ಬೆಳ್ಳಂಬೆಳಗ್ಗೆ ಕಾಬೂಲ್​ನ ಗುರುದ್ವಾರದಲ್ಲಿ ಉಗ್ರರಿಂದ ಗುಂಡಿನ ದಾಳಿ; 11 ಜನ ಸಾವು

ಹಲವರು ಆ ಕಟ್ಟಡದೊಳಗೆ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಕಾರ್ಯ ನಡೆಯುತ್ತಿದೆ. ಸಿಖ್ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾಗಲೇ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಬೂಲ್ (ಮಾ. 25): ಅಫಘಾನಿಸ್ತಾನದ ಕಾಬೂಲ್​ನಲ್ಲಿ ನಡೆದ ಸಿಖ್ಖರ ಧಾರ್ಮಿಕ ಸಮಾರಂಭಕ್ಕೆ ನುಗ್ಗಿದ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ 11 ಜನ ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಅಫಘಾನಿಸ್ತಾನದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಖ್​ ಧಾರ್ಮಿಕ ಕೇಂದ್ರವಾಗಿರುವ ಗುರುದ್ವಾರದಲ್ಲಿ ಗುಂಡಿನ ದಾಳಿ ನಡೆದಿದ್ದಷ್ಟೇ ಅಲ್ಲದೆ, ಓರ್ವ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಕಾಬೂಲ್​ನಲ್ಲಿ ಬೆಳಗ್ಗೆ 7.45ಕ್ಕೆ ನಡೆದ ದಾಳಿಯಲ್ಲಿ 11 ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸಚಿವಾಲಯ ಖಚಿತಪಡಿಸಿದೆ.ಹಲವರು ಆ ಕಟ್ಟಡದೊಳಗೆ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಕಾರ್ಯ ನಡೆಯುತ್ತಿದೆ. ಧರ್ಮಶಾಲಾದಲ್ಲಿ ಸಿಖ್ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾಗಲೇ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಕಳೆದ ತಿಂಗಳು ಇಲ್ಲಿ ಐಸಿಸ್​ ಸಂಘಟನೆಯ ಉಗ್ರರು ಶಿಯಾ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 32 ಜನರು ಸಾವನ್ನಪ್ಪಿದ್ದರು.
First published: