• Home
  • »
  • News
  • »
  • national-international
  • »
  • Sudha Murthy: ಸಂಭಾಜೀ ಭಿಡೆ ಪಾದ ಮುಟ್ಟಿದ ಸುಧಾ ಮೂರ್ತಿ: ವಿಡಿಯೋ ವೈರಲ್, ನೆಟ್ಟಿಗರು ಗರಂ!

Sudha Murthy: ಸಂಭಾಜೀ ಭಿಡೆ ಪಾದ ಮುಟ್ಟಿದ ಸುಧಾ ಮೂರ್ತಿ: ವಿಡಿಯೋ ವೈರಲ್, ನೆಟ್ಟಿಗರು ಗರಂ!

ಸಂಭಾಜೀ ಭಿಡೆ ಜೊತೆ ಸುಧಾ ಮೂರ್ತಿ ಸಂಭಾಷಣೆ

ಸಂಭಾಜೀ ಭಿಡೆ ಜೊತೆ ಸುಧಾ ಮೂರ್ತಿ ಸಂಭಾಷಣೆ

ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ತುಂಬಿದ ಸಭೆಯಲ್ಲಿ ಮಹಾರಾಷ್ಟ್ರದ ಬಲಪಂಥೀಯ ಸಂಘಟನೆಯೊಂದರ ಮುಖಂಡ ಪಾದಗಳನ್ನು ಸ್ಪರ್ಶಿಸುವ ವಿಡಿಯೋ ವೈರಲ್ ಆಗಿದೆ. ಆದರೀಗ ಈ ದೃಶ್ಯಾವಳಿಗಳು ವೈರಲ್ ಆದ ಬೆನ್ನಲ್ಲೇ ಸುಧಾ ಮೂರ್ತಿ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

  • Share this:

ಮುಂಬೈ(ನ.09): ತುಂಬಿದ ಸಭೆಯೊಂದರಲ್ಲಿ ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಮಹಾರಾಷ್ಟ್ರದ (Maharashtra) ಬಲಪಂಥೀಯ ಸಂಘಟನೆಯೊಂದರ ಮುಖಂಡ ಸಂಭಾಜಿ ಭಿಡೆ (Sambhaji Bhide) ಪಾದಗಳನ್ನು ಸ್ಪರ್ಶಿಸುವ ವಿಡಿಯೋ ವೈರಲ್ ಆಗಿದ್ದು, ಅವರ ನಡೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy)ಅವರ ಪತ್ನಿ ಸುಧಾ ಮೂರ್ತಿ (Sudha Murthy) ಅವರು ಸಂಭಾಜಿ ಭಿಡೆ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲ ದಿನಗಳ ಹಿಂದಷ್ಟೇ ಹಣೆಯ ಮೇಲೆ ಬೊಟ್ಟು ಇಲ್ಲ ಎಂಬ ಕಾರಣಕ್ಕೆ ಮಹಿಳಾ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಪ್ರಕರಣದಲ್ಲಿ ಭಿಡೆ ಅವರಿಗೆ ರಾಜ್ಯ ಮಹಿಳಾ ಆಯೋಗ ಇತ್ತೀಚೆಗೆ ನೋಟಿಸ್ ಜಾರಿ ಮಾಡಿತ್ತು. ಪತ್ರಕರ್ತರೊಂದಿಗೆ ಮಾತನಾಡುವ ಮೊದಲು ಭಿಡೆ ಅವರು ಮಹಿಳಾ ಪತ್ರಕರ್ತರಿಗೆ ಹಣೆಗೆ ಬೊಟ್ಟು ಇಡಿ, ಬಿಂದಿಯನ್ನು ಧರಿಸದೆ “ವಿಧವೆಯಂತೆ ಇರಬೇಡಿ” ಎಂದು ಹೇಳಿದ್ದರು.


ಇದನ್ನೂ ಓದಿ: ಹಣೆಗೆ ಬೊಟ್ಟು ಇಡದ ಮಹಿಳಾ ಪತ್ರಕರ್ತೆ ಬಳಿ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ


ಸಹಾಯ ಕೇಳಲು ಬಂದಿದ್ದ ಭಿಡೆ


ಇನ್ನು ಸುಧಾ ಮೂರ್ತಿಗೆ ಸಂಬಂಧಿಸಿದ ವೈರಲ್ ವಿಡಿಯೋ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯದ್ದೆಂದು ಹೇಳಲಾಗಿದೆ. ಸುಧಾ ಮೂರ್ತಿ ಸೋಮವಾರ ತಮ್ಮ ಪುಸ್ತಕ ಪ್ರಚಾರ ಸಂಬಂಧ ಅಲ್ಲಿ ತಲುಪಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹಿಂದಿನ ರಾಜಧಾನಿ ರಾಯಗಢ ಕೋಟೆಯಲ್ಲಿ ಚಿನ್ನದ ಸಿಂಹಾಸನವನ್ನು ಸ್ಥಾಪಿಸಲು ಸಹಾಯ ಯಾಚಿಸುವ ನಿಟ್ಟಿನಲ್ಲಿ ಭಿಡೆ ಸುಧಾ ಮೂರ್ತಿಯನ್ನು ಭೇಟಿಯಾಗಿದ್ದರು ಎಂದು ಭಿಡೆಯ ಶಿವ ಪ್ರತಿಷ್ಠಾನ ಸಂಘಟನೆಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಅವರ ಸಹಾಯಕರೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡುತ್ತಾ, ಅವರಿಗೆ ಭಿಡೆ ಯಾರೆಂದು ತಿಳಿದಿಲ್ಲ, ಹಿರಿಯ ನಾಗರಿಕರಿರು ಎಂದು ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಿದ್ದಾರೆ.


ಭಿಡೆಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ ಎಂದ ಯಾದವ್


ಇನ್ನು ಸಾಂಗ್ಲಿಯ ಕಾರ್ಯಕ್ರಮವನ್ನು ಆಯೋಜಿಸಿದ್ದ ಮೆಹ್ತಾ ಪಬ್ಲಿಕೇಷನ್ಸ್‌ನ ಸಂಪಾದಕೀಯ ಮುಖ್ಯಸ್ಥ ಯೋಜ್ನಾ ​​ಯಾದವ್ ಅವರು ಪಿಟಿಐ ಜೊತೆಗಿನ ಸಂವಾದದಲ್ಲಿ ಭಿಡೆ ಅವರಿಗೆ ಸುಧಾ ಮೂರ್ತಿ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಸ್ಥಳೀಯ ಪೊಲೀಸರು ಒತ್ತಾಯಿಸಿದ್ದರು. ನಾವು ಭಿಡೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದಿದ್ದಾರೆ. ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ, ‘ಇಂತಹ ಕುಖ್ಯಾತ ವ್ಯಕ್ತಿಯ ಪಾದ ಮುಟ್ಟಿ ಸಾಧಿಸಿದ್ದೇನು? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ಸುಧಾ ಮೂರ್ತಿ ವಿರುದ್ಧ ನೆಟ್ಟಿಗರು ಗರಂ


ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪ್ರೀತಿ ಶರ್ಮಾ ಮೆನನ್ ಟ್ವೀಟ್ ಮಾಡಿ, "ಅವರು (ಸುಧಾ ಮೂರ್ತಿ) ಬಿಂದಿ ಧರಿಸಿದ್ದರೆಂದು ನಂಬೋಣ. ಸುಧಾ ಮೂರ್ತಿಯಂತಹವರು ಭಿಡೆಯಂತಹ ಮತಾಂಧರು ಭೇಟಿಯಾದಾಗ, ಅವರು ತಮ್ಮ ನಿಜವಾದ ಬಣ್ಣವನ್ನು ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Published by:Precilla Olivia Dias
First published: