Republic Day: ಗೂಗಲ್ ಸಿಇಓ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರಶಸ್ತಿ

Padma Bhushan Award: ವಿಶ್ವದ ದಿಗ್ಗಜ ಸಂಸ್ಥೆಗಳ ಸಿಇಓ ಆಗಿರುವ ಇಬ್ಬರೂ ಭಾರತೀಯರಾದ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಗೌರವ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

 ಸುಂದರ್ ಪಿಚೈ, ಸತ್ಯ ನಾಡೆಲ್ಲಾ

ಸುಂದರ್ ಪಿಚೈ, ಸತ್ಯ ನಾಡೆಲ್ಲಾ

 • Share this:
  73 ನೇ ಗಣರಾಜ್ಯೋತ್ಸವದ(Republic Day) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು(Central Government) ಈ ವರ್ಷದ ಪದ್ಮ ಪ್ರಶಸ್ತಿಯನ್ನು(Padma Award) ಘೋಷಣೆ ಮಾಡಿದ್ದು, ಪಟ್ಟಿಯನ್ನು ಪ್ರಕಟಿಸಿದೆ. ಈ ಸಲ 4 ಪದ್ಮವಿಭೂಷಣ(Padma Vibhushan), 17 ಪದ್ಮಭೂಷಣ(Padma Bhushan), 107 ಪದ್ಮಶ್ರೀ(Padma shri) ಸೇರಿ ಒಟ್ಟು 128 ಪದ್ಮಪ್ರಶಸ್ತಿಗಳನ್ನು(Award) ವಿಧಾನ್ ಶೇತ್ರ ದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೀಡಲು ಸರ್ಕಾರ ಘೋಷಣೆ ಮಾಡಿದೆ.. ಅದರಲ್ಲೂ ಬಹುಮುಖ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ ಇಬ್ಬರೂ ಗಣ್ಯರಿಗೆ ಈಬಾರಿಯ ಗಣರಾಜ್ಯೋತ್ಸವದಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡುವುದಾಗಿ ಸರ್ಕಾರ ಪ್ರಕಟಣೆ ಮಾಡಿದೆ..

  ಸುಂದರ್ ಪಿಚೈ, ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಗೌರವ

  ಹೌದು ಭಾರತದಲ್ಲಿ ಜನಿಸಿ, ಭಾರತದಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ದಿಗ್ಗಜ ಸಂಸ್ಥೆಗಳ ಸಿಇಓ ಆಗಿರುವ ಇಬ್ಬರೂ ಭಾರತೀಯರಾದ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಗೌರವ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

  ಇದನ್ನೂ ಓದಿ: ದೇಶದಲ್ಲಿ 73ನೇ ಗಣರಾಜ್ಯೋತ್ಸವ ಸಂಭ್ರಮ; ರಾಜಪಥ್​​ ನಲ್ಲಿ ಸಾಂಸ್ಕೃತಿ, ಸೇನಾ ಶಕ್ತಿ ಅನಾವರಣ

  ಸತ್ಯ ನಾಡೆಲ್ಲಾ ಹಿನ್ನೆಲೆ ಏನು...?.

  ಭಾರತೀಯ ಮೂಲದ ಸತ್ಯ ಸತ್ಯ ನಾಡೆಲ್ಲಾ ಅವರು ಪ್ರಸ್ತುತ ಮೈಕ್ರೋಸಾಫ್ಟ್ ಕಂಪನಿಯ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ.. ಸತ್ಯ ನಾಡೆಲ್ಲಾ ಅವರು 1967 ರಲ್ಲಿ ಭಾರತದ ಹೈದರಾಬಾದ್‌ನಲ್ಲಿ . ಅವರ ತಂದೆ ಭಾರತೀಯ ಆಡಳಿತ ಸೇವೆಯಲ್ಲಿ ನಾಗರಿಕ ಸೇವಕರಾಗಿದ್ದರು. ನಾಡೆಲ್ಲಾ ಅವರು 1987 ರಲ್ಲಿ ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದವಿ ಮುಗಿದ ನಂತರ ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಪದವಿ ಅಧ್ಯಯನ ಮಾಡಲು ಅಮೆರಿಕಕ್ಕೆ ಹೋದರು. ನಾಡೆಲ್ಲಾ 1990 ರಲ್ಲಿ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿ ಪಡೆದರು ಮತ್ತು ನಂತರ ಚಿಕಾಗೊ ವಿಶ್ವವಿದ್ಯಾಲಯದಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

  ತಂತ್ರಜ್ಞಾನದ ಸಿಬ್ಬಂದಿಯಾಗಿ ಸನ್ ಮೈಕ್ರೋಸಿಸ್ಟಮ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ನಾಡೆಲ್ಲಾ 1992 ರಲ್ಲಿ ಮೈಕ್ರೋಸಾಫ್ಟ್ಗೆ ಸೇರಿದರು ಮತ್ತು ಮೈಕ್ರೋಸಾಫ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಅನ್ನು ಮುನ್ನಡೆಸಿದರು.ಅಲ್ಲದೆ 2014ರಲ್ಲಿ ಮೈಕ್ರೊಸಾಫ್ಟ್‌ನ ಸಿಇಒ ಆಗಿ ನೇಮಕವಾಗಿದ್ದರು. ಮೈಕ್ರೊಸಾಫ್ಟ್‌ನಿಂದ ಲಿಂಕ್ಡ್‌ನ್‌, ನ್ಯೂಯಾನ್ಸ್‌ ಕಮ್ಯುನಿಕೇಶನ್ಸ್‌ ಮತ್ತು ಜೆನಿಮ್ಯಾಕ್ಸ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮೈಕ್ರೊಸಾಫ್ಟ್‌ನ ರಚನಾತ್ಮಕ ಬದಲಾವಣೆಗೆ ನಾಡೆಳ್ಳಾ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ..

  ಸುಂದರ್ ಪಿಚೈ ಹಿನ್ನೆಲೆ ಏನು..?

  ಗೂಗಲ್​ ಸಿಇಓ ಸುಂದರ್ ಪಿಚೈ ಅವರ ಪೂರ್ಣ ಹೆಸರು ಪಿಚೈ ಸುಂದರ್​ರಾಜನ್. ಮಧುರೈನ ಮಧ್ಯಮ ಕುಟುಂಬದಲ್ಲಿ 1972ರಲ್ಲಿ ಜನಿಸಿದ ಸುಂದರ್ ಪಿಚೈ ಅವರ ತಂದೆ ರಘುನಾಥ ಪಿಚೈ ಬ್ರಿಟೀಷ್​ ಸಂಸ್ಥೆ ಜಿಇಸಿ ಎಂಬಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ ಲಕ್ಷ್ಮೀ ಸ್ಟೆನೋಗ್ರಾಫರ್ ಆಗಿದ್ದರು. ಸುಂದರ್ ಪಿಚೈ ಐಐಟಿ ಖರಗ್ಪುರದಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿಯಿಂದ ಎಂಎಸ್ ಮತ್ತು ಪೆನ್ಸಿಲ್ವೇನಿಯಾ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

  ಇದನ್ನೂ ಓದಿ: ದೆಹಲಿಯ ಗಣರಾಜ್ಯೋತ್ಸವದಲ್ಲಿ ಏನೇನೆಲ್ಲಾ ಉಂಟು-ಇಲ್ಲಿದೆ ಸಂಪೂರ್ಣ ವಿವರ

  ಅದಕ್ಕೂ ಮೊದಲು ಮೊದಲು ಅವರು ಮೆಕೆನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಂತರ 2004ರಲ್ಲಿ ಗೂಗಲ್ ಸೇರಿದ್ದರು.ಕೊನೆಗೆ 2015ರಲ್ಲಿ ಗೂಗಲ್‌ ಸಿಇಒ ಆಗಿ ಸುಂದರ್ ಪಿಚೈ ಅಧಿಕಾರ ವಹಿಸಿಕೊಂಡರು. ಬಳಿಕ ಗೂಗಲ್ ಮತ್ತು ಆಲ್ಫಬೆಟ್ ಸಿಇಒ ಆಗಿ 2019ರಲ್ಲಿ ಬಡ್ತಿ ಪಡೆದುಕೊಂಡ್ರು. ಇನ್ನು ವಿಶೇಷ ಅಂದ್ರೆ ವಿಶ್ವದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳಲ್ಲಿ ಭಾರತ ಮೂಲದ ಸುಂದರ್ ಪಿಚೈ ಒಬ್ಬರು. 2019ರಲ್ಲಿ ಅವರಿಗೆ 28 ಕೋಟಿ ಡಾಲರ್ ಗೂ ಹೆಚ್ಚುವೇತನವನ್ನು ಪಡೆದಿದ್ದಾರೆ ಎಂದು ಆಲ್ಫಾಬೆಟ್ ಕಂಪೆನಿ ಮಾಹಿತಿ ನೀಡಿದೆ.
  Published by:ranjumbkgowda1 ranjumbkgowda1
  First published: