ಉತ್ತರಪ್ರದೇಶ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್, ಆನೆ, ಗಿಳಿ, ಜಿಂಕೆ!

news18
Updated:August 25, 2018, 11:03 AM IST
ಉತ್ತರಪ್ರದೇಶ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್, ಆನೆ, ಗಿಳಿ, ಜಿಂಕೆ!
news18
Updated: August 25, 2018, 11:03 AM IST
ನ್ಯೂಸ್ 18 ಕನ್ನಡ

ಲಕ್ನೋ (ಆ.25): ಮತದಾರರ ಪಟ್ಟಿಯಲ್ಲಿ ಮೂಲ ವ್ಯಕ್ತಿಗಳ ಬದಲಿಗೆ ಬೇರೆಯವರ ಚಿತ್ರಗಳು ತಪ್ಪಾಗಿ ಮುದ್ರಣವಾಗುವುದು ಸಾಮಾನ್ಯ. ಆದರೆ, ಇದೀಗ ಉತ್ತರಪ್ರದೇಶದ ಚುನಾವಣಾ ಆಯೋಗ ಮನುಷ್ಯರ ಹೆಸರಿನ ಮುಂದೆ ಪ್ರಾಣಿಗಳ ಚಿತ್ರವನ್ನು ಮುದ್ರಿಸಿದೆ. ಇದಷ್ಟೇ ಅಲ್ಲದೇ, ಯಾರೊದ್ದೋ ಹೆಸರಿನ ಮಹಿಳೆಯ ಭಾವಚಿತ್ರದ ಬದಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಹಾಕಿ ಎಡವಟ್ಟು ಮಾಡಿದೆ.

ಚುನಾವಣೆ ಸಮೀಪಿಸುತ್ತಿರುವ ಕಾರಣ, ಹೊಸ ಮತದಾರರ ಸೇರ್ಪಡೆ, ಮತಪಟ್ಟಿ ಪರಿಷ್ಕರಣೆ, ತಿದ್ದುಪಡಿ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದು, ಈ ವೇಳೆ ರಾಜ್ಯದ ಬಲ್ಲಿಯಾ ಜಿಲ್ಲೆಯಲ್ಲಿ ಈ ಎಡವಟ್ಟುಗಳು ಕಾಣಿಸಿಕೊಂಡಿದೆ.

ಬಲ್ಲಿಯಾದ ವಿವೇಕಾನಂದ ಕಾಲೋನಿಯ ದುರ್ಗಾವತಿ ಸಿಂಗ್ ಹೆಸರಿನ ಮುಂದೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾವಚಿತ್ರ ಮೂಡಿಬಂದಿದೆ. ಕುನ್ವಾರ್ ಅಂಕುರ್ ಸಿಂಗ್ ಹೆಸರಿನ ಮುಂದೆ ಜಿಂಕೆ ಫೋಟೋ ಹಾಕಲಾಗಿದೆ. ರಾಜ್ಯದ ಮಾಜಿ ಸಚಿವ ನಾರದ ರೈ ಅವರ ಫೋಟೋ ಇರಬೇಕಾದ ಸ್ಥಳದಲ್ಲಿ ಆಫ್ರಿಕಾದ ಆನೆ ಚಿತ್ರ ಪ್ರಕಟವಾಗಿದೆ!

ಇದೇ ರೀತಿಯಾಗಿ ಹಲವರ ಹೆಸರಿನ ಮುಂದೆ ಕಾಡುಪ್ರಾಣಿಗಳ ಚಿತ್ರಗಳನ್ನು ಮುದ್ರಣಗೊಂಡಿವೆ. ಆದರೆ, ಮತದಾರರ ಹೆಸರು ಮತ್ತು ವಿಳಾಸ ಸರಿಯಾಗಿಯೇ ಇದೆ.

ಆಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳ ವಿರುದ್ಧ ಕ್ರಮಕೈಗೊಂಡು, ತನಿಖೆ ನಡೆಸುವಂತೆ ಬಲ್ಲಿಯಾ ಜಿಲ್ಲಾಡಳಿತ ಸೂಚನೆ ನೀಡಿದೆ.
Loading...

ಸರಿಯಾದ ಚಿತ್ರಗಳನ್ನು ಹಾಕುವ ಮುನ್ನ ತಾತ್ಕಾಲಿಕವಾಗಿ ಹೀಗೆ ಬೇರೆ ಚಿತ್ರಗಳನ್ನು ಹಾಕಿಡಲಾಗಿದೆ. ಆದರೆ, ಅಂತಿಮವಾಗಿ ಮುದ್ರಣಕ್ಕೆ ಕಳುಹಿಸುವ ಮುನ್ನ ಇದನ್ನು ಪರಿಶೀಲಿಸದ ಕಾರಣ ಆ ತಾತ್ಕಾಲಿಕ ಚಿತ್ರಗಳು ಹಾಗೆ ಉಳಿದುಕೊಂಡಿವೆ ಎಂದು ರಾಜ್ಯ ಚುನಾವಣಾ ಕಾರ್ಯಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...