Pakistan: ಮೊಹರಂ ಮೆರವಣಿಗೆಯಲ್ಲಿ ಉಸಿರುಗಟ್ಟಿ ಆರು ಮಂದಿ ಸಾವು; 12ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಏರ್ಪಟ್ಟ ಅಧಿಕ ಶಾಖ, ಆರ್ದ್ರತೆ ಹಾಗೂ ಹೆಚ್ಚುವರಿ ಜನಸಂಖ್ಯೆಯಿಂದಾಗಿ ಉಸಿರುಗಟ್ಟುವಿಕೆ ಏರ್ಪಟ್ಟು ಕನಿಷ್ಟ ಆರು ಮಂದಿ ಸಾವನ್ನಪ್ಪಿದ್ದು ಹನ್ನೆರಡಕ್ಕೂ ಹೆಚ್ಚು ಮಂದಿ ಪ್ರಾಜ್ಞಾಹೀನರಾಗಿರುವ ಘಟನೆ ಸಂಭವಿಸಿದೆ. ರೋಹ್ರಿ ಪಟ್ಟಣದಲ್ಲಿ ಈ ಅಚಾತುರ್ಯ ಸಂಭವಿಸಿದ್ದು ಮೆರವಣಿಗೆಯು ಇಮಾಂಬರ್ಗಾಕ್ಕೆ ಸಮೀಪವಾಗುತ್ತಿದ್ದಂತೆ ಮೆರವಣಿಗೆಯಲ್ಲಿದ್ದ ಜನಸಂಖ್ಯೆ ಅಧಿಕಗೊಂಡಿದ್ದರಿಂದ ಉಸಿರುಗಟ್ಟುವಿಕೆ ಉಂಟಾಗಿದೆ ಎಂದು ಎಧಿ ಟ್ರಸ್ಟ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಮೊಹರಂ ಮೆರವಣಿಗೆ

ಪಾಕಿಸ್ತಾನದಲ್ಲಿ ಮೊಹರಂ ಮೆರವಣಿಗೆ

  • Share this:
ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ಮೊಹರಂ ಮೆರವಣಿಗೆಯ (Muharram Procession) ಸಂದರ್ಭದಲ್ಲಿ ಏರ್ಪಟ್ಟ ಅಧಿಕ ಶಾಖ, ಆರ್ದ್ರತೆ ಹಾಗೂ ಹೆಚ್ಚುವರಿ ಜನಸಂಖ್ಯೆಯಿಂದಾಗಿ ಉಸಿರುಗಟ್ಟುವಿಕೆ ಏರ್ಪಟ್ಟು ಕನಿಷ್ಟ ಆರು ಮಂದಿ ಸಾವನ್ನಪ್ಪಿದ್ದು ಹನ್ನೆರಡಕ್ಕೂ ಹೆಚ್ಚು ಮಂದಿ ಪ್ರಾಜ್ಞಾಹೀನರಾಗಿರುವ ಘಟನೆ ಸಂಭವಿಸಿದೆ. ರೋಹ್ರಿ ಪಟ್ಟಣದಲ್ಲಿ ಈ ಅಚಾತುರ್ಯ ಸಂಭವಿಸಿದ್ದು ಮೆರವಣಿಗೆಯು ಇಮಾಂಬರ್ಗಾಕ್ಕೆ ಸಮೀಪವಾಗುತ್ತಿದ್ದಂತೆ ಮೆರವಣಿಗೆಯಲ್ಲಿದ್ದ ಜನಸಂಖ್ಯೆ ಅಧಿಕಗೊಂಡಿದ್ದರಿಂದ ಉಸಿರುಗಟ್ಟುವಿಕೆ (Suffocation) ಉಂಟಾಗಿದೆ ಎಂದು ಎಧಿ ಟ್ರಸ್ಟ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆರು ಜನರು ಉಸಿರುಗಟ್ಟುವಿಕೆಯಿಂದ ನಿಧನರಾಗಿದ್ದು (Death) ಹನ್ನೆರಡಕ್ಕೂ ಅಧಿಕ ಮಂದಿ ಪ್ರಜ್ಞೆ ಕಳೆದುಕೊಂಡಿದ್ದಾರೆ (Lost Consciousness) ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಒದಗಿಸಲಾಗಿದೆ ಎಂಬುದಾಗಿ ಅಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಮೊಹರಂ ಆಚರಣೆ
ಇಸ್ಲಾಂ ಕ್ಯಾಲೆಂಡರ್‌ನ ಮೊದಲ ತಿಂಗಳನ್ನು ಮೊಹರಂ ಎಂಬುದಾಗಿ ಉಲ್ಲೇಖಿಸಲಾಗುತ್ತದೆ. ಮೊಹರಂನ ಹತ್ತನೇ ದಿನವನ್ನು ಅಶುರಾ ಎಂದು ಕರೆಯಲಾಗುತ್ತದೆ. ಇರಾಕ್‌ನ ಕರ್ಬಲಾದಲ್ಲಿ ಶತಮಾನಗಳ ಹಿಂದೆ ಹುತಾತ್ಮರಾದ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರನ್ನು ಸ್ಮರಿಸುವ ಸಲುವಾಗಿ ಶಿಯಾ ಮುಸ್ಲಿಮರು ಈ ದಿನದಂದು ಉಪವಾಸಗಳನ್ನು ಕೈಗೊಳ್ಳುತ್ತಾರೆ.

ಸುಮಾರು 1400 ವರ್ಷಗಳ ಹಿಂದೆ ಕರ್ಬಾಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಅವರ ಶಿರಚ್ಛೇದನ ಮಾಡಲಾಯಿತು. ಈ ದಿನದ ನೆನಪಿಗಾಗಿ ಅವರನ್ನು ಸ್ಮರಿಸುತ್ತಾ ಮೆರವಣಿಗೆಗಳನ್ನು ನಡೆಸುವ ಜೊತೆಗೆ ತಾಜಿಯಾವನ್ನು ತೆಗೆದುಕೊಳ್ಳುವ ಸಂಪ್ರದಾಯವಿದೆ. ಶಿಯಾ ಸಮುದಾಯದವರು ಮೆರವಣಿಗೆ ನಡೆಸಿ ಪ್ರಾರ್ಥನೆಗಳ ಮೂಲಕ ತಮ್ಮ ಸಂತಾಪಗಳನ್ನು ಸೂಚಿಸುತ್ತಾರೆ. ಸಾರ್ವಜನಿಕ ರಜಾದಿನಗಳಾದ ಮೊಹರಂನ 9 ಮತ್ತು 10 ನೇ ದಿನದಂದು ಪಾಕಿಸ್ತಾನದ ಎಲ್ಲಾ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ.

ಮೊಹರಂ ಸಮಯದಲ್ಲಿ ಬಿಗಿಭದ್ರತೆ
ಪಾಕ್‌ನ ಜನಸಂಖ್ಯೆಯ 15-20% ದಷ್ಟು ಶಿಯಾ ಮುಸ್ಲೀಮರಿದ್ದು ಉಳಿದವರು ಸುನ್ನಿಗಳಾಗಿದ್ದಾರೆ. ಪಾಕ್‌ನಲ್ಲಿ ಶಿಯಾಗಳು ಮತ್ತು ಶಿಯಾ ಹಜಾರಾ ಸಮುದಾಯಗಳ ವಿರುದ್ಧ ಪಂಥೀಯ ಹಿಂಸಾಚಾರ ಸಾಮಾನ್ಯವಾಗಿದೆ. ಇದರ ಹೊರತಾಗಿಯೂ, ಬಿಗಿ ಭದ್ರತೆಯ ನಡುವೆ ಪ್ರತಿ ವರ್ಷ ಜನರು ಮೊಹರಂ ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. 70,000 ಕ್ಕಿಂತಲೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಪಾಕ್‌ನ ಬೇರೆ ಬೇರೆ ಸ್ಥಳಗಳಲ್ಲಿ ಈ ಸಮಯದಲ್ಲಿ ಒದಗಿಸಲಾಗುತ್ತದೆ ಅಂತೆಯೇ ಮೊಬೈಲ್ ಫೋನ್ ಸೇವೆಗಳನ್ನು ನಿರ್ಬಂಧಿಸಲಾಗುತ್ತದೆ.

ಇದನ್ನೂ ಓದಿ: Muharram 2022: ಮೊಹರಂ ಮಹತ್ವ ಸಾರಿದ ಪ್ರಧಾನಿ ಮೋದಿ; ಸಹೋದರತ್ವದ ಹಬ್ಬ ಎಂದು ಬಣ್ಣನೆ

ಮೊಹರಂ ಮತ್ತು ಅಶುರಾದ 9 ನೇ ದಿನದಂದು ನಡೆಯುವ ಪ್ರಮುಖ ಮೆರವಣಿಗೆಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ ಮತ್ತು ಭದ್ರತೆಯನ್ನು ಒದಗಿಸಲು ಸಾವಿರಾರು ಪೊಲೀಸರು ಮತ್ತು ಅರೆಸೈನಿಕ ರೇಂಜರ್‌ಗಳನ್ನು ನಿಯೋಜಿಸಲಾಗುತ್ತದೆ.

ಶಿಯಾ ಸಮುದಾಯದವರಿಗೆ ಮೊಹರಂ ಆಚರಣೆ ಶೋಕದಾಯಕ
ಮೊಹರಂ ತಿಂಗಳು ಪ್ರಪಂಚದಾದ್ಯಂತವಿರುವ ಮುಸ್ಲಿಮರಿಗೆ ಅತ್ಯಂತ ಪವಿತ್ರ ಮಾಸವಾಗಿದ್ದು ಶಿಯಾ ಮುಸ್ಲಿಮರಿಗೆ ಶೋಕದಾಯಕ ಎಂದೆನಿಸಿದೆ. ಇಮಾಮ್ ಹುಸೇನ್ ಹಾಗೂ ಅವರ ಕುಟುಂಬದ ಮರಣವನ್ನು ಸ್ಮರಿಸುತ್ತಾ ಈ ಸಮುದಾಯ ಸಂತೋಷಕೂಟಗಳಲ್ಲಿ ಭಾಗವಹಿಸುವುದಿಲ್ಲ. ಮೆರವಣಿಗೆಗಳಲ್ಲಿ ಹಾಗೂ ಆಚರಣೆಗಳ ಸಂದರ್ಭದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಿ, ಇಂದ್ರಿಯ ನಿಗ್ರಹದ ಅನುಷ್ಟಾನವನ್ನು ಕೈಗೊಳ್ಳುತ್ತಾರೆ.

ಇದನ್ನೂ ಓದಿ: Pakistan: ಹಿಂದೂ ದೇವಾಲಯ ಪುನರ್​ ಸ್ಥಾಪಿಸಲು ಮುಂದಾದ ನೆರೆಯ ಪಾಕಿಸ್ತಾನ!

ಉಪವಾಸ ನಡೆಸುವುದು, ಸರಪಳಿಗಳಿಂದ ಸಾರ್ವಜನಿಕವಾಗಿ ತಮಗೆ ತಾವೇ ಹಿಂಸಿಸಿಕೊಳ್ಳುವುದು, ಚಾಕು ಇಲ್ಲವೇ ಚೂಪಾದ ಆಯುಧಗಳಿಂದ ಚರ್ಮವನ್ನು ಕತ್ತರಿಸಿಕೊಳ್ಳುವುದು ಅಂತೆಯೇ ಶೋಕಭರಿತ ಮೆರವಣಿಗೆಗಳನ್ನು ನಡೆಸುವುದು ಈ ಸಂದರ್ಭದಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ದಿನದಂದು ಉಪವಾಸ ನಡೆಸಿ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ಸಾರ್ವಜನಿಕ ಆಚರಣೆಗಳು ಈ ಸಮಯದಲ್ಲಿ ಅತ್ಯಂತ ಮಹತ್ವವಾಗಿದ್ದು ಪಾಲ್ಗೊಂಡ ಜನಸಮೂಹವು ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ನಡೆಸುತ್ತಾರೆ.
Published by:Ashwini Prabhu
First published: