Rajinikanth: ಜನವರಿಯಲ್ಲಿ ರಜನಿಕಾಂತ್​​ ರಾಜಕೀಯ ಪ್ರವೇಶ ಸಾಧ್ಯತೆ; ಶೀಘ್ರದಲ್ಲಿಯೇ ನಿರ್ಧಾರ ಎಂದ ಸೂಪರ್​ಸ್ಟಾರ್​​

Rajinikanth: ತಮ್ಮ ರಾಜಕೀಯ ಪ್ರವೇಶಕ್ಕೆ ಯಾವ ರೀತಿ ಸ್ವಾಗತ ಸಿಗಲಿದೆ. ಈ ಬಗ್ಗೆ ಜನರ ಅಭಿಪ್ರಾಯ ಏನು ಎಂಬ ಬಗ್ಗೆ ಕೂಡ ಅವರು ಮುಖ್ಯಸ್ಥರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ರಜಿನಿಕಾಂತ್

ರಜಿನಿಕಾಂತ್

  • Share this:
ಚೆನ್ನೈ (ನ.30): ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುವ ಕುರಿತು ನಟ ​​ರಜನಿಕಾಂತ್​​ ನಿರ್ಧಾರ ಇನ್ನು ಅಸ್ಪಷ್ಟವಾಗಿದೆ. ಈಗಾಗಲೇ ರಾಜಕಾರಣ ಪ್ರವೇಶಿದಂತೆ ರಜನೀಕಾಂತ್​ಗೆ ವೈದ್ಯರು ಸೂಚನೆ ನೀಡಿದ್ದಾರೆ. ಈ ನಡುವೆ ತಮ್ಮ ರಾಜಕೀಯ ನಿರ್ಧಾರ ಕುರಿತು ಇಂದು ತಮ್ಮ ರಜನಿ ಮಕ್ಕಳ್​ ಮಂಡ್ರಂ​ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಜನವರಿಯಲ್ಲಿ ತಮ್ಮ ಪಕ್ಷವನ್ನು ಪ್ರಾರಂಭಿಸಲು ಸಿದ್ಧರಿದ್ಧೀರಾ ಎಂದು ಪದಾಧಿಕಾರಿಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 2021ರ ಚುನಾವಣೆಗೆ ವೇದಿಕೆ ಸಜ್ಜು ಮಾಡುವ ಉದ್ದೇಶದಿಂದಲೇ ಅವರು ಇಂದಿನ ಸಭೆ ಕರೆದಿದ್ದರು. ಈ ವೇಳೆ ಚರ್ಚೆ ನಡೆಸಿದ ಅವರು, ತಮ್ಮ ರಾಜಕೀಯ ಪ್ರವೇಶದ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ತಿಳಿಸಿದರು. ಪದಾಧಿಕಾರಿಗಳೊಂದಿಗಿನ ಸಭೆ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ಜಿಲ್ಲಾ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ತೆಗೆದುಕೊಳ್ಳವ ನಿರ್ಧಾರಕ್ಕೆ ಅವರು ಒಪ್ಪುತ್ತಾರೆ. ಆದಷ್ಟು ಬೇಗ ನನ್ನ ನಿರ್ಣಯ ತಿಳಿಸುತ್ತೇನೆ ಎಂದರು.

ಇನ್ನು ತಮ್ಮ ರಾಜಕೀಯ ಪ್ರವೇಶ ವಿಳಂಬವಾಗುತ್ತಿರುವ ಬಗ್ಗೆ ಕಳೆದ ತಿಂಗಳ ಮಾತನಾಡಿದ್ದ ಅವರು, ತಮ್ಮ ಮೂತ್ರಪಿಂಡದ ಸಮಸ್ಯೆಯಿಂದ ಬಳುತ್ತಿರುವುದಾಗಿ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನಲೆ ಕೋವಿಡ್​ ಸಂದರ್ಭದಲ್ಲಿನ ಓಡಾಟ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದರು.ಇನ್ನು ಸಭೆಯಲ್ಲಿ ಅವರು ಕೆಲವು ಪದಾಧೀಕರಾರಿಗಳ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದಾಗ ಮಾತ್ರ ನಾವು ಮುಂದಿನ ಹಂತಕ್ಕೆ ಹೋಗಬಹುದು. ಪಕ್ಷವನ್ನು ಪ್ರಾರಂಭಿಸಬೇಕೆ ಎಂಬ ಬಗ್ಗೆ ನಾನು ನಿರ್ಧರಿಸುತ್ತೇನೆ ಎಂಬ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೇ ರಾಜ್ಯದಲ್ಲಿ ಈ ಸಂದರ್ಭದಲ್ಲಿ ತಮ್ಮ ರಾಜಕೀಯ ಪ್ರವೇಶಕ್ಕೆ ಯಾವ ರೀತಿ ಸ್ವಾಗತ ಸಿಗಲಿದೆ. ಈ ಬಗ್ಗೆ ಜನರ ಅಭಿಪ್ರಾಯ ಏನು ಎಂಬ ಬಗ್ಗೆ ಕೂಡ ಅವರು ಮುಖ್ಯಸ್ಥರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನವರಿಯಲ್ಲಿ ನಾವು ರಾಜಕೀಯ ಪಕ್ಷ ಸ್ಥಾಪಿಸೋಣವೇ? ಇದಕ್ಕೆ ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕೆಲವು ಪದಾಧಿಕಾರಿಗಳು ಪಕ್ಷವನ್ನು ಆದಷ್ಟು ಬೇಗ ಶುರುಮಾಡಿದರೆ, ನಾವು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Published by:Seema R
First published: