• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Padma Award: ಹೃತಿಕ್ ರೋಷನ್‌ರ ' ಸೂಪರ್ 30' ಸಿನಿಮಾದ 'ರಿಯಲ್ ಹೀರೋ'ಗೆ ಪದ್ಮ ಪ್ರಶಸ್ತಿ, ಆನಂದ್‌ ಕುಮಾರ್‌ಗೆ ಒಲಿದು ಬಂತು ಗೌರವ

Padma Award: ಹೃತಿಕ್ ರೋಷನ್‌ರ ' ಸೂಪರ್ 30' ಸಿನಿಮಾದ 'ರಿಯಲ್ ಹೀರೋ'ಗೆ ಪದ್ಮ ಪ್ರಶಸ್ತಿ, ಆನಂದ್‌ ಕುಮಾರ್‌ಗೆ ಒಲಿದು ಬಂತು ಗೌರವ

ಸೂಪರ್​ 30 ಸಂಸ್ಥಾಪಕ ಆನಂದ್​ ಕುಮಾರ್​ಗೆ ಪದ್ಮಶ್ರೀ ಗೌರವ

ಸೂಪರ್​ 30 ಸಂಸ್ಥಾಪಕ ಆನಂದ್​ ಕುಮಾರ್​ಗೆ ಪದ್ಮಶ್ರೀ ಗೌರವ

ಆನಂದ್​ ಕುಮಾರ್​ ಅವರಿಗೆ ಪದ್ಮಶ್ರೀ ದೊರೆತಿರುವುದಕ್ಕೆ ಬಾಲಿವುಡ್​ ನಟ ಹೃತಿಕ್​ ರೋಷನ್​ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ್​ ಕುಮಾರ್ ಅವರ ಸಾಧನೆಯನ್ನು ಸಿನಿಮಾವಾಗಿ ತೆರೆ ಮೇಲೆ ತರಲಾಗಿತ್ತು. ಸೂಪರ್ 30 ಎಂಬ ಹೆಸರಿನಲ್ಲಿ ಮೂಡಿಬಂದಿದ್ದ ಸಿನಿಮಾದಲ್ಲಿ ಆನಂದ್​ ಕುಮಾರ್​ ಅವರ ಪಾತ್ರದಲ್ಲಿ ಹೃತಿಕ್ ರೋಷನ್​ ಅಭಿನಯಿಸಿದ್ದರು. ಇದೀಗ ಆನಂದ್ ಸಾಧನೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Mumbai, India
 • Share this:

ಮುಂಬೈ: ಗಣಿತ ಶಾಸ್ತ್ರಜ್ಞ ಹಾಗೂ ಸೂಪರ್​ 30 (Super 30 ) ಸಂಸ್ಥಾಪಕ ಆನಂದ್​ ಕುಮಾರ್ (Anand Kumar)​ ಅವರಿಗೆ ಈ ವರ್ಷದ ಪ್ರತಿಷ್ಠಿತ ಪದ್ಶಶ್ರೀ (Padma Shri)   ಪ್ರಶಸ್ತಿ ಲಭಿಸಿದೆ. 2023ರ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಈ ಗೌರವಕ್ಕೆ ಪಾತ್ರರಾದ ಬಿಹಾರದ ಮೂವರಲ್ಲಿ ಗಣ್ಯರಲ್ಲಿ ಆನಂದ್​ ಕುಮಾರ್​ ಕೂಡ ಒಬ್ಬರಾಗಿದ್ದಾರೆ. 74 ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ (Union Government) 106 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದರಲ್ಲಿ 91 ಸಾಧಕರಿಗೆ ಪದ್ಮಶ್ರೀ, 9 ಪದ್ಮಭೂಷಣ ಹಾಗೂ 6 ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಇದರಲ್ಲಿ ಆನಂದ್​ ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ತಮಗೆ ಪ್ರಶಸ್ತಿ ಸಂದಿರುವ ಬಗ್ಗೆ ಆನಂದ್ ಕುಮಾರ್​ ಟ್ವಿಟರ್ ಮೂಲಕ ಸಂತೋಷವ್ಯಕ್ತಪಡಿಸಿದ್ದಾರೆ. " ಭಾರತ ಸರ್ಕಾರವು ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ, ಈ ಗೌರವಕ್ಕೆ ನನ್ನನ್ನು ಅರ್ಹ ಎಂದು ಪರಿಗಣಿಸಿದ್ದಕ್ಕಾಗಿ ಸರ್ಕಾರಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೇ ಸಮಯದಲ್ಲಿ, ನನ್ನನ್ನು ಅತ್ಯಂತ ಕಷ್ಟದ ಸಮಯದಲ್ಲಿ ಕೈಬಿಡದೇ ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.


ಮತ್ತಷ್ಟು ಕೆಲಸ ಮಾಡಲು ಪ್ರೇರೇಪಣೆ


ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಐಐಟಿಯಂತಹ ಪರೀಕ್ಷೆಗೆ ತಯಾರು ಮಾಡುವ ಕಾರ್ಯವು ಆನಂದ್​ ಕುಮಾರ್​ಗೆ ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತ್ತು. ಈ ಪ್ರಶಸ್ತಿ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಆನಂದ್​, ನಾನು ಇನ್ನೂ ಬಹಳಷ್ಟು ದೂರವನ್ನು ಕ್ರಮಿಸಬೇಕಾಗಿದೆ. ನನಗೆ ಸಿಕ್ಕಿರುವ ಗೌರವ ಕೇವಲ ನನಗೆ ಮಾತ್ರವಲ್ಲ, ತಮ್ಮ ವಿದ್ಯಾರ್ಥಿಗಳ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುವ ನಾಡಿನ ಎಲ್ಲಾ ಶಿಕ್ಷಕರಿಗೆ ದೊರೆತ ಮನ್ನಣೆಯಾಗಿದೆ. ಇದು ನನಗೆ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಆನಂದ್ ಭಾವುಕರಾಗಿ ಹೇಳಿದ್ದಾರೆ.


ಇದನ್ನೂ ಓದಿ: SM Krishna: ಪದ್ಮವಿಭೂಷಣ ದೊರೆತಿದ್ದಕ್ಕೆ ಮೋದಿಗೆ ಋಣಿಯಾಗಿದ್ದೇನೆ, ಪ್ರಶಸ್ತಿ 7 ಕೋಟಿ ಕನ್ನಡಿಗರಿಗೆ ಅರ್ಪಣೆ- ಎಸ್ ಎಂ ಕೃಷ್ಣ


ಹೃತಿಕ್ ರೋಷನ್​ ಅಭಿನಂದನೆ


ಆನಂದ್​ ಕುಮಾರ್​ ಅವರಿಗೆ ಪದ್ಮಶ್ರೀ ದೊರೆತಿರುವುದಕ್ಕೆ ಬಾಲಿವುಡ್​ ನಟ ಹೃತಿಕ್​ ರೋಷನ್​ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ್​ ಕುಮಾರ್ ಅವರ ಸಾಧನೆಯನ್ನು ಸಿನಿಮಾವಾಗಿ ತೆರೆ ಮೇಲೆ ತರಲಾಗಿತ್ತು. ಸೂಪರ್ 30 ಎಂಬ ಹೆಸರಿನಲ್ಲಿ ಮೂಡಿಬಂದಿದ್ದ ಸಿನಿಮಾದಲ್ಲಿ ಆನಂದ್​ ಕುಮಾರ್​ ಅವರ ಪಾತ್ರದಲ್ಲಿ ಹೃತಿಕ್ ರೋಷನ್​ ಅಭಿನಯಿಸಿದ್ದರು. ಇದೀಗ ಆನಂದ್ ಸಾಧನೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಒಳ್ಳೆಯ ಕೆಲಸಕ್ಕೆ ಫಲ ಸಿಕ್ಕೇ ಸಿಗುತ್ತದೆ


ನಿಮಗೆ ಪದ್ಮಶ್ರೀ ಸಿಕ್ಕಿರುವುದು ಅತ್ಯುತ್ತಮ ಸುದ್ದಿ. ಒಳ್ಳೆಯ ಕಾರ್ಯಕ್ಕೆ ಎದಿಗೂ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ಅಭಿನಂದನೆಗಳು ಪದ್ಮಶ್ರೀ ಆನಂದ್ ಕುಮಾರ್ ಎಂದು ಹೃತಿಕ್ ರೋಷನ್​ ಟ್ವೀಟ್​ ಮಾಡಿ ಶುಭ ಕೋರಿದ್ದಾರೆ. 2019ರಲ್ಲಿ ಸೂಪರ್​ 30 ಸಿನಿಮಾ ತೆರೆಕಂಡಿತ್ತು. ಈ ನೈಜ ಕಥೆಯಾಧಾರಿತ ಸಿನಿಮಾದಲ್ಲಿ ಹೃತಿಕ್ ರೋಷನ್​ ಆನಂದ್​ ಕುಮಾರ್​  ಅವರ ಕೋಚ್​ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ದೇಶದ ಸಿನಿಮಾ ಪ್ರಿಯರ ಮನಗೆದ್ದಿದ್ದರು.ಬಡ ವಿದ್ಯಾರ್ಥಿಗಳಿಗೆ ಐಐಟಿ ತರಬೇತಿ


ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ 30 ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಯಶಸ್ವಿಯಾಗುವ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸುತ್ತಾ ಸೂಪರ್​ 30 ಸಿನಿಮಾ ಮಾಡಲಾಗಿತ್ತು. ಖಾಸಗಿ ಕೋಚಿಂಗ್ ಸೆಂಟರ್​ಗೆ ಪೈಪೋಟಿ ನೀಡಿ ಪಾಟ್ನಾದ ಆನಂದ್​ ಕುಮಾರ್​ ಬಡ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಮೂಲಕ ಪರೀಕ್ಷೆಯನ್ನು ಪಾಸ್​ ಮಾಡುವ ಕಥೆಯಾಗಿತ್ತು. ಈ ಚಿತ್ರವನ್ನು ಯಶ್​ ರಾಜ್ ಫಿಲ್ಮ್ ನಿರ್ಮಾಣ ಮಾಡಿತ್ತು.


ಇನ್ನು ಆನಂದ್​ ಕುಮಾರ್ ಅಲ್ಲದೆ ಬಿಹಾರದಲ್ಲಿ ಮತ್ತಿಬ್ಬರು ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ನಳಂದದ ಬಸ್ವಾನ್ ಬಿಗಾಹ ಗ್ರಾಮದ ನೇಕಾರ ಕಪಿಲ್ದಿಯೋ ಪ್ರಸಾದ್ ಮತ್ತು ಥಿಲಾ ಕಲಾವಿದೆ ಸುಭದ್ರಾ ದೇವಿ ಅವರು ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.

Published by:Rajesha B
First published: