ಆಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇವೆ, ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಆಲೋಚನೆ ಇಲ್ಲ ಎಂದ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ

ಸುನ್ನಿ ವಕ್ಫ್ ಮಂಡಳಿ ವಕೀಲ ಝಫರ್ಯಾಬ್ ಜಿಲಾನಿ ಅವರು ಆಯೋಧ್ಯೆ ತೀರ್ಪಿನಲ್ಲಿ ಸಾಕಷ್ಟು ವೈರುದ್ಧಗಳಿವೆ. ಈ ತೀರ್ಪು ನಮಗೆ ತೃಪ್ತಿ ನೀಡದ ಕಾರಣ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ ನಂತರ ವಕ್ಫ್ ಮಂಡಳಿ ಅಧ್ಯಕ್ಷ ಫಾರೂಖಿ ಈ ಹೇಳಿಕೆ ನೀಡಿದ್ದಾರೆ.

HR Ramesh | news18-kannada
Updated:November 9, 2019, 5:14 PM IST
ಆಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇವೆ, ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಆಲೋಚನೆ ಇಲ್ಲ ಎಂದ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ
ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷ ಜಾಫರ್ ಅಹ್ಮದ್ ಫಾರೂಖಿ
  • Share this:
ಲಕ್ನೋ: ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಪ್ರಕರಣದ ಮುಖ್ಯ ಅರ್ಜಿದಾರರಾದ ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷ ಜಾಫರ್ ಅಹ್ಮದ್ ಫಾರೂಖಿ ಅವರು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ. ಮತ್ತು ಈ ಆದೇಶವನ್ನು ಪ್ರಶ್ನಿಸುವ ಯಾವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಈ ಆದೇಶ ಪ್ರಶ್ನೆ ಮಾಡುವ ಯಾವುದೇ ಯೋಚನೆ ಇಲ್ಲ. ಈಗ ಹೊರಬಂದಿರುವ ತೀರ್ಪನ್ನು ಕೂಲಂಕಶವವಾಗಿ ಅಧ್ಯಯನ ಮಾಡಿ, ನಂತರ ಸುನ್ನಿ ವಕ್ಫ್ ಮಂಡಳಿ ತನ್ನ ವಿವರವಾದ ಹೇಳಿಕೆ ನೀಡಲಿದೆ. ಯಾವುದೇ ವಕೀಲರು ಅಥವಾ ಬೇರೊಬ್ಬರು ಈ ನಿರ್ಧಾರವನ್ನು ಮಂಡಳಿಯಿಂದ ಪ್ರಶ್ನಿಸಲಾಗುವುದು ಎಂದು ಹೇಳಿದರೆ, ಅದು ಸರಿ ಎಂದು ಯಾರೂ ಪರಿಗಣಿಸಬಾರದು ಎಂದು ಫಾರೂಖಿ ಹೇಳಿದರು.

ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷನಾಗಿ ನಾನು, ಸ್ಪಷ್ಟಪಡಿಸುವುದು ಏನೆಂದರೆ, ಸುನ್ನಿ ವಕ್ಫ್ ಮಂಡಳಿ ಸುಪ್ರೀಂಕೋರ್ಟ್ ತೀರ್ಪನ್ನು ಪರಾಮರ್ಶಿಸುವುದಿಲ್ಲ. ಅಥವಾ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ. ಆದ್ದರಿಂದ ವೈಯಕ್ತಿಕವಾಗಿ, ವಕೀಲರು, ಸಂಘ-ಸಂಸ್ಥೆಗಳು ಸುನ್ನಿ ವಕ್ಫ್ ಮಂಡಳಿ ಈ ಆದೇಶವನ್ನು ಪ್ರಶ್ನೆ ಮಾಡಲಿದೆ ಎಂದು ಹೇಳಿದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸುನ್ನಿ ವಕ್ಫ್ ಮಂಡಳಿ ವಕೀಲ ಝಫರ್ಯಾಬ್ ಜಿಲಾನಿ ಅವರು ಆಯೋಧ್ಯೆ ತೀರ್ಪಿನಲ್ಲಿ ಸಾಕಷ್ಟು ವೈರುದ್ಧಗಳಿವೆ. ಈ ತೀರ್ಪು ನಮಗೆ ತೃಪ್ತಿ ನೀಡದ ಕಾರಣ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ ನಂತರ ವಕ್ಫ್ ಮಂಡಳಿ ಅಧ್ಯಕ್ಷ ಫಾರೂಖಿ ಈ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading