• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sunil Gavaskar: ಸುನಿಲ್‌ ಗವಾಸ್ಕರ್ ಕ್ರಿಕೆಟ್‌ನಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋ! ಯಾರಿಗೂ ಗೊತ್ತಿಲ್ಲದ ರಹಸ್ಯ ತಿಳಿಸಿದ ಪುತ್ರ!

Sunil Gavaskar: ಸುನಿಲ್‌ ಗವಾಸ್ಕರ್ ಕ್ರಿಕೆಟ್‌ನಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋ! ಯಾರಿಗೂ ಗೊತ್ತಿಲ್ಲದ ರಹಸ್ಯ ತಿಳಿಸಿದ ಪುತ್ರ!

ಸುನೀಲ್ ಗವಾಸ್ಕರ್

ಸುನೀಲ್ ಗವಾಸ್ಕರ್

ಬಾಬರಿ ಮಸೀದಿ ಧ್ವಂಸ ಘಟನೆ ಉಂಟಾದ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗರಾಗಿದ್ದ ಸುನೀಲ್ ಗವಾಸ್ಕರ್ ಅವರು ಅಂದು ತೆಗೆದುಕೊಂಡ ಒಂದು ತೀರ್ಮಾನ ಒಂದು ಕುಟುಂಬದ ಜೀವ ಉಳಿಸಿದ್ದು ಮಾತ್ರವಲ್ಲದೇ, ಅವರನ್ನು ನಿಜ ಜೀವನದಲ್ಲೂ ಹೀರೋ ಮಾಡಿಸಿದೆ.

  • Trending Desk
  • 5-MIN READ
  • Last Updated :
  • Mumbai, India
  • Share this:

ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ಮೈದಾನದಲ್ಲಷ್ಟೇ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಭಾರತ ಕ್ರಿಕೆಟ್ (Indian Cricket Player) ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಮಗ ರೋಹನ್ ‌ಅವರು 1992-93ರಲ್ಲಿ ಮುಂಬೈನಲ್ಲಿ (Mumbai) ನಡೆದ ಕೋಮುಗಲಭೆಯ (Communal Riots) ಸಂದರ್ಭದ ಬಗ್ಗೆ ಹೇಳಿದ್ದು, ತನ್ನ ತಂದೆಯ ಗುಂಡಿಗೆಯ ಬಗ್ಗೆ ಮಾತನಾಡಿದ್ದಾರೆ.


ಅಪ್ಪನ ಧೈರ್ಯದ ಬಗ್ಗೆ ಬಿಚ್ಚಿಟ್ಟ ಪುತ್ರ


ಲಿಟಲ್‌ ಮಾಸ್ಟರ್‌ ಎಂದೇ ಖ್ಯಾತರಾಗಿದ್ದ ಸುನಿಲ್‌ ಗವಾಸ್ಕರ್‌ ತಮ್ಮ ಹೊಡಿಬಡಿ ಆಟದಿಂದಲೇ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದಿದ್ದರು. ಆಟದಲ್ಲಿ ಒಂಚೂರು ಕಳಂಕವಿಲ್ಲದೇ ಹೆಸರು ಮಾಡಿದ್ದ ಇವರು, ಧೈರ್ಯಶಾಲಿ ಕೂಡ ಹೌದು. ಇವರ ಗಟ್ಟಿತನದಿಂದ ಒಂದು ಅಮಾಯಕ ಟ್ಯಾಕ್ಸಿ ಚಾಲಕ ಮತ್ತು ಅವರ ಕುಟುಂಬದ ಜೀವವೇ ಉಳಿದಿದೆ.


ಇದನ್ನೂ ಓದಿ: WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​


ಮುಂಬೈನ ಕ್ರೀಡಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಸುನಿಲ್‌ ಗವಾಸ್ಕರ್‌ ಮಗ ಮೂವತ್ತು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಸುನಿಲ್‌ ಯಾರ ಬಳಿಯೂ ಹೇಳದ ಪ್ರಸಂಗವನ್ನು ಮಗ ಬಹಿರಂಗಪಡಿಸಿದ್ದಾರೆ.


ಟ್ಯಾಕ್ಸಿ ಚಾಲಕನ ಕುಟುಂಬದ ಜೀವ ಉಳಿಸಿದ್ದಾರೆ ಸುನಿಲ್‌ ಗವಾಸ್ಕರ್


1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಎಲ್ಲೆಂದರಲ್ಲಿ ಹಿಂಸಾಚಾರ, ಗಲಭೆ, ಹೊಡೆದಾಟ ಹೀಗೆ ಗಲಾಟೆಗಳು ನಡೆಯುತ್ತಿದ್ದವು. ಮನೆಯಿಂದ ಹೊರ ಬರಲು ಸಹ ಜನ ಅಂಜುತ್ತಿದ್ದರು. ಇಂತಹ ವೇಳೆಯಲ್ಲಿ ಮುಂಬೈ ಅಂತೂ ಕೋಮು ಹತ್ಯಾಕಾಂಡದ ಜ್ವಾಲೆಯಲ್ಲಿ ಮುಳುಗಿತ್ತು.


ಇದೇ ಸಂದರ್ಭದಲ್ಲಿ ಸುನಿಲ್‌ ಅವರ ಮನೆ ಮುಂದೆ ಟ್ಯಾಕ್ಸಿ ಡ್ರೈವರ್ ಮತ್ತು ಅವನ ಕುಟುಂಬ ಹೋಗುತ್ತಿತ್ತು. ಈ ಕುಟುಂಬದ ಮೇಲೆ ದಾಳಿ ಮಾಡಿದ ಗುಂಪು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕುಟುಂಬದ ವಿರುದ್ಧ ಹಲ್ಲೆಗೆ ಪ್ರಯತ್ನಿಸಿತು. ಚಾಲಕನಿಗೆ ಹೊಡೆದು, ಮಕ್ಕಳನ್ನು ಸೇರಿ ಎಲ್ಲರನ್ನು ಹತ್ಯೆ, ಮಾಡಲು ಪ್ರಯತ್ನಿಸಿದರು.


ಸುನಿಲ್‌ ಗವಾಸ್ಕರ್‌ ಮನೆಯ ಬಾಲ್ಕನಿಯಲ್ಲಿ ಈ ದೃಶ್ಯ ನೋಡಿದರು. ನಂತರ ತಡ ಮಾಡದೇ ಹೆಂಡತಿಗೆ, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸು ಎಂದು ಹೇಳಿ ಮನೆಯಿಂದ ಸ್ಥಳಕ್ಕೆ ಧಾವಿಸಿದರು.


ಗಲಭೆಕೋರರಿಗೆ ತಿಳಿ ಹೇಳಿದ ಲಿಟಲ್‌ ಮಾಸ್ಟರ್


ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಎದೆಗುಂದದೇ ಬಂದ ಸುನಿಲ್‌ ಗಲಭೆಕೋರರಿಗೆ, ನೀವು ಈ ಕುಟುಂಬಕ್ಕೆ ಏನು ಮಾಡಬೇಕು ಅಂತಿದ್ದೀರೋ ಅದನ್ನು ಮೊದಲು ನನಗೆ ಮಾಡಿ ಅಂತಾ ಹೇಳಿದರು. ಸುನಿಲ್‌ ಹೆಸರಾಂತ ಕ್ರಿಕೆಟಿಗರ್‌ ಆಗಿದ್ದು, ಆಗಿನ ಎಲ್ಲರಿಗೂ ಇವರ ಮುಖ ಪರಿಚಯವಿತ್ತು. ಗಲಭೆಕೋರರು ಸುನಿಲ್‌ ಅವರನ್ನು ಗುರುತಿಸಿದರು. ಏನೂ ಮಾತನಾಡದೇ ಯಾರಿಗೂ ಏನು ಮಾಡದೇ ಅಲ್ಲಿಂದ ಹೋರಟು ಹೋದರು. ಅಷ್ಟರಲ್ಲಾಗಲೇ ಅಕ್ಕಪಕ್ಕದ ನಿವಾಸಿಗಳು ಕೂಡ ಅಲ್ಲಿ ಸುನಿಲ್‌ ಪರ ನಿಂತಿದ್ದರು.


ಇದನ್ನೂ ಓದಿ: Sunil Gavaskar: ಐಸಿಸಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಹತ್ವದ ಸೂಚನೆ ನೀಡಿದ ಗವಾಸ್ಕರ್


ಕೊನೆಗೆ ಗವಾಸ್ಕರ್ ಅವರೇ ಆ ಚಾಲಕ ಕುಟುಂಬಕ್ಕೆ ತಕ್ಷಣ ಸ್ಥಳದಿಂದ ನಿರ್ಗಮಿಸಿ ಸುರಕ್ಷಿತವಾಗಿ ಮನೆಗೆ ತಲುಪುವಂತೆ ಸಲಹೆ ನೀಡಿದರು. ಕ್ರಿಕೆಟರ್‌ ಬಗ್ಗೆ ಗೊತ್ತಿಲ್ಲದ ಈ ಸಂಗತಿಯನ್ನು ಮಗ ಬಹಿರಂಗಪಡಿಸಿದ್ದಾರೆ. ತನ್ನ ತಂದೆಯ ಬ್ಯಾಟಿಂಗ್ ಕೌಶಲ್ಯ ಮತ್ತು ಕ್ರಿಕೆಟ್ ಮೈದಾನದಲ್ಲಿ ದೃಢಸಂಕಲ್ಪವನ್ನು ಶ್ಲಾಘಿಸಿದ ರೋಹನ್ ಗವಾಸ್ಕರ್ ತನ್ನ ತಂದೆಯ ಶೌರ್ಯ ಮತ್ತು ಗಲಭೆಯ ಸಮಯದಲ್ಲಿ ಏನಾಯಿತು ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು.


ಡಿಸೆಂಬರ್ 1992 ಮತ್ತು ಜನವರಿ 1993 ರ ನಡುವೆ ಮುಂಬೈನಲ್ಲಿ 900 ಕ್ಕೂ ಹೆಚ್ಚು ಜನರು ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸುನಿಲ್ ಗವಾಸ್ಕರ್ ಅಂದು ಪ್ರದರ್ಶಿಸಿದ ಶಾಂತಿಯ ಬಗ್ಗೆ ಧೈರ್ಯ ಮತ್ತು ಬದ್ಧತೆಯನ್ನು ಹೊಂದಿರುವ ಇನ್ನೂ ಹೆಚ್ಚಿನ ಮಹನೀಯರು ಈ ದೇಶಕ್ಕೆ ಅಗತ್ಯವಿದೆ ಎನ್ನಬಹುದು.

top videos



    ನಮ್ಮ ಸೆಲೆಬ್ರಿಟಿಗಳು ಈ ರೀತಿಯ ನಿರ್ಭಯತೆಯನ್ನು ತೋರಿಸಿದರೆ, ಇನ್ನೂ ಅನೇಕರು ಅವರ ಮಾದರಿಯನ್ನು ಅನುಸರಿಸುತ್ತಾರೆ ಮತ್ತು ಅಂತಹ ಸಂಘರ್ಷಗಳು ಉಂಟಾದಾಗ ಸಾಕಷ್ಟು ಅಮಾಯಕರ ಜೀವಗಳು ಸಹ ಉಳಿಯುತ್ತವೆ.

    First published: