ದೇವರ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳುವ ಅಪರೂಪದ ಕ್ಷಣ; ಎಲ್ಲಿದೆ ಆ ದೇವಾಲಯ ಗೊತ್ತೇ.?

Latha CG | news18
Updated:October 2, 2018, 4:44 PM IST
ದೇವರ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳುವ ಅಪರೂಪದ ಕ್ಷಣ; ಎಲ್ಲಿದೆ ಆ ದೇವಾಲಯ ಗೊತ್ತೇ.?
  • Advertorial
  • Last Updated: October 2, 2018, 4:44 PM IST
  • Share this:
-ನ್ಯೂಸ್​ 18 ಕನ್ನಡ

ಆಂಧ್ರಪ್ರದೇಶ,(ಅ.02):  ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿರುವ ದೇವರ ವಿಗ್ರಹವನ್ನು ಸ್ಪರ್ಶಿಸುತ್ತವೆ. ಈ ಅಪರೂಪದ ಭವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗಾದರೆ ಆ ದೇವಾಲಯ ಯಾವುದು? ಎಲ್ಲಿದೆ? ಅಂತೀರಾ. ಇಲ್ಲಿದೆ ಸ್ಟೋರಿ.

ಆಂಧ್ರಪ್ರದೇಶದ ಅರಸವಳ್ಳಿಯಲ್ಲಿರುವ ಸೂರ್ಯನಾರಾಯಣಸ್ವಾಮಿ ಹಿಂದೂ ದೇವಾಲಯದಲ್ಲಿ ಗರ್ಭಗುಡಿಯಲ್ಲಿರುವ ದೇವರ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬಿದ್ದಿದ್ದು, ಭವ್ಯ ಕ್ಷಣಕ್ಕೆ ಸಾಕ್ಷಿಯಾಗಿದೆ.

ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿದ್ದಾರೆ. ಸೂರ್ಯ ರಶ್ಮಿ ದೇವರ ಮೂರ್ತಿಯನ್ನು ಸ್ಪರ್ಶಿಸುವುದೇ ಒಂದು ವಿಶೇಷ ಹಾಗೂ ಅಚ್ಚರಿ. ಇದೊಂದು ಅಪರೂಪದ ದೃಶ್ಯವಾಗಿದೆ.ಮುಂಜಾನೆ 6.03 ನಿಮಿಷದಿಂದ 6.06 ನಿಮಿಷದವರೆಗೆ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿರುವ ದೇವರ ವಿಗ್ರಹದ ಮೇಲೆ ಬೀಳುತ್ತವೆ. ಸೂರ್ಯ ರಶ್ಮಿ ವಿಗ್ರಹದ ಮೇಲೆ ಬಿದ್ದಾಗ ಚಿನ್ನದ ಬಣ್ಣದಲ್ಲಿ ಕಾಣಿಸುತ್ತದೆ. ಪ್ರತಿವರ್ಷ ಅಕ್ಟೋಬರ್​ 1 ಮತ್ತು 2 ಹಾಗೂ ಮಾರ್ಚ್​ 9 ಮತ್ತು 10 ರಂದು ಈ ವಿಸ್ಮಯ ಜರುಗುತ್ತದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ.

ಹಲವಾರು ಭಕ್ತರು  ಒಂದು ದಿನ ಮುಂಚೆಯೇ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಈ ಭವ್ಯ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಸೂರ್ಯನಾರಾಯಣ ಸ್ವಾಮಿಯ ದರ್ಶನದಿಂದ ಹಲವಾರು ಚರ್ಮ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
First published:October 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...