Nora Fatehi: ಸುಖೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣದಲ್ಲಿ ಮತ್ತೋರ್ವ ನಟಿ! ನೋರಾ ಫತೇಹಿಗೆ ಪೊಲೀಸರ ಡ್ರಿಲ್!

ಸುಖೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಎರಡನೇ ಬಾರಿಗೆ ಪೊಲೀಸರ ಎದುರು ಹಾಜರಾಗಿದ್ದರು. ದೆಹಲಿ ಪೊಲೀಸ್ ಆರ್ಥಿಕ ಕಚೇರಿಗಳ ವಿಭಾಗ (ಇಒಡಬ್ಲ್ಯು) ಮುಂದೆ ಜೈಲು ಪಾಲಾದ ಆರೋಪಿ ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದರು.

ನಟಿ ನೋರಾ ಫತೇಹಿ

ನಟಿ ನೋರಾ ಫತೇಹಿ

  • Share this:
ವಂಚಕ ಸುಖೇಶ್ ಚಂದ್ರಶೇಖರ್ (Sukesh Chandrashekhar) ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ (Nora Fatehi )ಎರಡನೇ ಬಾರಿಗೆ ಪೊಲೀಸರ ಎದುರು ಹಾಜರಾಗಿದ್ದರು.  ದೆಹಲಿ ಪೊಲೀಸ್ ಆರ್ಥಿಕ ಕಚೇರಿಗಳ ವಿಭಾಗ (ಇಒಡಬ್ಲ್ಯು) ಮುಂದೆ ಜೈಲು ಪಾಲಾದ ಆರೋಪಿ ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದರು. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರನ್ನು ಬುಧವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿರುವ ದೆಹಲಿ ಪೊಲೀಸ್ (Delhi Police) ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ನಟಿ ನೋರ್ ಫತೇಹಿ ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು.

ಜೊತೆಗೆ ಫರ್ನಾಂಡೀಸ್ ಮತ್ತು ಫತೇಹಿಯನ್ನು ಚಂದ್ರಶೇಖರ್ ಗೆ ಪರಿಚಯಿಸಿದ ಪಿಂಕಿ ಇರಾನಿಯನ್ನು ಸಹ ವಿಚಾರಣೆಗೆ ಕರೆಸಲಾಗಿತ್ತು. ಇಬ್ಬರು ಇಂದು ದೆಹಲಿ ಕೋರ್ಟ್‌ ಗೆ ಬಂದಿದ್ದರು.

ಮೊದಲಿಗೆ ಪ್ರತ್ಯೇಕ ತನಿಖೆ
"ಅವರಿಬ್ಬರನ್ನು ಮೊದಲು ಪ್ರತ್ಯೇಕವಾಗಿ ತನಿಖೆ ಮಾಡಲಾಗುವುದು ಮತ್ತು ನಂತರ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಪ್ರಶ್ನಿಸಲಾಗುತ್ತದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆಯ ಬಗ್ಗೆ ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

"ಇರಾನಿ ಈ ಹಿಂದೆ ನೀಡಿದ ಹೇಳಿಕೆಗಳಲ್ಲಿ ಕೆಲವು ಗೊಂದಲಗಳಿವೆ. ಆದ್ದರಿಂದ, ನಾವು ಇರಾನಿ ಮತ್ತು ನೋರಾ ಇಬ್ಬರನ್ನೂ ಒಟ್ಟಿಗೆ ಕೂರಿಸಿ ತನಿಖೆ ಮಾಡಬೇಕಿದೆ. ಅಲ್ಲದೆ, ಇರಾನಿ, ಚಂದ್ರಶೇಖರ್‌ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಂಕಿಸಲಾಗಿದೆ, ಆದ್ದರಿಂದ ಅವರ ಹೆಚ್ಚಿನ ವಿಚಾರಣೆ ನಡೆಯಬೇಕಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಆರು ಗಂಟೆಗಳ ಕಾಲ ಫತೇಹಿ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಫತೇಹಿಯನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಿತ್ತು. ಫತೇಹಿ ತನಿಖೆಗೆ ಸಹಕರಿಸಿದ್ದಾರೆ ಆದರೆ ಕೆಲವು ಉತ್ತರವಿಲ್ಲದ ಪ್ರಶ್ನೆಗಳಿವೆ ಎಂದು ಪೊಲೀಸರು ಮೊದಲ ವಿಚಾರಣೆ ಬಗ್ಗೆ ಹೇಳಿದ್ದರು.

ಇದನ್ನೂ ಓದಿ: Arun Yogiraj: ಇಂಡಿಯಾ ಗೇಟ್‌ ಬಳಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಇದರ ಹಿಂದಿದೆ ಕನ್ನಡಿಗನ ಕೈಚಳಕ

"ವಿಚಾರಣೆಯಲ್ಲಿ ನೋರಾ ಫತೇಹಿ ಅವರು ಚೆನ್ನೈನಲ್ಲಿ ತನ್ನನ್ನು ಆಹ್ವಾನಿಸಿದ ಕಾರ್ಯಕ್ರಮಕ್ಕೆ ಈ ಅಪರಾಧ ಸಿಂಡಿಕೇಟ್‌ಗೆ ಸಂಪರ್ಕವಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದರು. ಆದರೆ ನಟಿಯ ಕಾರು ಮತ್ತು ಉಡುಗೊರೆಗಳು ಹೇಗೆ ಬಂದವು ಎಂಬುವುದನ್ನು ನಾವು ಸರಿಯಾದ ತನಿಖೆಯೊಂದಿಗೆ ಮಾತ್ರ ತೀರ್ಮಾನಕ್ಕೆ ಬರುತ್ತೇವೆ, ”ಎಂದು ವಿಶೇಷ ಸಿಪಿ, ಅಪರಾಧ / ಇಒಡಬ್ಲ್ಯೂ ರವೀಂದ್ರ ಯಾದವ್ ಹೇಳಿದರು.

ಅನೇಕ ಮಂದಿಯನ್ನು ವಂಚಿಸಿದ ಆರೋಪ
ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಅನೇಕ ಮಂದಿಯನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಲ್ಲಿ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ ಈ ಹಿಂದೆ ವಿಚಾರಣೆ ನಡೆಸಿತ್ತು.

ಈ ಪ್ರಕರಣದಲ್ಲಿ ಫತೇಹಿಯನ್ನು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿತ್ತು. ಇಡಿ ಫತೇಹಿ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಸುಖೇಶ್‌ನಿಂದ ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿ ಮಾಡಿದೆ . ನೋರಾ ಫತೇಹಿ ಅವರು ಸೆಪ್ಟೆಂಬರ್ 13 ಮತ್ತು ಅಕ್ಟೋಬರ್ 14, 2021 ರಂದು ಇಡಿಯೊಂದಿಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ, ಅಲ್ಲಿ ಅವರು ಸುಕೇಶ್ ಮತ್ತು ಅವರ ನಟ ಪತ್ನಿ ಲೀನಾ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:  Madhya Pradesh: ಪುಟ್ಟ ಕಂದನ ದೇಹದಲ್ಲಿ ಹರಿಯುತ್ತಿದೆ ಬಿಳಿ ರಕ್ತ, ಸ್ಯಾಂಪಲ್ ಕಂಡ ವೈದ್ಯರು ದಂಗು!

ಸುಕೇಶ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ ಬಹು ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಆಗಸ್ಟ್ 17ರಂದು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿಯವರ ಹೆಸರನ್ನೂ ಉಲ್ಲೇಖಿಸಿದೆ.
Published by:Ashwini Prabhu
First published: