RajiniKanth| ಮತ್ತೆ ರಾಜಕೀಯ ಪ್ರವೇಶ ಮಾಡ್ತಾರ ನಟ ರಜನೀಕಾಂತ್?; ಕುತೂಹಲ ಮೂಡಿಸಿದ ತಲೈವಾನ ಹೊಸ ಹೇಳಿಕೆ!

ಭವಿಷ್ಯದಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸುತ್ತೇನೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಆರ್‌ಎಂಎಂನ ಪದಾಧಿಕಾರಿಗಳು ಮತ್ತು ನನ್ನ ಅಭಿಮಾನಿಗಳ ಮನಸ್ಸಿನಲ್ಲಿದೆ. ಈ ವಿಷಯಗಳ ಬಗ್ಗೆ ವೇದಿಕೆಯ ಪದಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ" ಎಂದು ರಜನಿ ಹೇಳಿದ್ದಾರೆ.

ನಟ ರಜಿನಿಕಾಂತ್.

ನಟ ರಜಿನಿಕಾಂತ್.

 • Share this:
  ಚೆನ್ನೈ (ಜುಲೈ 12); ಕಳೆದ ಮೇ ತಿಂಗಳಲ್ಲಿ ನಡೆದ ಮಿಳುನಾಡು ವಿಧಾನಸಭಾ ಚುನಾವಣೆ ಮತ್ತು ನಟ ರಜನೀಕಾಂತ್ ರಾಜಕೀಯ ಪ್ರವೇಶ ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣೆ ಏನೋ ಮುಗಿದಿದ್ದು, ಡಿಎಂಕೆ ಪಕ್ಷ ಜಯಭೇರಿ ಬಾರಿಸಿತ್ತು. ನಿರೀಕ್ಷೆಯಂತೆ ಎಂ.ಕೆ. ಸ್ಟಾಲಿನ್ ಸಿಎಂ ಗಾದಿಗೆ ಏರಿದ್ದೂ ಆಗಿದೆ. ಆದರೆ, "ಚುನಾವಣೆಗೆ ನಾನೂ ಸ್ಪರ್ಧಿಸುತ್ತೇನೆ, ಹೊಸ ಪಕ್ಷ ಸ್ಥಾಪಿಸುವ ಮೂಲಕ ದ್ರಾವಿಡ ನಾಡಿನಲ್ಲಿ ರಾಜಕೀಯ ಬದಲಾವಣೆ ತರುತ್ತೇನೆ" ಎಂದು ಘೋಷಿಸಿದ್ದ ನಟ ರಜನೀಕಾಂತ್​ ಮಾತ್ರ ಚುನಾವಣಾ ಸಂದರ್ಭದಲ್ಲಿ ಅನಾರೋಗ್ಯದ ನೆಪ ಒಡ್ಡಿ ರಾಜಕೀಯದಿಂದ ದೂರ ಉಳಿದಿದ್ದರು. ಈ ಪ್ರಸಂಗ ಸಾವಿರಾರು ರಜನಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಆದರೆ, ಚುನಾವಣೆ ಮುಗಿದ ಬೆನ್ನಿಗೆ ಇದೀಗ ಮತ್ತೆ ಹೊಸ ಬಾಂಬ್ ಸಿಡಿಸಿರುವ ರಜನೀಕಾಂತ್, "ಮತ್ತೆ ತಮ್ಮ ರಜನೀಕಾಂತ್ ಮಕ್ಕಲ್ ಮಂದ್ರಂ (RMM) ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರಾಜಕೀಯಕ್ಕೆ ಪ್ರವೇಶಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಸೋಮವಾರ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

  ಕಳೆದ ಡಿಸೆಂಬರ್ ವರೆಗೆ ರಜನೀಕಾಂತ್ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ, ತಮಿಳುನಾಡಿ ನಲ್ಲಿ ರಾಜಕೀಯ ಬದಲಾವಣೆಗೆ ಕಾರಣರಾಗಿದ್ದಾರೆ ಎಂದೇ ಹೇಳಲಾಗಿತ್ತು. ಅಲ್ಲದೆ, ರಜನೀಕಾಂತ್ ಸಿಎಂ ಗಾದಿಗೆ ಏರುವ ಕುರಿತ ಚರ್ಚೆಗಳೂ ಆರಂಭವಾಗಿತ್ತು. ಆದರೆ, ಅನಾರೋಗ್ಯದ ಕಾರಣ ನಾನು ರಾಜಕೀಯ ಪಕ್ಷ ಸ್ಥಾಪಿಸುತ್ತಿಲ್ಲ. ಅಲ್ಲದೆ, ಕೊರೋನಾ ಸಂದರ್ಭದಲ್ಲಿ ದೊಡ್ಡ ದೊಡ್ಡ ಸಭೆ ನಡೆಸುವ ಮೂಲಕ ಸೋಂಕು ಹರಡಲು ನಾನು ಕಾರಣನಾಗುವುದಿಲ್ಲ ಎಂದು ಹೇಳಿ ನಟ ರಜನಿ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ, ಚುನಾವಣಾ ರಾಜಕೀಯ ಮಾಡದೇ ಜನರ ಸೇವೆ ಮಾಡುತ್ತೇನೆ ಎಂದೂ ಘೋಷಿಸಿದ್ದರು.

  ಆದರೆ, ನಟ ರಜನೀಕಾಂತ್ ಇದೀಗ ಮತ್ತೆ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆರ್‌ಎಂಎಂನ ಪದಾಧಿಕಾರಿಗಳೊಂದಿಗಿನ ಭೇಟಿಗೂ ಮುನ್ನ ಸ್ವತಃ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಜನಿಕಾಂತ್, "ವೇದಿಕೆ ಮುಂದುವರಿಯಬೇಕೇ ಅಥವಾ ಬೇಡವೇ, ಇನ್ನು ಮುಂದೆ ಈ ವೇದಿಕೆಯ ಕರ್ತವ್ಯಗಳೇನು ಎಂಬ ಪ್ರಶ್ನೆಗಳಿವೆ. ಭವಿಷ್ಯದಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸುತ್ತೇನೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಆರ್‌ಎಂಎಂನ ಪದಾಧಿಕಾರಿಗಳು ಮತ್ತು ನನ್ನ ಅಭಿಮಾನಿಗಳ ಮನಸ್ಸಿನಲ್ಲಿದೆ. ಈ ವಿಷಯಗಳ ಬಗ್ಗೆ ವೇದಿಕೆಯ ಪದಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ" ಎಂದು ಹೇಳುವ ಮೂಲಕ ಮತ್ತೆ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದಾರೆ.

  ಇದನ್ನೂ ಓದಿ: Valimai Motion Poster| ವಲಿಮೈ ಚಿತ್ರದ ಮೋಷನ್ ಪೋಸ್ಟರ್‌ನಲ್ಲಿ ಅಜಿತ್ ಫಸ್ಟ್‌ ಲುಕ್‌ ಹೀಗಿದೆ ನೋಡಿ..

  ಅನ್ನಾಥೆ ಚಿತ್ರದ ಶೂಟಿಂಗ್ ವಿಳಂಬವಾದಾಗಿನಿಂದ ಸ್ವಲ್ಪ ಸಮಯದವರೆಗೆ ಆರ್‌ಎಂಎಂನ ಪದಾಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೊರೋನಾ ವೈರಸ್​ನಿಂದಾಗಿ ಸಭೆಯನ್ನು ಮುಂದೂಡಿದೆ ಎಂದಿದ್ದಾರೆ.

  ಅನಾರೋಗ್ಯದಿಂದಾಗಿ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ್ದ ನಟ ಕೆಲವು ದಿನಗಳ ಹಿಂದೆ ಮನೆಗೆ ಮರಳಿದ್ದರು. ಈ ಹಿಂದೆ ರಜನಿಕಾಂತ್ ಕಳೆದ ಜನವರಿಯಲ್ಲಿ ತಮ್ಮ ಹೊಸ ಪಕ್ಷವನ್ನು ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದರು. ಪಕ್ಷ ಆರಂಭದ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಡಿಸೆಂಬರ್‌ 31 ರಂದು ತಿಳಿಸಲಾಗುವುದು ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ದೃಢಪಡಿಸಿದ್ದರು.

  ಇದನ್ನೂ ಓದಿ: Explained| ಬಗೆಹರಿಯದ ಕಾವೇರಿ ವಿವಾದ; ಇಲ್ಲಿದೆ ವಿವಿಧ ರಾಜ್ಯಗಳ ನಡುವೆ ತಲೆನೋವಾಗಿರುವ ನದಿ ಜಗಳದ ಪಟ್ಟಿ!

  ಆದರೆ, ಡಿಸೆಂಬರ್‌ 29 ರಂದು ಟ್ವೀಟ್ ಮಾಡಿದ್ದ ನಟ, "ನನ್ನ ಆರೋಗ್ಯದಲ್ಲಾದ ಏರುಪೇರಿನಿಂದ ಮತ್ತು ಕೊರೊನಾ ಸೋಂಕಿನ ಕಾರಣದಿಂದ ಪಕ್ಷ ಸ್ಥಾಪನೆಯ ವಿಚಾರವನ್ನು ಕೈಬಿಟ್ಟಿದ್ದೇನೆ. ಇದು ನನ್ನ ಮೇಲೆ ಭರವಸೆಯಿಟ್ಟಿದ್ದ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡುತ್ತದೆ ಎಂಬುದು ನನಗೆ ತಿಳಿದಿದೆ" ಎಂದಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: