ಮಥುರಾ ಶ್ರೀಕೃಷ್ಣ ದೇವಾಲಯದ ಸಂಕೀರ್ಣದಲ್ಲಿರುವ ಮಸೀದಿಯ ಕೆಳಗೆ ಕೃಷ್ಣನ ಜನ್ಮಸ್ಥಾನವಿದೆ; ಮೊಕದ್ದಮೆ ದಾಖಲು

ಜುಲೈ 20, 1973 ರಂದು ಮಥುರ ಸಿವಿಲ್ ನ್ಯಾಯಾಧೀಶರು ತೀರ್ಪು ನೀಡಿದ್ದ, ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಟ್ರಸ್ಟ್ ನಡುವಿನ ರಾಜಿಯ ಬಗೆಗಿನ ತೀರ್ಪನ್ನು ರದ್ದುಗೊಳಿಸಬೇಕೆಂದು ಮೊಕದ್ದಮೆಯಲ್ಲಿ ವಿನಂತಿಸಲಾಗಿದೆ.

news18-kannada
Updated:September 26, 2020, 3:58 PM IST
ಮಥುರಾ ಶ್ರೀಕೃಷ್ಣ ದೇವಾಲಯದ ಸಂಕೀರ್ಣದಲ್ಲಿರುವ ಮಸೀದಿಯ ಕೆಳಗೆ ಕೃಷ್ಣನ ಜನ್ಮಸ್ಥಾನವಿದೆ; ಮೊಕದ್ದಮೆ ದಾಖಲು
ಮಥುರದ ಶ್ರೀಕೃಷ್ಣ ದೇವಾಲದ ಸಂಕೀರ್ಣದಲ್ಲಿರುವ ಮಸೀದಿ.
  • Share this:
ನವ ದೆಹಲಿ (ಸೆಪ್ಟೆಂಬರ್​ 26); ದಶಕಗಳ ನಿರಂತರ ಹೋರಾಟದ ನಂತರ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮನ ದೇವಾಲಯವನ್ನು ನಿರ್ಮಿಸಲು ಕೊನೆಗೂ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ ನೀಡಿತ್ತು. ಇದರ ಬೆನ್ನಿಗೆ ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್​ ವತಿಯಿಂದ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೆಲಸವೂ ನಡೆದಿತ್ತು. ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಬಂದು ಶಂಕುಸ್ಥಾಪನೆ ನೆರವೇರಿಸಿದ್ದರು. ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಹ ಸಿದ್ದವಾಗಿದೆ. ಆದರೆ, ರಾಮ ದೇವಾಲಯಕ್ಕೆ ಶಂಕು ಸ್ಥಾಪನೆ ನೆರವೇರುತ್ತಿದ್ದಂತೆ ಕೇಳಿ ಬಂದಿದ್ದ ಸದ್ದು ಮಥುರಾದ ಶ್ರೀಕೃಷ್ಣನ ದೇವಾಲಯದ ಸಂಕೀರ್ಣದ ಪಕ್ಕದಲ್ಲಿರುವ ಇಸ್ಲಾಂ ಧರ್ಮದ ಶಾಹೀ ಈದ್ಗಾ ಮಸೀದಿ ತೆರವು. ಈ ಮಸೀದಿಯನ್ನೂ ಸಹ ಇಲ್ಲಿಂದ ತೆರವುಗೊಳಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಿಗೆ ಇಂದು ಈ ಶಾಹಿ ಈದ್ಗಾ ಮಸೀದಿಯ ಕೆಳಗೆ ಶ್ರೀಕೃಷ್ಣನ ಜನ್ಮಸ್ಥಾನವಿದೆ, ಹೀಗಾಗಿ ಮಥುರಾದ ಶ್ರೀ ಕೃಷ್ಣ ದೇವಾಲಯ ಸಂಕೀರ್ಣದಿಂದ ಈ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಮಥುರಾ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ಸಿವಿಲ್ ಮೊಕದ್ದಮೆ ಹೂಡಲಾಗಿದೆ.

ಉತ್ತರ ಪ್ರದೇಶದ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬವರು ಈ ಮೊಕದ್ದಮೆ ಹೂಡಿದ್ದು, ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಶಾಹಿ ಈದ್ಗಾ ಟ್ರಸ್ಟ್​ನ ನಿರ್ವಹಣಾ ಸಮಿತಿಯನ್ನು ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಮೊಕದ್ದಮೆಯು ದೇವಾಲಯದ ವ್ಯಾಪ್ತಿಯಲ್ಲಿರುವ 13.37 ಎಕರೆ ಭೂಮಿಯನ್ನು ಪಡೆಯಲು ಪ್ರಯತ್ನಿಸುತ್ತದೆ.

ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್ ಶ್ರೀ ಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವತೆಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಿಸಿದೆ ಎಂದು ಮೊಕದ್ದಮೆಯಲ್ಲಿ ದೂರಲಾಗಿದೆ. ಅಲ್ಲದೆ, ಅಯೋಧ್ಯೆಯಂತೆ ಇಲ್ಲೂ ಸಹ ಶ್ರೀಕೃಷ್ಣನ ಜನ್ಮಸ್ಥಳವು ಟ್ರಸ್ಟ್ ರಚಿಸಿದ ಮಸೀದಿಯ ಕೆಳಗೆ ಇದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ಇದರ ಜೊತೆಗೆ ದೇವಾಲಯ ಆಡಳಿತ ಮಂಡಳಿಯಾಗಿರುವ ಶ್ರೀ ಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ಆಸ್ತಿಯನ್ನು ಕಸಿದುಕೊಳ್ಳುವ ಉದ್ದೇಶದಿಂದ ಶಾಹಿ ಈದ್ಗಾ ಟ್ರಸ್ಟ್‌ನೊಂದಿಗೆ ಅಕ್ರಮ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.

"ಶ್ರೀ ಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ದೇವತೆ ಮತ್ತು ಭಕ್ತರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು 1968 ರಲ್ಲಿ ಟ್ರಸ್ಟ್ ಮಸ್ಜಿದ್ ಈದ್ಗಾ (ಟ್ರಸ್ಟ್) ದ ನಿರ್ವಹಣಾ ಸಮಿತಿಯೊಂದಿಗೆ ಮೋಸದಿಂದ ರಾಜಿ ಮಾಡಿಕೊಂಡಿದೆ” ಮೊಕದ್ದಮೆ ಹೇಳಿದೆ.

ಇದನ್ನೂ ಓದಿ : ಭೂ ಸುಧಾರಣೆ ತಿದ್ದುಪಡಿಯ ಹಿಂದೆ 60,000 ಕೋಟಿ ರೂ.ಗಳ ಭ್ರಷ್ಟಾಚಾರವಿದೆ: ಸಿದ್ದರಾಮಯ್ಯ ಆರೋಪಜುಲೈ 20, 1973 ರಂದು ಮಥುರ ಸಿವಿಲ್ ನ್ಯಾಯಾಧೀಶರು ತೀರ್ಪು ನೀಡಿದ್ದ, “ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಟ್ರಸ್ಟ್ ನಡುವಿನ ರಾಜಿ” ಯ ಬಗೆಗಿನ ತೀರ್ಪನ್ನು ರದ್ದುಗೊಳಿಸಬೇಕೆಂದು ಮೊಕದ್ದಮೆಯಲ್ಲಿ ವಿನಂತಿಸಲಾಗಿದೆ.

ಅದಾಗ್ಯೂ 1991 ರಲ್ಲಿ ಅಂಗೀಕರಿಸಲ್ಪಟ್ಟ Places of Worship (Special Provisions Act) ಪ್ರಕಾರ, ಅಯೋಧ್ಯೆಯಲ್ಲಿನ ವಿವಾದಿತ ಸ್ಥಳವನ್ನು ಹೊರತುಪಡಿಸಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಅಸ್ತಿತ್ವದಲ್ಲಿದ್ದಂತೆ ಎಲ್ಲಾ ಧಾರ್ಮಿಕ ರಚನೆಗಳನ್ನು ರಕ್ಷಿಸಬೇಕು ಎಂದು ಹೇಳುತ್ತದೆ. ಹೀಗಾಗಿ, ಮಸೀದಿಗಳನ್ನು ದೇವಾಲಯಗಳಾಗಿ ಪರಿವರ್ತಿಸುವುದು ಅಥವಾ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸುವುದು ಕಾಯಿದೆಯು ನಿರ್ಬಂಧಿಸಿದೆ.
Published by: MAshok Kumar
First published: September 26, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading