ಪಾಕಿಸ್ತಾನದಲ್ಲಿ ಹೊಸ ಇತಿಹಾಸ ಬರೆದ ಹಿಂದೂ ಮಹಿಳೆ!
ಪವನ್ ಕುಮಾರ್ ಪಾಕಿಸ್ತಾನದಲ್ಲಿ ನೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊದಲ ಮಗಳು ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಸುಮನ ಅವರ ಮತ್ತೊಂದು ಸಹೋದರಿ ಚಾರ್ಟೆಡ್ ಅಕೌಂಟೆಡ್ ಹುದ್ದೆಯಲ್ಲಿದ್ದಾರೆ.
ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಸುಮನ ಕುಮಾರಿ ಹೆಸರಿನ ಯುವ ನ್ಯಾಯಾಧೀಶೆಯು ಖಂಬರ್-ಶಾಹ್ದಾದ್ಕೋಟ್ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ಸುಮನ ಮೂಲತಃ ಖಂಬರ್-ಶಾಹ್ದಾದ್ಕೋಟ್ ಜಿಲ್ಲೆಯವರಾಗಿದ್ದು, ಇದೀಗ ಇದೇ ಜಿಲ್ಲೆಯ ಕೋರ್ಟ್ಗೆ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತನ್ನ ಊರಿನಲ್ಲಿ ನ್ಯಾಯದ ಘನತೆಯನ್ನು ಎತ್ತಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ನಲ್ಲಿ ಎಲ್ಎಲ್ಬಿ ಕಾನೂನು ಪದವಿಯನ್ನು ಪಡೆದಿರುವ ಸುಮನ, ಬಳಿಕ ಕರಾಚಿಯ ಝಬಿಸ್ತ್ ಯುನಿವರ್ಸಿಟಿಯಲ್ಲಿ ಕಾನೂನಿನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ.
ಮಗಳಿಗೆ ಪಾಕ್ನಲ್ಲಿ ಉನ್ನತ ಸ್ಥಾನ ಲಭಿಸಿರುವುದಕ್ಕೆ ಸಂತಸ ಹಂಚಿಕೊಂಡಿರುವ ತಂದೆ ಪವನ್ ಕುಮಾರ್ ಬೊಡನ್, ಮಗಳು ಕಷ್ಟಪಟ್ಟು ಈ ಸ್ಥಾನಕ್ಕೇರಿದ್ದಾಳೆ. ಸವಾಲಿನ ವೃತ್ತಿಯನ್ನು ಆಕೆ ಆರಿಸಿಕೊಂಡಿದ್ದು, ಈ ಮೂಲಕ ಪ್ರಮಾಣಿಕಳಾಗಿ ಕೆಲಸ ಮಾಡುತ್ತಾಳೆ ಎಂಬ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
ಸುಮನ ಅವರ ತಂದೆ ಪಾಕಿಸ್ತಾನದಲ್ಲಿ ನೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಗೆಯೇ ಸಹೋದರಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವ ನ್ಯಾಯಾಧೀಶೆಯ ಮತ್ತೊಬ್ಬ ಸಹೋದರಿ ಚಾರ್ಟೆಡ್ ಅಕೌಂಟೆಡ್ ಹುದ್ದೆಯಲ್ಲಿದ್ದಾರೆ.ಕಾನೂನಿನ ವಿಷಯವಲ್ಲದೆ, ಸಂಗೀತವನ್ನು ಸುಮನ ತುಂಬಾ ಇಷ್ಟ ಪಡುತ್ತಾರೆ. ಇವರ ನೆಚ್ಚಿನ ಗಾಯಕಿ ಭಾರತದ ಲತಾ ಮಂಗೇಶ್ಕರ್ ಎಂಬುದು ವಿಶೇಷ. ಹಾಗೆಯೇ ಪಾಕ್ ಮೂಲದ ಬಾಲಿವುಡ್ ಗಾಯಕ ಅತಿಫ್ ಅಸ್ಲಂ ಅವರ ಹಾಡುಗಳೆಂದರೆ ಯುವ ನ್ಯಾಯಾಧೀಶೆಗೆ ಅಚ್ಚುಮೆಚ್ಚು.
ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದ ವ್ಯಕ್ತಿಯೊಬ್ಬರು ನ್ಯಾಯಾಧೀಶರಾಗಿ ಆಯ್ಕೆ ಆಗಿರುವುದು ಇದೇ ಮೊದಲ ಬಾರಿಯಲ್ಲ. 2005 ಮತ್ತು 2007 ರ ನಡುವೆ ನ್ಯಾಯಮೂರ್ತಿ ರಾಣಾ ಭಗವಾನ್ದಾಸ್ ಪಾಕ್ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Suman Pawan Bodani becomes Pakistan’s 1st female judge belonging to the Hindu community. Via Pakistan Hindu Youth Council. Daughter of Dr. Pawan Podani, Suman belongs to Shahdadkot. She stood 54th in merit list for the appointment of Civil Judge/Judicial Magistrate. pic.twitter.com/ofqgwSA6Kt
— Danyal Gilani (@DanyalGilani) January 27, 2019Loading...

Loading...