Afghanistan Blast: ಅಫ್ಘಾನಿಸ್ತಾನದಲ್ಲಿ ನಮಾಜ್ ವೇಳೆ ಬಾಂಬ್ ಸ್ಫೋಟ; 60ಕ್ಕೂ ಹೆಚ್ಚು ಮಂದಿ ಬಲಿ; ಐಸಿಸ್ ಕೈವಾಡ ಶಂಕೆ

Suicide Blast at Kuduz Mosque- ಅಫ್ಘಾನಿಸ್ತಾನದ ಕುಂದೂಜ್ ನಗರದ ಮಸೀದಿಯೊಂದರಲ್ಲಿ ಉಗ್ರಗಾಮಿಗಳು ಆತ್ಮಾಹುತಿ ಬಾಂಬ್ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ. ಐಸಿಸ್-ಕೆ ಈ ದಾಳಿಯ ಹಿಂದಿರಬಹುದೆಂಬ ಶಂಕೆ ಇದೆ.

ಬಾಂಬ್ ಸ್ಫೋಟ

ಬಾಂಬ್ ಸ್ಫೋಟ

 • Share this:
  ಕಾಬುಲ್: ಅಫ್ಘಾನಿಸ್ತಾನ (Afghanistan) ದ ಕುಂದೂಜ್​ನಲ್ಲಿ ಶುಕ್ರವಾರದ ನಮಾಜ್ ವೇಳೆ ದೊಡ್ಡ ಪ್ರಮಾಣದಲ್ಲಿ ಬಾಂಬ್ ದಾಳಿ (Kunduz Mosque Suicide Bomb Blast) ನಡೆದಿದೆ. ಈ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 107 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಬಾಂಬ್ ದಾಳಿಯನ್ನು ಹಜಾರಾ ಶಿಯಾ ಮಸೀದಿಯನ್ನು ಗುರಿಯಾಗಿಸಿ ನಡೆಸಲಾಗಿತ್ತು. ಸದ್ಯ ನಮ್ಮ ಆಸ್ಪತ್ರೆಯಲ್ಲಿ 35ಕ್ಕೂ ಹೆಚ್ಚು ಶವಗಳು ಶವಾಗರದಲ್ಲಿವೆ. 50 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಂದೂಜ್ ನಗರದ ಸೆಂಟ್ರಲ್ ಆಸ್ಪತ್ರೆಯರು ವೈದ್ಯರು ತಿಳಿಸಿದ್ದಾರೆ. ನಗರದ ಮತ್ತೊಂದು ಆಸ್ಪತ್ರೆಯಲ್ಲಿ 15 ಶವಗಳಿರುವ ಬಗ್ಗೆ ವರದಿಯಾಗಿದೆ. ಕೆಲ ವರದಿಗಳ ಪ್ರಕಾರ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ನೂರಕ್ಕೂ ಹೆಚ್ಚು.

  ದಾಳಿ ನಡೆದಿದ್ದು ಹೇಗೆ?: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಸರ್ಕಾರ ರಚನೆ ಮಾಡಿದ ಬಳಿಕ ನಡೆದ ದೊಡ್ಡ ಬಾಂಬ್ ದಾಳಿ ಇದಾಗಿದೆ. ಇದನ್ನು ಆತ್ಮಾಹುತಿ ದಾಳಿ ಎಂದು ಕುಂದೂಜ್ ನಗರದ ಸಂಸ್ಕೃತಿ ಮತ್ತು ಸೂಚನಾ ನಿರ್ದೇಶಕ ಮತಿಉಲ್ಲಾಹ ರೋಹಾನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ತಾಲಿಬಾನ್ ವಕ್ತಾರ ಜಬಿಹುಲ್ಲಾಹ ಮುಜಾಹಿದ್, ಕುಂದೂಜ್ ಮಸೀದಿಯಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿ ದಾಳಿ ನಡೆಸಿರುವ ಶಂಕೆಗಳಿವೆ. ಸದ್ಯ ಘಟನೆಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಅಫ್ಘಾನಿಸ್ತಾನದ ಪ್ರಮುಖ ಮಾಧ್ಯಮ 43 ಜನರು ಮೃತರಾಗಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.

  ದಾಳಿ ವೇಳೆ ಮಸೀದಿಯಲ್ಲಿದಿದ್ದು 300 ಜನರು!:

  ಮಸೀದಿಯ ಭದ್ರತಾ ಸಿಬ್ಬಂದಿ ಪ್ರಕಾರ, ಶುಕ್ರವಾರದ ನಮಾಜ್ (Friday Namaz)ಗಾಗಿ ಸುಮಾರು 300 ಜನ ತೆರಳಿದ್ದರು. ಶುಕ್ರವಾರ ಆಗಿದ್ದರಿಂದಲೇ ಹೆಚ್ಚು ಜನರು ಜಮಾವಣೆಗೊಂಡಿದ್ದರು. ನಮಾಜ್ ಮಾಡುತ್ತಿರುವಾಗಲೇ ಸ್ಫೋಟದ ಸದ್ದು ಕೇಳಿಸಿತು. ಘಟನಾ ಸ್ಥಳದಲ್ಲಿ ಜನರ ಕಿರುಚಾಟ ಕೇಳಿಸಿತು. ನೋಡ ನೋಡುತ್ತಿದ್ದಂತೆ ಜನರು ಅತ್ತಿಂದ ಇತ್ತ ಓಡಲು ಆರಂಭಿಸಿದರು ಎಂದು ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.

  ಇದನ್ನೂ ಓದಿ: KV Subramanian: ಕೇಂದ್ರದ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ರಾಜೀನಾಮೆ; ಮೋದಿ ಬಗ್ಗೆ ಕೊನೆಯದಾಗಿ ಹೇಳಿದ್ದೇನು?

  ಐಸಿಸ್-ಖುರಾಸಾನ (ISIS Khorasan) ದಾಳಿ ಶಂಕೆ:

  ಇದುವರೆಗೂ ಮಸೀದಿಯಲ್ಲಿ ನಡೆದ ದಾಳಿಯ ಜವಾಬ್ದಾರಿಯನ್ನು ಯಾವ ಸಂಘಟನೆ ಹೊತ್ತುಕೊಂಡಿಲ್ಲ. ತಾಲಿಬಾನಿಗಳ ವಿರೋಧಿಗಳೇ ಈ ದಾಳಿಯನ್ನು ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಸ್ಫೋಟದ ಹಿಂದೆ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಐಸಿಸ್ -ಕೆ (ISIS-K) ಬಗ್ಗೆ ಶಂಕೆ ವ್ಯಕ್ತವಾಗಿದೆ. ಐಸಿಸ್ ಶಿಯಾ ಮುಸ್ಲಿಮ್ (Shia Muslim)ರನ್ನು ವಿರೋಧಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಹಜಾರಾ ಮತ್ತು ಇನ್ನುಳಿದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನೂ ಐಸಿಸ್-ಕೆ ವಿರೋಧಿಸುತ್ತಿದೆ.

  ಇದನ್ನೂ ಓದಿ: ಹರಾಜಿನಲ್ಲಿ Air Indiaನ ತನ್ನದಾಗಿಸಿಕೊಂಡ Tata: ಮಹಾರಾಜ ಮರಳಿ ಗೂಡಿಗೆ

  ಭಾನುವಾರವೂ ಕಾಬೂಲ್ ಬಳಿ ನಡೆದಿತ್ತು ದಾಳಿ:

  ಕಳೆದ ಭಾನುವಾರ ಕಾಬೂಲ್ ನ ಈದ್ಗಾ ಮಸೀದಿ ಬಳಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಮಸೀದಿ ಬಳಿ ಮುಜಾಹಿದ್ ತಾಯಿ ನಿಧನದ ಸಂತಾಪ ಸಭೆ ನಡೆದಿತ್ತು. ಪ್ರಾರ್ಥನೆ ಸಲ್ಲಿಸಲು ಜನರು ಸೇರಿದ ಗುಂಪನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿತ್ತು. ಕೆಲ ದಿನಗಳ ಮುಜಾಹಿದ್ದೀನ್ ತಾಯಿ ಸಾವನ್ನಪ್ಪಿದ್ದರು.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: