HOME » NEWS » National-international » SUICIDE CASE OF DADRA NAGAR HAVELI MP MOHAN DELKAR MAHARASHTRA GOVERNMENT CREATE SIT TEAM FOR INVESTIGATION MAK

Mohan Delkar: ದಾದ್ರ-ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್​ ಆತ್ಮಹತ್ಯೆ ಕೇಸ್; ತನಿಖೆಗಾಗಿ SITತಂಡ ರಚಿಸಿ ಮಹಾರಾಷ್ಟ್ರ ಸರ್ಕಾರ

ಸಂಸದ ಮೋಹನ್ ಢೆಲ್ಕರ್​ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ 15 ಪುಟಗಳಷ್ಟು ಡೆತ್‌ ನೋಟ್‌ ಅನ್ನು ಬರೆದಿದ್ದರು, ಇದರಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್‌ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

news18-kannada
Updated:March 10, 2021, 2:48 PM IST
Mohan Delkar: ದಾದ್ರ-ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್​ ಆತ್ಮಹತ್ಯೆ ಕೇಸ್; ತನಿಖೆಗಾಗಿ SITತಂಡ ರಚಿಸಿ ಮಹಾರಾಷ್ಟ್ರ ಸರ್ಕಾರ
ಮೃತ ಸಂಸದ ಮೋಹನ್​ ಡೆಲ್ಕರ್​.
  • Share this:
ಮುಂಬೈ (ಮಾರ್ಚ್​ 10); ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಸ್ವತಂತ್ರ ಸಂಸದ ಮೋಹನ್ ಡೆಲ್ಕರ್ (58) ಕಳೆದ ಫೆಬ್ರವರಿ 22 ರಂದು ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ​ ಶವವಾಗಿ ಪತ್ತೆಯಾಗಿದ್ದರು. ಆರಂಭಿಕ ತನಿಖೆಗಳಿಂದ ಇದು ಆತ್ಮಹತ್ಯೆ ಎಂಬುದು ಖಚಿತವಾಗಿತ್ತು. ಕೋಣೆಯಲ್ಲಿ ಆತ್ಮಹತ್ಯೆ ಪತ್ರವೂ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಹೀಗಾಗಿ ಸಂಸದ ಮೋಹನ್ ಡೆಲ್ಕರ್ ಅವರ ಮರಣದ ಎರಡು ವಾರಗಳ ನಂತರ, ಮೆರಿನ್ ಡ್ರೈವ್ ಪೊಲೀಸರು ಮಂಗಳವಾರ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಮತ್ತು ಇತರ ಆರು ಜನರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು SIT ತನಿಖೆಗೆ ಒಪ್ಪಿಸಿದೆ.

ಸಂಸದ ಮೋಹನ್ ಢೆಲ್ಕರ್​ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ 15 ಪುಟಗಳಷ್ಟು ಡೆತ್‌ ನೋಟ್‌ ಅನ್ನು ಬರೆದಿದ್ದರು, ಇದರಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್‌ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇದರ ಜೊತೆಗೆ ಪತ್ರದಲ್ಲಿ ಕಲೆಕ್ಟರ್ ಮತ್ತು ಪೊಲೀಸ್ ಅಧೀಕ್ಷಕರನ್ನು ಸಹ ಹೆಸರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆಲ್ಕರ್‌ ಅವರ ಮಗ ಅಭಿನವ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ. "ಮುಂಬೈಗೆ ಬಂದು ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿದ್ದು, ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಲು ಅವರು ಸಹಾಯ ಮಾಡುತ್ತಾರೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ" ಎಂದು ಅಭಿನವ್ ಮಾಧ್ಯಮಗಳ ಎದುರು ಹೇಳಿಕೆ ನೀಡಿದ ಬೆನ್ನಿಗೆ ಡೆತ್​ನೋಟ್​ನಲ್ಲಿ ಉಲ್ಲೇಖಿಸಲ್ಪಟ್ಟ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ,ಸಂಸದನ ಆತ್ಮಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವುದಾಗಿ ಮಹಾರಾಷ್ಟ್ರ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದೆ.

ಇದನ್ನೂ ಓದಿ: ಸ್ವತಂತ್ರ್ಯ ಸಂಸದ ಮೋಹನ್​ ಡೆಲ್ಕರ್​ ಮುಂಬೈ ಹೋಟೆಲ್​​ನಲ್ಲಿ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ

7 ಬಾರಿ ಸಂಸದರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಮೋಹನ್ ಡೆಲ್ಕರ್​ ಈ ಹಿಂದೆ ಕಾಂಗ್ರೆಸ್​ ಪಕ್ಷದಲ್ಲಿದ್ದರು. ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರೂ ಸಹ ಅವರಿಗೆ ಚುನಾವಣೆ ಟಿಕೆಟ್​ ನೀಡದ ಕಾರಣ ಅವರು ಕಾಂಗ್ರೆಸ್​ ಪಕ್ಷ ತೊರೆದು ಕಳೆದ 2019ರ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು 2004 ರಿಂದಲೂ ಸಂಸತ್ತಿನಲ್ಲಿ ದಾದ್ರಾ ಮತ್ತು ನಗರ ಹವೇಲಿಯನ್ನು ಪ್ರತಿನಿಧಿಸಿದ್ದರು.

ಕೇಂದ್ರ ಸರ್ಕಾರದಲ್ಲಿ ಮೋಹನ್​ ಡೆಲ್ಕರ್​ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ಗೃಹ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.
Published by: MAshok Kumar
First published: March 10, 2021, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories