ಕೇರಳ ಭೀಕರ ಪ್ರವಾಹಕ್ಕೆ ತಮಿಳುನಾಡು ಸರ್ಕಾರ ಕಾರಣವಂತೆ!

news18
Updated:August 24, 2018, 7:59 AM IST
ಕೇರಳ ಭೀಕರ ಪ್ರವಾಹಕ್ಕೆ ತಮಿಳುನಾಡು ಸರ್ಕಾರ ಕಾರಣವಂತೆ!
news18
Updated: August 24, 2018, 7:59 AM IST
ನ್ಯೂಸ್ 18 ಕನ್ನಡ

ನವದೆಹಲಿ (ಆ.24): ಕೇರಳದಲ್ಲಿ ಸೃಷ್ಟಿಯಾದ ಕಂಡುಕೇಳರಿಯದ ಭೀಕರ ಮಹಾ ಪ್ರವಾಹ ಸೃಷ್ಟಿಗೆ ತಮಿಳುನಾಡು ಸರ್ಕಾರ ಕಾರಣ ಎಂದು ಕೇರಳ ಆರೋಪಿಸಿದೆ.

ಹೌದು, ಕೇರಳ ವ್ಯಾಪ್ತಿಯಲ್ಲಿರುವ ಮುಲ್ಲಪೆರಿಯಾರ್ ಜಲಾಶಯದಿಂದ ತಮಿಳುನಾಡು ಸರ್ಕಾರ ಏಕಾಏಕಿ ನೀರನ್ನು ಹೊರಬಿಟ್ಟ ಕಾರಣದಿಂದ ಕೇರಳ ಸಂಪೂರ್ಣ ಪ್ರವಾಹಕ್ಕೆ ತುತ್ತಾಗಬೇಕಾಯಿತು. ಇದರಿಂದಾಗಿ 373 ಜನರು ಪ್ರಾಣ ಕಳೆದುಕೊಂಡು, ಸಾವಿರಾರು ಕೋಟಿ ರೂಪಾಯಿ ಆಸ್ತಿ ಹಾನಿಗೀಡಾಯಿತು ಎಂದು ಕೇರಳ ರಾಜ್ಯ ಸರ್ಕಾರ ಗುರುವಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ.

ಕೇರಳ ವ್ಯಾಪ್ತಿಯಲ್ಲಿರುವ  ಮುಲ್ಲಪೆರಿಯಾರ್ ಜಲಾಶಯದ ನಿರ್ವಹಣೆ ತಮಿಳುನಾಡಿಗೆ ಸೇರಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯವನ್ನು 142 ಅಡಿಯಿಂದ 139 ಅಡಿಗೆ ಇಳಿಸುವಂತೆ ಕೇರಳ ಸರ್ಕಾರ ಈ ಹಿಂದೆ ಹಲವು ಬಾರಿ ಮಾಡಿದ್ದ ಮನವಿಯನ್ನು ತಮಿಳುನಾಡು ಸರ್ಕಾರ ತಿರಸ್ಕರಿಸಿದೆ ಎಂಬುದನ್ನು ಕೇರಳ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ.

ಕೇರಳ ಇಡುಕ್ಕಿಯಲ್ಲಿ ಸುರಿದ ಮಳೆಯಿಂದ ಆಗಸ್ಟ್ 15ರಂದು ಮುಲ್ಲಪೆರಿಯಾರ್ ಜಲಾಶಯ 142 ಅಡಿ ಮಟ್ಟ ತಲುಪಿದಾಗ, ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಪೆರಿಯಾರ್ ಜಲಾನಯನ ಪ್ರದೇಶದಲ್ಲಿಯೇ ಮುಲ್ಲಪೆರಿಯಾರ್ ಜಲಾಶಯ ಮೂರನೇ ಅತೀದೊಡ್ಡ ಜಲಾಶಯವಾಗಿದ್ದು, ಈ ಜಲಾಶಯದಿಂದ ಏಕಾಏಕಿ ನೀರನ್ನು ಹೊರಬಿಟ್ಟಿದ್ದರಿಂದ ಇಡುಕ್ಕಿಯಿಂದ ನೀರನ್ನು ಹೊರಬಿಡಬೇಕಾಯಿತು ಎಂದು ಕೇರಳ ತಿಳಿಸಿದೆ.

ಕೇಂದ್ರ ಜಲ ಆಯೋಗದ ಕಾರ್ಯದರ್ಶಿಗಳ ಅಧ್ಯಕ್ಷತೆಯ ಮೇಲುಸ್ತುವಾರಿ ಸಮಿತಿ, ಇಂತಹ ಅನಾಹುತ ಸಂಭವಿಸುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಸ್ಥಿತಿ ನಿರ್ಮಾಣವಾಗದಂತೆ ಸೂಕ್ತ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಮುಲ್ಲಪೆರಿಯಾರ್ ಜಲಾಶಯವನ್ನು ಪ್ರತಿದಿನ ಎಚ್ಚರಿಕೆಯಿಂದ ನಿರ್ವಹಿಸುವಂತೆ ಸಾಂವಿಧಾನಿಕ ನಿರ್ವಹಣಾ ಸಮಿತಿಯನ್ನು ನೇಮಿಸುವಂತೆ ಕೇರಳ ಮನವಿ ಮಾಡಿದೆ.
Loading...

ಪ್ರವಾಹ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳು, ರಕ್ಷಣಾ ಕಾರ್ಯಾಚರಣೆ ಮತ್ತು ಪುನಶ್ಷೇತನಕ್ಕಾಗಿ ಕೇರಳ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಗಸ್ಟ್ 18ರಂದು ಅಪೆಕ್ಸ್ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಕೇರಳ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸಿದೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...