ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಮತ್ತು ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಏಜೆಂಟರು 2014 ರಿಂದ 2017ರ ನಡುವೆ ದುಬೈನಲ್ಲಿ ಪಾಕಿಸ್ತಾನದ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ ಮೊಹಮ್ಮದ್ ಆಸಿಫ್ ಹಫೀಜ್ ಅವರರನ್ನುಭೇಟಿ ಮಾಡಿದ್ದರಂತೆ. ಈ ಭೇಟಿಯಲ್ಲಿ 1993 ಮುಂಬೈ ಬಾಂಬ್ ಸ್ಫೋಟಗಳು, ಟೋರಾ ಬೋರಾ, ತಾಲಿಬಾನ್ ಮತ್ತು ಕರಾಚಿ ಉದ್ಯಮಿ ಜಬೀರ್ ಮೋತಿವಾಲಾ ಹತ್ಯೆ ಪ್ರಕರಣಕ್ಕೆ ಕಾರಣವಾಗಿದ್ದ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಬಗ್ಗೆ ವಿಚಾರಿಸಿದ್ದರಂತೆ. ಈ ಭೇಟಿಗೆ ಕಾರಣ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳವರೆಗೆ ವ್ಯಾಪಿಸಿರುವ ಡ್ರಗ್ ಮಾರಾಟ ಜಾಲದ ಮೇಲೆ ಹಫೀಜ್ ಹಿಡಿತ ಹೊಂದಿದ್ದು ಎನ್ನಲಾಗುತ್ತದೆ. ಡ್ರಗ್ ಮಾಫಿಯಾದಲ್ಲಿ ಹಫೀಜ್ ಅವರನ್ನು ‘ಸುಲ್ತಾನ್’ ಎಂದೂ ಕರೆಯುತ್ತಾರೆ.
ಯುಕೆ ಹೈಕೋರ್ಟ್ ನ್ಯಾಯಾಮುರ್ತಿಗಳ ಮುಂದೆ ಸಲ್ಲಿಸಿದ ಪತ್ರಿಕೆಗಳಲ್ಲಿ, ಅಮೆರಿಕದ ಏಜೆಂಟರು ಪಾಕಿಸ್ತಾನದ ಚಿನ್ನದ ವ್ಯಾಪಾರಿ ಹಫೀಜ್ ಅವರನ್ನು ಭೂಗತಲೋಕದ ದೊರೆ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರಂತೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಅವರ ಪ್ರಶ್ನೆಗಳಿಗೆ ಉತ್ತರಿಸಿದ ಹಫೀಜ್, ತಾಲಿಬಾನ್ ಮತ್ತು ಅಫ್ಘಾನಿಸ್ತಾನದ ಬಗ್ಗೆ ಯಾವುದೇ ಮಾಹಿತಿ ನೀಡುವುದರ ಬಗ್ಗೆ ನಿರಾಕರಿಸಿದರಂತೆ. ದಾವೂದ್ ಇಬ್ರಾಹಿಂ ಇಬ್ಬರೂ ದುಬೈನಲ್ಲಿ ಚಿನ್ನದ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದನ್ನು ಮತ್ತು ಜೊತೆಯಲ್ಲೇ ಕುಳಿತು ಕ್ರಿಕೆಟ್ ನೋಡುತ್ತಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೂ, 90ರ ದಶಕದ ಉತ್ತರಾರ್ಧದಲ್ಲಿ ಡಾನ್ ದುಬೈನಿಂದ ಹೊರಟಾಗ ಅವರೊಂದಿಗಿನ ಸಂಪರ್ಕ ಕಳೆದುಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯ ಗಾರ್ಡನ್ನಲ್ಲಿ 20 ಸಸಿ ನೆಟ್ಟ ಬಾಲಿವುಡ್ ಕ್ವೀನ್ ಕಂಗನಾ ..!
ಯುಎಸ್ ಏಜೆಂಟರಿಗೆ ಹಫೀಜ್ ಹೇಳಿದ್ದನ್ನು ನ್ಯಾಯಾಲಯದ ಪತ್ರಿಕೆಗಳು ಬಹಿರಂಗಪಡಿಸಿವೆ, "ದಾವೂದ್ ಇಬ್ರಾಹಿಂ ದುಬೈನಲ್ಲಿದ್ದಾಗ, ಅವರು ಬಾಲಿವುಡ್ ಕಾರ್ಯಕ್ರಮಗಳು ನಡೆಯುತ್ತಿದ್ದ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ವಾಸ್ತವವಾಗಿ, ಯಾವುದೇ ಪ್ರದರ್ಶನದ ಮೊದಲು ಪ್ರದರ್ಶಕರು ಅವನನ್ನು 'ಇಜಾಜತ್ ಹೈ?' ಅಂದರೆ ಪ್ರಾರಂಭಿಸಲು ನಮಗೆ ಅನುಮತಿ ಇದೆಯೇ? ಎಂದು ಕೇಳುತ್ತಿರುವುದನ್ನು ನೆನಪಿಸಿಕೊಂಡಿದ್ದಾರೆ ಎಂದು ಹೇಳಿದೆ.
ಕಾನೂನಿನ ದಾಖಲೆಗಳಲ್ಲಿರುವ ಪ್ರಕಾರ ಹಫೀಜ್ ಅವರು, ದಾವೂದ್ ಇಬ್ರಾಹಿಂನ ಪ್ರಸ್ತುತ ಸ್ಥಳದ ಬಗ್ಗೆ ನನಗೆ ತಿಳಿದಿಲ್ಲ ಎಂದು ಯುಎಸ್ ಏಜೆಂಟರಿಗೆ ತಿಳಿಸಿದ್ದಾರೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಇದನ್ನೂ ಓದಿ: Suhana Khan: ಪೂಲ್ ಪಾರ್ಟಿಯಲ್ಲಿ ಸುಹಾನಾ ಖಾನ್: ವೈರಲ್ ಆಗುತ್ತಿವೆ ಶಾರುಖ್ ಖಾನ್ ಮಗಳ ಫೋಟೋಗಳು..!
ಇನ್ನು ಹಫೀಜ್ ಅವರ ಬಳಿ ಡಿಇಎ ಏಜೆಂಟರು ಜಬೀರ್ ಮೋತಿವಾಲ ಅಥವಾ ಜಬೀರ್ ಸಿದ್ದೀಕ್ ಅಥವಾ ಜಬೀರ್ ಮೋತಿ ಬಗ್ಗೆ ವಿಚಾರಿಸಿದಾಗ ಅವರು ಕರಾಚಿಯ ಸ್ಟಾಕ್ ಬದಲಾವಣೆಯ ಮಾಹಿವಾಟಿನಲ್ಲಿ ತೊಡಗಿದ್ದ ಅವನು ಮಾಲುಗಳ ಬದಲಾವಣೆ ಮಾಡುವ ಬ್ರೋಕರ್ ಆಗಿದ್ದನು ಎಂದು ತಿಳಿಸಿದ್ದರು.
53 ವರ್ಷದ ಪಾಕಿಸ್ತಾನಿ ಪ್ರಜೆ ಜಬೀರ್ ಅವರನ್ನು ದಾವೂದ್ ಇಬ್ರಾಹಿಂ ಅವರ ‘ಡಿ ಕಂಪನಿ’ ವಿಶ್ವಾದ್ಯಂತ ಕ್ರಿಮಿನಲ್ ನೆಟ್‍ವರ್ಕ್‍ನ ಉನ್ನತ ಲೆಫ್ಟಿನೆಂಟ್ ಎಂದು ಲಂಡನ್‍ನ ಹೈಕೋರ್ಟ್ ಹೇಳಿದೆ. ಅಲ್ಲದೇ ಆತನ ಬಲಗೈ ಬಂಟ ಎಂದು ಹೇಳಲಾಗಿದೆ ಮತ್ತು ಈತ ಯುಕೆ, ಯುಎಇ ಮತ್ತು ಪ್ರಪಂಚದಾದ್ಯಂತ ಭೂಗತ ದೊರೆಗಳ ಹೂಡಿಕೆಗಳನ್ನು ನಿರ್ವಹಿಸುವವನಾಗಿದ್ದನು.
ಇದನ್ನೂ ಓದಿ: ಮಗುವಿನ ದುಬಾರಿ ಔಷಧಕ್ಕಾಗಿ 16 ಕೋಟಿ ನಿಧಿ ಸಂಗ್ರಹಿಸಿದ ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ
ಜಬೀರ್‌ನನ್ನು ಬ್ರಿಟಿಷ್ ಪೊಲೀಸರು 2018ರ ಆಗಸ್ಟ್‌ನಲ್ಲಿ ಲಂಡನ್‍ನ ಹಿಲ್ಟನ್ ಹೋಟೆಲ್‍ನಲ್ಲಿ ಬಂಧಿಸಿದ್ದರು. ಒಂದು ವರ್ಷದ ಹಿಂದೆ, ಅಂದರೆ 2017ರ ಆಗಸ್ಟ್‌ನಲ್ಲಿ ಕ್ಲಾಸ್ ಎ ಡ್ರಗ್ ಔಷಧಗಳ ಆಮದು ಮತ್ತು ತಯಾರಿಕೆಗೆ ಸಂಬಂಧಿಸಿದ ಆರೋಪಗಳ ಆಧಾರದ ಮೇಲೆ ಅಮೆರಿಕದ ಕೋರಿಕೆಯ ಮೇರೆಗೆ ಯುಕೆ ಅಧಿಕಾರಿಗಳು ಆಸಿಫ್ ಹಫೀಜ್ ಅವರನ್ನು ಬಂಧಿಸಿದ್ದರು.
ಯುಎಸ್ ಅಕ್ರಮ ಹಣ ವರ್ಗಾವಣೆ, ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮತ್ತು ಬ್ಲ್ಯಾಕ್‍ಮೇಲ್ ಇನ್ನಿತರ ಆರೋಪಗಳನ್ನು ಕೈಬಿಟ್ಟ ನಂತರ ಲಂಡನ್ ಜೈಲಿನಿಂದ ಜಬೀರ್ ಅನ್ನು ಬಿಡುಗಡೆ ಮಾಡಲಾಗುವುದು ಮತ್ತು ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು 2017ರ ಆಗಸ್ಟ್‌ನಲ್ಲಿ ಪಿಟಿಐ ವರದಿ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ