ಕಾಬೂಲ್​ನಲ್ಲಿ ಶಿಯಾ ಮಸೀದಿ ಬಳಿ ಆತ್ಮಹತ್ಯಾ ದಾಳಿ: 29 ಸಾವು


Updated:March 21, 2018, 9:23 PM IST
ಕಾಬೂಲ್​ನಲ್ಲಿ ಶಿಯಾ ಮಸೀದಿ ಬಳಿ ಆತ್ಮಹತ್ಯಾ ದಾಳಿ: 29 ಸಾವು
  • Share this:
- ನ್ಯೂಸ್18 ಕನ್ನಡ

ಕಾಬೂಲ್(ಮಾ. 21): ಶಿಯಾ ಮುಸ್ಲಿಮರ ಧಾರ್ಮಿಕ ಮಂದಿರವನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ 29ಕ್ಕೂ ಹೆಚ್ಚು ಜನರು ಬಲಿಯಾದ ಘೋರ ಘಟನೆ ಆಫ್ಘಾನಿಸ್ತಾನದಲ್ಲಿ ಸಂಭವಿಸಿದೆ. ರಾಜಧಾನಿ ಕಾಬೂಲ್​ನ ಪಶ್ಚಿಮ ಭಾಗದಲ್ಲಿರುವ ಕರತೇ ಸಖಿ ಮಂದಿರದ ಮೇಲಿನ ಈ ದಾಳಿಯ ಹೊಣೆಯನ್ಜು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಶಿಯಾದವರು ಹೆಚ್ಚಾಗಿರುವ ಈ ಪ್ರದೇಶದಲ್ಲಿರುವ ಈ ಮಂದಿರದೊಳಗೆ ಪ್ರವೇಶಿಸಲು ವಿಫಲಯತ್ನ ನಡೆಸಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆಯುವಷ್ಟರಲ್ಲಿ ಬಾಂಬ್ ಸ್ಫೋಟಿಸಿಕೊಂಡಿದ್ದಾನೆನ್ನಲಾಗಿದೆ. ಈ ದಾಳಿಯಲ್ಲಿ 29 ಮಂದಿ ಸಾವನ್ನಪ್ಪಿರುವ ಜೊತೆಗೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶಿಯಾದವರನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರರು ಹಲವು ಬಾರಿ ದಾಳಿ ನಡೆಸಿದ್ದಾರೆ. ದುರಂತ ಸಂಭವಿಸಿದ ಇಂದು ನವ್ರುಜ್ ದಿನವಾಗಿದ್ದು ಆಫ್ಘಾನಿಸ್ತಾನದಲ್ಲಿ ರಜೆ ಇತ್ತು.
First published:March 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...