Suicide Blast At Kabul: ಟಿ20 ಟೂರ್ನಿ ವೇಳೆ ಸ್ಟೇಡಿಯಂನಲ್ಲಿ ಆತ್ಮಾಹುತಿ ಸ್ಫೋಟ: ಯಾರಿಗೆ ಏನಾಯ್ತು?

ಎಲ್ಲಾ ಆಟಗಾರರನ್ನು ಬಂಕರ್ ಒಳಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಮತ್ತು ಪಮೀರ್ ಝಲ್ಮಿ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿದೆ. ದಾಳಿ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.

ಘಟನಾ ಸ್ಥಳ

ಘಟನಾ ಸ್ಥಳ

  • Share this:
ಕಾಬೂಲ್​: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಕಾಬೂಲ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Kabul International Cricket Stadium) ಆತ್ಮಾಹುತಿ ಸ್ಫೋಟ (Suicide Blast) ಸಂಭವಿಸಿದ. ಶ್ಪಜೀಜಾ ಕ್ರಿಕೆಟ್ ಲೀಗ್ ಟಿ20 (Shpageeza Cricket League T20) ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೂಡಲೇ ಎಲ್ಲಾ ಆಟಗಾರರನ್ನು ಬಂಕರ್ ಒಳಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಮತ್ತು ಪಮೀರ್ ಝಲ್ಮಿ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿದೆ. ದಾಳಿ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.

ಅಫ್ಘನ್​​ನಲ್ಲಿ ಸರಣಿ ಸ್ಫೋಟಗಳು

ಐಪಿಎಲ್ ಶೈಲಿಯ ವೃತ್ತಿಪರ ಟಿ20 ಲೀಗ್ ಶ್ಪಜೀಜಾ ಕ್ರಿಕೆಟ್ ಲೀಗ್ ಅನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು 2013 ರಲ್ಲಿ ಆರಂಭಿಸಿದೆ. ತಾಲಿಬಾನ್ ಆಡಳಿತವನ್ನು ವಿರೋಧಿಸುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಆರಂಭಿಸಿದ ಸರಣಿ ಬಾಂಬ್ ದಾಳಿಯಿಂದ ಅಫ್ಘಾನಿಸ್ತಾನವು ತತ್ತರಿಸಿದೆ. ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್‌ನ ಗೇಟ್ ಬಳಿ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಭೀಕರ ದಾಳಿಯಿಂದ ಸಾವು-ನೋವು

ಜೂನ್‌ನಲ್ಲಿ, ಕಾಬೂಲ್‌ನ ಬಾಗ್-ಎ ಬಾಲಾ ನೆರೆಹೊರೆಯಲ್ಲಿರುವ ಗುರುದ್ವಾರ ಕಾರ್ಟೆ ಪರ್ವಾನ್‌ನಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದ್ದವು. ಗುರುದ್ವಾರದ ಮೇಲಿನ ಭೀಕರ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. ಈ ಸ್ಫೋಟದಲ್ಲಿ ಒಬ್ಬ ಸಿಖ್ ಸಮುದಾಯದ ಸದಸ್ಯ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೇ ತಿಂಗಳಲ್ಲಿ, ಈ ವರ್ಷದ ಅತ್ಯಂತ ಭೀಕರ ದಾಳಿಯಲ್ಲಿ, ಕಾಬೂಲ್ ಮತ್ತು ಉತ್ತರದ ನಗರವಾದ ಮಜಾರ್-ಇ-ಶರೀಫ್ ಅನ್ನು ಬೆಚ್ಚಿಬೀಳಿಸಿದ ನಾಲ್ಕು ಸ್ಫೋಟಗಳಲ್ಲಿ 14 ಜನರು ಸಾವನ್ನಪ್ಪಿದರು ಮತ್ತು 32 ಮಂದಿ ಗಾಯಗೊಂಡರು.

ಇದನ್ನೂ ಓದಿ: Students Gang War: ಶಾಕಿಂಗ್; ಶಾಲಾ ಮಕ್ಕಳ ಗ್ಯಾಂಗ್ ವಾರ್​​ನಲ್ಲಿ ಬಾಂಬ್​ಗಳ ಎಸೆತ! ಬಾಂಬ್​ ಅನ್ನೂ ಅವರೇ ತಯಾರಿಸಿದ್ದರು

ಕಾಬೂಲ್‌ನಲ್ಲಿ ಸಂಜೆಯ ಪ್ರಾರ್ಥನೆಯ ವೇಳೆ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿದ ನಂತರ ಐವರು ಆರಾಧಕರು ಸಾವನ್ನಪ್ಪಿದರು. 17 ಮಂದಿ ಗಾಯಗೊಂಡರು. ಹಜರತ್-ಎ-ಜೆಕ್ರಿಯಾ ಮಸೀದಿಯಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಜಾರ್-ಇ-ಶರೀಫ್‌ನಲ್ಲಿ ಮೂರು ಬಸ್‌ಗಳಲ್ಲಿ ಸತತ ಮೂರು ಸ್ಫೋಟಗಳು ಸಂಭವಿಸಿದ ಒಂದು ಗಂಟೆಯ ನಂತರ ಕಾಬೂಲ್ ಸ್ಫೋಟ ಸಂಭವಿಸಿದೆ, ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 15 ಮಂದಿ ಗಾಯಗೊಂಡರು.
Published by:Kavya V
First published: