ದೇಶಕ್ಕೆ Infosys ಕೊಡುಗೆ ಅಪಾರ: ಪಾಂಚಜನ್ಯ RSS ಮುಖವಾಣಿ ಅಲ್ಲ; ವಿವಾದಕ್ಕೆ ತೆರೆ ಎಳೆಯಲು ಮುಂದಾದ ಸಂಘ

ಪಾಂಚಜನ್ಯ ಆರ್​ಎಸ್​ಎಸ್​ ಮುಖವಾಣಿ ಅಲ್ಲ. ನಿಯತಕಾಲಿಕ ಅಭಿಪ್ರಾಯ ಅದರ ವೈಯಕ್ತಿಕ ನಿರ್ಧಾರ. ಇನ್ಫೋಸಿಸ್ ವಿರುದ್ಧದ ಹೇಳಿಕೆಯಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಂಘ ತಿಳಿಸಿದೆ

ಸುನೀಲ್​ ಅಂಬೇಕರ್​

ಸುನೀಲ್​ ಅಂಬೇಕರ್​

 • Share this:
  ನವದೆಹಲಿ (ಸೆ. 5):  ಐಟಿ ದಿಗ್ಗಜ ಇನ್ಫೋಸಿಸ್ ( IT giant Infosys) ​ ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದ್ದು, ತುಕ್ಡೆ ತುಕ್ಡೆ ಗ್ಯಾಂಗ್​ ಜೊತೆ ಕೈ ಜೋಡಿಸಿದೆ ಎಂಬ ಆರ್​ಎಸ್​ಎಸ್ ಮುಖವಾಣಿ ಪಾಂಚಜನ್ಯ ವರದಿ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ದೇಶಕ್ಕೆ ಇನ್ಫೋಸಿಸ್​ ಸಾಧನೆ ನಡುವೆ ಇಂತಹ ಆರೋಪ ವ್ಯಕ್ತವಾಗಿರುವ ಹಿನ್ನಲೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ವಿವಾದ ಬೆನ್ನಲ್ಲೇ ಈ ಕುರಿತು ಮಾತನಾಡಿರುವ ಆರ್​ಎಸ್​ಎಸ್​ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್​ ಅಂಬೇಕರ್​, ದೇಶಕ್ಕೆ ಇನ್ಫೋಸಿಸ್​ ಕೊಡುಗೆ ಅಪಾರ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಪಾಂಚಜನ್ಯ  ಆರ್​​ಎಸ್​ಎಸ್​ ಮುಖವಾಣಿ ಅಲ್ಲ ((Panchajanya is not RSS mouthpiece )  ಎನ್ನುವ ಮೂಲಕ ಈ ವಿವಾದದಿಂದ ಸಂಘವನ್ನು ದೂರ ಇಡು ಪ್ರಯತ್ನ ನಡೆಸಿದ್ದಾರೆ.

  ಈ ವೇಳೆ ಮಾತನಾಡಿರುವ ಅವರು, ಪಾಂಚಜನ್ಯ ಆರ್​ಎಸ್​ಎಸ್​ ಮುಖವಾಣಿ ಅಲ್ಲ. ನಿಯತಕಾಲಿಕ ಅಭಿಪ್ರಾಯ ಅದರ ವೈಯಕ್ತಿಕ ನಿರ್ಧಾರ. ಸಂಘಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ದೇಶದ ಪ್ರಗತಿಯಲ್ಲಿ ಇನ್ಫೋಸಿಸ್ ಪ್ರಮುಖ ಕೊಡುಗೆ ನೀಡಿದೆ. ಇನ್ಫೋಸಿಸ್ ನಡೆಸುತ್ತಿರುವ ಪೋರ್ಟಲ್‌ನಲ್ಲಿ ಕೆಲವು ಸಮಸ್ಯೆಗಳಿರಬಹುದು, ಆದರೆ ಈ ಸಂದರ್ಭದಲ್ಲಿ ಪಾಂಚಜನ್ಯ ಪ್ರಕಟಿಸಿದ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಪಾಂಚಜನ್ಯವು ಆರ್‌ಎಸ್‌ಎಸ್ ಮುಖವಾಣಿಯಾಗಿಲ್ಲ. ಲೇಖನದ ಅಭಿಪ್ರಾಯಗಳನ್ನು ಸಂಘದೊಂದಿಗೆ ಸಂಬಂಧಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.


  ಏನಿದೆ ಲೇಖನದಲ್ಲಿ?
  ಭಾರತದ ಐಟಿ ದಿಗ್ಗಜವಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್​ ಕಂಪನಿಯು ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ. ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್​ಗೆ ಸಹಾಯ ಮಾಡಿದೆ ಎಂದು ಸಖ್​ ಔರ್​ ಹಾನಿ ಎಂಬ ಶೀರ್ಷಿಕೆ ಅಡಿ ಲೇಖನ ಪ್ರಕಟಿಸಲಾಗಿದೆ. ಇದೇ ವೇಳೆ ಸರ್ಕಾರದ ಯೋಜನೆಗಳನ್ನು ದೊಡ್ಡ ತಪ್ಪು ಮಾಡುವುದು ಇದೇ ಮೊದಲಲ್ಲ ಎಂದಿದೆ.

  ಇನ್ಫೋಸಿಸ್​ ಅಭಿವೃದ್ಧಿಪಡಿಸಿದ ಆದಾಯ ತೆರಿಗೆಯ ಇ-ಫೈಲಿಂಗ್ (new Income Tax portal ) ​ ಪೋರ್ಟಲ್​ ಸಾಕಷ್ಟು ಸಮಸ್ಯೆಯಿಂದ ಕೂಡಿತು. ಈ ಸಂಬಂಧ ಕಂಪನಿಯ ಸಿಇಒಗೆ ಸಮನ್ಸ್​ ಕೂಡ ಜಾರಿ ಮಾಡಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮುಂದೆ ಹಾಜರಾಗಿದ್ದ ಇನ್ಫೋಸಿಸ್​ ಸಿಇಒ ಸಲೀಲ್​ ಪರೇಖ್​ ಈ ದೋಷವನ್ನು ಸೆ. 15ರೊಳಗೆ ಸರಿಪಡಿಸುವುದಾಗಿ ತಿಳಿಸಿದ್ದರು.

  ಈ ತಾಂತ್ರಿಕ ಸಮಸ್ಯೆ ಕುರಿತು ನಿಯತಕಾಲಿಕೆಯಲ್ಲಿ ಉಲ್ಲೇಖಿಸಿ ವಾಗ್ದಾಳಿ ನಡೆಸಲಾಗಿದ್ದು, ಪೋರ್ಟಲ್​ನ ಈ ಸಮಸ್ಯೆಯಿಂದ ಬಳಕೆದಾರರು ಮತ್ತು ಸರ್ಕಾರ ನಂಬಿಕೆಗೆ ಘಾಸಿ ತರುವ ಪ್ರಯತ್ನ ಇನ್ಫೋಸಿಸ್​ ಮಾಡಿದೆ ಎಂದು ದೂರಲಾಗಿದೆ.

  ಇದನ್ನು ಓದಿ: ಆದಾಯ ತೆರಿಗೆ ಇ-ಫೈಲಿಂಗ್​ ಪೋರ್ಟಲ್​ನಲ್ಲಿ ಸಮಸ್ಯೆ; ಇನ್ಫೋಸಿಸ್ ಸಿಇಒಗೆ ಸಮನ್ಸ್

  ಇನ್ಫೋಸಿಸ್‌ನ ಕಾರ್ಯ ವೈಖರಿಯನ್ನು ಪ್ರಶ್ನಿಸುವುದರ ಜೊತೆಗೆ, ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಎಡಪಂಥೀಯ, ರಾಷ್ಟ್ರವಿರೋಧಿಗಳು ಮತ್ತು ಅಂತಹ ಮಾಧ್ಯಮಗಳಿಗೆ ಇನ್ಫೋಸಿಸ್​ ಹಣ ಒದಗಿಸುತ್ತಿದೆ ಎಂದು ಆರೋಪಿಸಲಾಗಿದೆ.

  ಜಾತಿ ದ್ವೇಷವನ್ನು ಹರಡುವ ಕೆಲವು ಸಂಸ್ಥೆಗಳಿಗೆ  ಕೂಡ ಇನ್ಫೋಸಿಸ್ ಧನ ಸಹಾಯ ಮಾಡಿದೆ. ಕಂಪನಿಯು ದೇಶವಿರೋಧಿ ಸಂಘಟನೆಗಳಿಗೆ ಧನಸಹಾಯ ನೀಡಲು ಕಾರಣವೇನು ಎಂದು ಇನ್ಫೋಸಿಸ್ ಕಂಪನಿಯನ್ನು ಕೇಳಬೇಕಲ್ಲವೇ? ಇಂತಹ ಕಂಪನಿಗಳಿಗೆ ಸರ್ಕಾರಿ-ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೇ? ಎಂದು ಪತ್ರಿಕೆ ಹಲವಾರು ಪ್ರಶ್ನೆಗಳನ್ನು ಕೇಳಿದೆ.

  ಇನ್ಫೋಸಿಸ್​ ಗುತ್ತಿಗೆ ಪಡೆದ ಯೋಜನೆಗಳಲ್ಲಿನ ದೋಷಗಳು ಭಾರತೀಯ ಕಂಪನಿಗಳಿಗೆ  ಟೆಂಡರ್ ನೀಡುವ ತನ್ನ ನೀತಿಯನ್ನು ಬದಲಿಸಲು ಸರ್ಕಾರವನ್ನು ಒತ್ತಾಯಿಸಲು  ಪ್ರತಿಪಕ್ಷಗಳ ತಂತ್ರವಾಗಿದೆ ಎಂದು  ಪತ್ರಿಕೆ ಆರೋಪಿಸಿದೆ.  ಅಲ್ಲದೇ ಇದು ಆತ್ಮನಿರ್ಭರ ಭಾರತ್ ಕಲ್ಪನೆಯನ್ನು ಹಾನಿ ಮಾಡುವ ಪ್ರಯತ್ನ ಎಂದಿದೆ
  Published by:Seema R
  First published: