Rajinikanth: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ರಜಿನಿಕಾಂತ್​..!

Rajinikanth Health: ಹೈದರಾಬಾದಿನಲ್ಲಿ ಸಿನಿಮಾ  ಚಿತ್ರೀಕರಣದಲ್ಲಿದ್ದಾಗ, ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ರಜಿನಿ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಜಿನಿಕಾಂತ್.

ರಜಿನಿಕಾಂತ್.

  • Share this:
ಕಾಲಿವುಡ್​ ನಟ ರಜಿನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದಿನಲ್ಲಿರುವ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಹೈದರಾಬಾದಿನಲ್ಲಿ ಸಿನಿಮಾ  ಚಿತ್ರೀಕರಣದಲ್ಲಿದ್ದಾಗ, ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತೊದೊತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ರಜಿನಿ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ರಜಿನಿಕಾಂತ್ ಅವರಿಗೆ ಕೊರೋನಾ ಪರೀಕ್ಷೆ ಸಹ ಮಾಡಿದ್ದು, ಅದು ನೆಗೆಟಿವ್​ ಬಂದಿದೆಯಂತೆ. ಕಳೆದ 10 ದಿನಗಳಿಂದ ರಜಿನಿಕಾಂತ್ ತಮ್ಮ ಬಹುನಿರೀಕ್ಷಿತ ಸಿನಿಮಾ ಅನ್ನಾತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈ ವೇಳೆ ಸೆಟ್​ನಲ್ಲಿರುವ ಹಲವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಡಿ.22ರಂದು ರಜಿನಿ ಅವರಿಗೂ ಕೊರೋನಾ ಪರೀಕ್ಷೆ ಮಾಡಿದ್ದು, ಅದು ನೆಗೆಟಿವ್​ ಬಂದಿದೆ. ಜೊತೆಗೆ ಅವರಿಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 

ಶುಕ್ರವಾರ ಬೆಳಿಗ್ಗೆ ರಜಿನಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಪೊಲೊ ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಸದ್ಯಕ್ಕೆ ರಜಿನಿ ಅವರಿಗೆ ರಕ್ತದೊತ್ತಡದಲ್ಲಿ ಏರುಪೇರಿರುವುದು ತಿಳಿದು ಬಂದಿದೆ. ಅದಕ್ಕೆ ಚಿಕಿತ್ಸೆ ನೀಡುತ್ತಿರುವುದಾಗಿಯೂ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

rajinikanth, appolo hospital, Apollo Hospital in Hyderabad, due to High BP Superstar Rajinikanth admitted to Hospital, Kollywood, Bollywood, ರಜಿನಿಕಾಂತ್​, ಆಸ್ಪತ್ರೆಗೆ ದಾಖಲಾದ ರಜಿನಿಕಾಂತ್​, ಹೈದರಾಬಾದಿನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಾದ ರಜಿನಿಕಾಂತ್​, Superstar Rajinikanth admitted to Apollo Hospital in Hyderabad due to High BP
ಅಪೊಲೊ ಆಸ್ಪತ್ರೆ ಹೊರಡಿಸಿರುವ ಪ್ರತಿಕಾ ಪ್ರಕಟಣೆ


ರಕ್ತದೊತ್ತಡವನ್ನು ಹಿರತುಪಡಿಸಿ ಮತ್ತಾವುದೇ ಸಮಸ್ಯೆ ಕಾಣಿಸುತ್ತಿಲ್ಲ ಎಂದಿರುವ ವೈದ್ಯರು, ನಟನ ಆರೋಗ್ಯದ ಬಗ್ಗೆ ನಿಗಾ ವಹಿಸಲು ಪ್ರತ್ಯೇಕವಾದ ವೈದ್ಯರ ತಂಡವನ್ನು ನೇಮಿಸಿರುವುದಾಗಿ ತಿಳಿಸಿದ್ದಾರೆ.

rajinikanth, appolo hospital, Apollo Hospital in Hyderabad, due to High BP Superstar Rajinikanth admitted to Hospital, Kollywood, Bollywood, ರಜಿನಿಕಾಂತ್​, ಆಸ್ಪತ್ರೆಗೆ ದಾಖಲಾದ ರಜಿನಿಕಾಂತ್​, ಹೈದರಾಬಾದಿನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಾದ ರಜಿನಿಕಾಂತ್​, Rajinikanth, Superstar Rajinikanth, Thalaiva, Rajinikanth Political Party, Rajinikanth Twitter, Rajinikanth Party Name, Thalaiva Rajinikanth, Rajinikanth Politics, Rajinikanth Political Party, Rajini Makkal Mandram, Rajinikanth Movies, Rajinikanth Wife, Rajinikanth Health, ರಜನಿಕಾಂತ್, ರಜನಿಕಾಂತ್ ರಾಜಕೀಯ, ರಜನಿ ಮಕ್ಕಳ್ ಮಂಡ್ರಂ, ರಜನಿ ಮಕ್ಕಳ್ ಮಂದ್ರಂ, ರಜನಿಕಾಂತ್ ಆರೋಗ್ಯ"><meta name="news_keywords" content="Rajinikanth, Superstar Rajinikanth, Thalaiva, Rajinikanth Political Party, Rajinikanth Twitter, Rajinikanth Party Name, Thalaiva Rajinikanth, Rajinikanth Politics, Rajinikanth Political Party, Rajini Makkal Mandram, Rajinikanth Movies, Rajinikanth Wife, Rajinikanth Health, ರಜನಿಕಾಂತ್, ರಜನಿಕಾಂತ್ ರಾಜಕೀಯ, ರಜನಿ ಮಕ್ಕಳ್ ಮಂಡ್ರಂ, ರಜನಿ ಮಕ್ಕಳ್ ಮಂದ್ರಂ, ರಜನಿಕಾಂತ್ ಆರೋಗ್ಯ
ರಜಿನಿಕಾಂತ್


ಸನ್​ ಪಿಕ್ಚರ್ಸ್​ ನಿರ್ಮಾಣದ ಅನ್ನಾತ್ತೆ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್​ ಹಾಗೂ ನಯನತಾರಾ ನಾಯಕಿಯರಾಗಿ ಅಭಿನಯಿಸುತ್ತಿದ್ದು, ಖುಷ್ಬು ಸುಂದರಂ, ಜಾಕಿ ಶ್ರಾಫ್ ಹಾಗೂ ಪ್ರಕಾಶ್​ ರಾಜ್​ ಸಹ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: RIP Bharath: ಕೊರೋನಾ ಸೋಂಕಿನಿಂದ ಕಂಠಿ ಸಿನಿಮಾ ನಿರ್ದೇಶಕ ಭರತ್​ ನಿಧನ..!

ಇಷ್ಟೊತ್ತಿಗಾಗಲೇ ಅನ್ನಾತ್ತೆ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಇನ್ನೂ ಬಾಕಿ ಉಳಿದಿದೆ. ಸದ್ಯ ಸಿನಿಮಾದ ಶೂಟಿಂಗ್​ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದೆ. ಆದರೆ ರಜಿನಿ ಅವರ ಅನಾರೋಗ್ಯದ ಕಾರಣದಿಂದ ಈಗ ಮತ್ತೆ ಚಿತ್ರದ ಚಿತ್ರೀಕರಣಕ್ಕೆ ಬ್ರೇಗ್​ ಬೀಳುವುದು ಖಂಡಿತ.

ರಜನಿಕಾಂತ್ ರಾಜಕೀಯ ಪ್ರವೇಶ ಮತ್ತು ಹೊಸ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಇತ್ತೀಚೆಗಷ್ಟೆ ಟ್ವೀಟ್ ಮೂಲಕ ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದರು ರಜನಿಕಾಂತ್. ಜನವರಿಯಲ್ಲಿ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಲಿದೆ. ಡಿ. 31ರಂದು ಪಕ್ಷದ ಬಗ್ಗೆ ಎಲ್ಲ ಮಾಹಿತಿಯನ್ನೂ ಘೋಷಿಸಲಾಗುವುದು ಎಂದು ತಿಳಿಸಿದ್ದರು.ಸೂಪರ್​ಸ್ಟಾರ್​ ರಜನಿಕಾಂತ್ ರಾಜಕೀಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಗ್ಗೆ ಕೆಲವು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ರಜನಿಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ, ಕಳೆದ ಮಾರ್ಚ್​ ತಿಂಗಳಲ್ಲಿ ರಜನಿ ಮಕ್ಕಳ್ ಮಂಡ್ರಂ ಎಂಬ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಅವರು ರಾಜಕಾರಣದಿಂದ ದೂರವೇ ಉಳಿದಿದ್ದರು. ಅಲ್ಲದೆ, ವೈದ್ಯರು ಕೂಡ ಇಂತಹ ಆರೋಗ್ಯ ಪರಿಸ್ಥಿತಿಯಲ್ಲಿ ರಾಜಕೀಯದಿಂದ ದೂರ ಇರುವುದೇ ಉತ್ತಮ ಎಂಬ ಸಲಹೆ ನೀಡಿದ್ದರು.

ಇದನ್ನೂ ಓದಿ: Belageddu Song: ಬ್ರೇಕಪ್​ ನಂತರ ರಕ್ಷಿತ್​ ಶೆಟ್ಟಿಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ ರಶ್ಮಿಕಾ ಮಂದಣ್ಣ

ಆದರೆ ಕೆಲವು ವಾರಗಳ ಹಿಂದೆ ಅವರ ಬೆಂಬಲಿಗರು ಮತ್ತೆ ಸಕ್ರಿಯ ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಜನಿ ಮಕ್ಕಳ್ ಮಂಡ್ರಂ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಜನವರಿಯಲ್ಲಿ ನೂತನ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದರು. 2021ರ ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ಜನವರಿಯಲ್ಲಿ ಸ್ಥಾಪನೆಯಾಗಲಿರುವ ತಮ್ಮದೇ ಆದ ಪ್ರಾದೇಶಿಕ ಪಕ್ಷದ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಧುಮುಕಲಿದ್ದಾರಾ? ಎಂಬ ಕುತೂಹಲವೂ ಇದೆ.
Published by:Anitha E
First published: