Sukhjinder Singh Randhawa: ಸುಖಜಿಂದರ ಸಿಂಗ್ ರಾಂಧವ ಪಂಜಾಬ್ ಮುಂದಿನ ಮುಖ್ಯಮಂತ್ರಿ!

ಸಿಖ್ ವ್ಯಕ್ತಿ ಇಲ್ಲದೇ ಪಂಜಾಬ್ ರಾಜಕೀಯದಲ್ಲಿ ಏಳಿಗೆ ಇಲ್ಲ ಎಂಬುದು ಕಾಂಗ್ರೆಸ್ ಹೈಕಮಾಂಡ್​ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಸಿಖ್ ಪೇಟಾ ಇಳಿಸಿ ಆ ಪೇಟಾವನ್ನು ಮತ್ತೋರ್ವ ಸಿಖ್ ತಲೆಗೆ ಹಾಕುವುದು ಪಕ್ಕಾ ಎಂದು ಎಲ್ಲರೂ ಅಂದಾಜಿಸಿದ್ದರು. ಅದರಂತೆ ಇದೀಗ ಸುಖಜಿಂದರ್ ಸಿಂಗ್ ರಾಂಧವ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಸುಖಜಿಂದರ್ ಸಿಂಗ್ ರಾಂಧವ

ಸುಖಜಿಂದರ್ ಸಿಂಗ್ ರಾಂಧವ

 • Share this:
  ಅಮೃತಸರ (ಪಂಜಾಬ್): ಪಂಜಾಬ್ ರಾಜ್ಯ ರಾಜಕೀಯ ಬಿಕ್ಕಟ್ಟು (Punjab Politics) ಇದೀಗ ಮತ್ತೊಂದು ದಿಕ್ಕಿಗೆ ಹೊರಳಿದೆ. ಅನಿಶ್ಚಿತ ಬೆಳವಣಿಗೆಯ ನಡುವೆ ಪಂಜಾಬ್ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಅವರು ಶನಿವಾರ ರಾಜೀನಾಮೆ ಸಲ್ಲಿಸಿದ್ದರು. ಇವರ ಸ್ಥಾನಕ್ಕೆ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದು (Navjot Singh Sidu) ಅವರು ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಇದೀಗ ಅಚ್ಚರಿಯ ಅಭ್ಯರ್ಥಿಯ ಹೆಸರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಸುಖಜಿಂದರ್ ಸಿಂಗ್ ರಾಂಧವ  (Sukhjinder Singh Randhawa to be the next CM of Punjab) ಅವರು ಪಂಜಾಬ್ ಮುಂದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ.

  ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಯಾರನ್ನು ನೇಮಿಸಬಹುದು ಎಂಬ ಗೊಂದಲ ಸ್ವತಃ ಪಕ್ಷ ಸೇರಿದಂತೆ ರಾಜಕೀಯ ವಲಯದಲ್ಲಿ ಮನೆ ಮಾಡಿತ್ತು. ಅಮರೀಂದರ್ ಉತ್ತರಾಧಿಕಾರಿಯಾಗಲು ನವಜೋತ್ ಸಿಂಗ್ ಸಿದು ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ ಇತ್ತು. ಈ ಬಗ್ಗೆ ನ್ಯೂಸ್ 18 ನೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕರೊಬ್ಬರು ಸಿದು ತಕ್ಷಣವೇ ಸಿಎಂ ಆಗದಿದ್ದರೂ, ಮುಂದಿನ ವರ್ಷ ಚುನಾವಣೆಗೆ ಮುಂಚಿತವಾಗಿ ಅವರು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥರಾಗಿ ಮುಂದುವರಿಸುವುದಾಗಿ ಹೇಳಿದರು.

  ಶನಿವಾರ ರಾಜೀನಾಮೆ ನೀಡಿದ ಬಳಿಕ ಅಮೃತಸರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು 'ರಾಜೀನಾಮೆ ನೀಡುತ್ತೇನೆ ಎಂದು ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಹೇಳಿದ್ದೇನೆ. ನನಗೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬ ಅನುಮಾನ ಇದೆ‌. ಅಲ್ಲದೆ ನನಗೆ ಅವಮಾನವಾಗುತ್ತಿದೆ. ಅವರು (ಹೈಕಮಾಂಡ್) ಯಾರನ್ನು ನಂಬಿದ್ದಾರೋ ಅವರನ್ನು (ಮುಖ್ಯಮಂತ್ರಿ) ಮಾಡಬಹುದು. ಕಳೆದ ಎರಡು ತಿಂಗಳಲ್ಲಿ ನಾನು ಕಾಂಗ್ರೆಸ್ ನಾಯಕತ್ವದಿಂದ ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ ... ಅವರು ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡರು ಮತ್ತು ಈಗ ಇಲ್ಲಿ ಚಂಡೀಗಢದಲ್ಲಿ ಸಿಎಲ್‌ಪಿ ಸಭೆಯನ್ನು ಕರೆದರು. ಈ ಅವಮಾನ ಸಹಿಸಿಕೊಂಡು ನಾನು ಅಧಿಕಾರದಲ್ಲಿ ಮುಂದುವರೆಯಲಾರೆ' ಎಂದು ಹೇಳಿದ್ದರು.

  1959ರಂದು ಜನಿಸಿದ ಸುಖಜಿಂದರ್ ಸಿಂಗ್ ಅವರು ಪದವಿ ಶಿಕ್ಷಣ ಪಡೆದಿದ್ದಾರೆ. ಇವರ ತಂದೆ ಸಂತೋಖ ಸಿಂಗ್ ಅವರು ಎರಡು ಬಾರಿ ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಮತ್ತು ಕಾಂಗ್ರೆಸ್​ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು.  2002ರಲ್ಲಿ ಫತೇಗರ್ ಚೌರಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಅಕಲಿ ದಳದ ನಿರ್ಮಲ ಸಿಂಗ್ ಕಹ್ಲೊನ್ ಅವರನ್ನು ಸೋಲಿಸಿ, ಶಾಸಕರಾದರು. ಆ ಬಳಿಕ 2012 ಮತ್ತು2017 ರಲ್ಲಿ ದೆರಾ ಬಾಬಾ ನಾನಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದರು.

  ಇದನ್ನು ಓದಿ: Explained: ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು ಏಕೆ? ಮುಂದಿನ ಪಂಜಾಬ್ ಸಿಎಂ ಯಾರು?

  ಯಾರು ಈ ಸುಖಜಿಂದರ್ ಸಿಂಗ್ ರಾಂಧವ?

  ಸುಖಜಿಂದರ್ ಸಿಂಗ್ ರಾಂಧವ ಅವರು 2002ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಆನಂತರ 2012 ಮತ್ತು 2017ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಸದಸ್ಯರಾದರು. ಸುಖಜಿಂದರ್ ಸಿಂಗ್ ರಾಂಧವ ಅವರು ಪಂಜಾಬ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಪಿಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೈಮರಿ ಆಗ್ರೋ ಸರ್ವಿಸ್ ಸೊಸೈಟಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಕೃಷಿ ಕುಟುಂಬದಿಂದ ಬಂದ ಸುಖಜಿಂದರ್ ಸಿಂಗ್ ರಾಂಧವ ಅವರು ಇದೀಗ ಪಂಜಾಬ್ ಮುಖ್ಯಮಂತ್ರಿ ಆಗಲಿದ್ದಾರೆ.
  Published by:HR Ramesh
  First published: