದು ಮಹಿಳೆಯರನ್ನು ಹುರಿದುಂಬಿಸುತ್ತಾರೆ.

  ಅವರ ದಿನನಿತ್ಯದ ವರ್ಕ್​ಔಟ್​ ಜೊತೆಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಮತ್ತು ಸ್ಫೂರ್ತಿ ತುಂಬುವುದನ್ನು ಮಾಡುತ್ತಾರೆ. ಎಲ್ಲಾ ವಯಸ್ಸಿನವರು ಕೂಡ ಶಿಸ್ತುಬದ್ದ ಜೀವನ ಶೈಲಿ ಮತ್ತು ಫಿಟ್ನೆಸ್​​ ಬಗ್ಗೆ ಕಾಳಜಿವಹಿಸಲೇಬೇಕು ಎನ್ನುತ್ತಾರೆ. ಆ ಮೂಲಕ ಮಹಿಳೆಯ ಸೀಮಿತ ಆಲೋಚನ ಶೈಲಿಯನ್ನು ವಿಶಾಲಗೊಳಿಸಲು ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತಾರೆ.
  Published by:Kavya V
  First published: