HOME » NEWS » National-international » SUCCESS STORY MUMBAI WOMAN CANTEEN STARTED WITH 3000 RUPEES NOW EARNING 3 CRORE RUPEES PER YEAR STG SCT

Success Story | 3,000 ರೂ.ನಿಂದ ಆರಂಭಿಸಿದ ಮಹಿಳೆಯರ ಕ್ಯಾಂಟೀನ್​ನಿಂದ ಈಗ ವರ್ಷಕ್ಕೆ 3 ಕೋಟಿ ಆದಾಯ!

ವಾಸೈನ ನ್ಯೂ ಇಂಗ್ಲಿಷ್ ಶಾಲೆ ಶಿಕ್ಷಕಿ ಇಂದುಮತಿ ಬರ್ವೆ ಅವರು ಆಕೆಯ ಸ್ನೇಹಿತೆಯರಾದ ಉಷಾ ಮನೆರಿಕರ್, ಜಯಶ್ರೀ ಸಮಂತ್, ಶುಬಂಧ ಕೊತ್ವಾಲೆ ಜೊತೆಗೆ ಟ್ರಸ್ಟ್ ತೆರೆದರು. ಅದರಿಂದ ಮಹಿಳೆಯರೇ ಇರುವ ಕ್ಯಾಂಟೀನ್ ಶುರು ಮಾಡಿದರು. ಈಗ ಆ ಕ್ಯಾಂಟೀನ್ ಬೆಳೆದ ರೀತಿ ಅಚ್ಚರಿ ಮೂಡಿಸುತ್ತಿದೆ.

news18
Updated:February 26, 2021, 8:18 AM IST
Success Story | 3,000 ರೂ.ನಿಂದ ಆರಂಭಿಸಿದ ಮಹಿಳೆಯರ ಕ್ಯಾಂಟೀನ್​ನಿಂದ ಈಗ ವರ್ಷಕ್ಕೆ 3 ಕೋಟಿ ಆದಾಯ!
ಮಹಿಳಾ ಕ್ಯಾಂಟೀನ್ ಸ್ಥಾಪಕಿಯರು
  • News18
  • Last Updated: February 26, 2021, 8:18 AM IST
  • Share this:
ಮಹಿಳೆಯರು ಮನಸ್ಸು ಮಾಡಿದರೆ ಯಾವ ಸಾಧನೆ ಮಾಡಲು ಕೂಡ ಸಿದ್ಧ ಎಂಬುದಕ್ಕೆ ಮುಂಬೈನಲ್ಲಿ ನಡೆದಿರುವ ನೈಜ ಘಟನೆಯೇ ಸಾಕ್ಷಿ. ಮುಂಬೈನ ವಾಸೈನ ನಿವಾಸಿ 30 ವರ್ಷದ ಸುಮಿತ್ರಾ ಸಿಂಘೆ ತನ್ನ ಗಂಡನನ್ನು ಕಳೆದುಕೊಂಡು ದಾರಿ ಕಾಣದಂತೆ ಆಗಿದ್ದರು. ಆಕೆಗೆ 5 ವರ್ಷದ ಮಗನಿದ್ದನು. ಮಗನ ಶಿಕ್ಷಣ ಮತ್ತು ಮುಂದಿನ ಜೀವನ ಹೇಗೆ ಎಂದು ಯೋಚನೆಯಲ್ಲಿದ್ದ ಸುಮಿತ್ರಾಗೆ ಶ್ರಮಿಕ್ ಮಹಿಳಾ ವಿಕಾಸ್ ಸಂಘ ಪರಿಚಯ ಆಗುತ್ತದೆ. ಈ ಸಂಘದಿಂದ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವ ಕೆಲಸಗಳು ನಡೆಯುತ್ತಿದ್ದವು.

ಮಹಿಳೆಯರು ತಮ್ಮ ನಿರಂತರ ಶ್ರಮದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ ಎಂದು ಈಗ 53 ವರ್ಷದ ಸುಮಿತ್ರಾ ಅವರು ಹೇಳುತ್ತಾರೆ. ತನ್ನ ಮಗನಿಗೆ ಈಗ 25 ವರ್ಷ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಹಿಳೆಯರು ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯವಿದೆ ಎಂದು ಸುಮಿತ್ರಾ ಅವರು ಹೇಳುತ್ತಾರೆ.

ಇನ್ನು, ಮುಂಬೈನಲ್ಲಿ 1991ರಲ್ಲಿ ನೋಂದಾಯಿಸಲ್ಪಟ್ಟ ಶ್ರಮಿಕ್ ಮಹಿಳಾ ವಿಕಾಸ್ ಸಂಘದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ತಮ್ಮ ಉಪಜೀವನ ಕಂಡುಕೊಂಡಿದ್ದಾರೆ. ಮಹಿಳೆಯರ ಕಲೆಗೆ ತಕ್ಕಂತೆ ಅವರಿಗೆ ಕೆಲಸ ನೀಡಿ ಜೀವನೋಪಾಯಕ್ಕೆ ಸಂಘವು ಅನುಕೂಲ ಮಾಡಿಕೊಟ್ಟಿದೆ.

ಇದನ್ನೂ ಓದಿ: MBA Chai Wala: 8000 ರೂ.ನಿಂದ 3 ಕೋಟಿಯ ಬ್ಯುಸಿನೆಸ್; ಈ ಚಾಯ್ ವಾಲಾನ ಸಾಧನೆಗೆ ಮೆಚ್ಚಲೇಬೇಕು!

ವಾಸೈನ ಎಂಜಿ ರೋಡ್​ನಲ್ಲಿರುವ ನ್ಯೂ ಇಂಗ್ಲಿಷ್ ಶಾಲೆ ಶಿಕ್ಷಕಿ ಇಂದುಮತಿ ಬರ್ವೆ ಅವರು ಆಕೆಯ ಸ್ನೇಹಿತೆಯರಾದ ಉಷಾ ಮನೆರಿಕರ್, ಜಯಶ್ರೀ ಸಮಂತ್, ಶುಬಂಧ ಕೊತ್ವಾಲೆ ಜೊತೆಗೆ ಟ್ರಸ್ಟ್ ತೆರೆದರು. ಇದರಲ್ಲಿ ಶಿಕ್ಷಕಿಯರು, ಗೃಹಿಣಿಯರು ಇದ್ದರು. ಟ್ರಸ್ಟ್ನಲ್ಲಿನ ಮಹಿಳೆಯರ ಉದ್ದೇಶವು ಆರ್ಥಿಕವಾಗಿ ಮತ್ತು ನಿರ್ಗತಿಕ ಮಹಿಳೆಯರಿಗೆ ಉಪಜೀವನ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಬಲಗೊಳಿಸುವ ಧ್ಯೇಯವಾಗಿತ್ತು. 80ರ ದಶಕದಲ್ಲಿ ಆರಂಭದಲ್ಲಿ ಹಪ್ಪಳದ ರೀತಿಯ ವ್ಯಾಪಾರ ಶುರು ಮಾಡಿದ ಮಹಿಳೆಯರು ಶಾಲೆಯ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಲು ಇಂದುಮತಿ ಬರ್ವೆ ಅವರು ನಿರ್ಧರಿಸಿದರು.

ಮಹಿಳೆಯರಿಂದ ಮಹಿಳೆಯರಿಗಾಗಿ:
ಶಾಲೆಯ ಆವರಣದಲ್ಲಿ ಮುಚ್ಚಿದ್ದ ರೆಸ್ಟೋರೆಂಟ್​ನಲ್ಲಿ ವ್ಯಾಪಾರ ಆರಂಭಿಸಲು ಅನುಮತಿ ಸಿಕ್ಕಿತು. ರೆಸ್ಟೋರೆಂಟ್​ಗೆ ಬಾಡಿಗೆ ಇಲ್ಲದೇ ಮಹಿಳೆಯರಿಗೆ ನೀಡಲಾಯಿತು ಎಂದು ಟ್ರಸ್ಟಿಗಳಲ್ಲಿ ಒಬ್ಬರಾದ ಭಾರತಿ ಠಾಕೂರ್ ಅವರು ಹೇಳುತ್ತಾರೆ. ಎಲ್ಲಾ ಸ್ನೇಹಿತೆಯರು ಸೇರಿ 3,000 ರೂ. ಒಟ್ಟುಗೂಡಿಸಿ ರೆಸ್ಟೋರೆಂಟ್ ತೆರೆಯಲಾಯಿತು. ಆಹಾರವನ್ನು ಕ್ಯಾಂಟೀನ್​ನಲ್ಲಿ ತಯಾರಿಸಿ ಆಟೋ ಚಾಲಕರ ನಿಲ್ದಾಣಗಳಿಗೆ ತೆರಳಿ ಕ್ಯಾಂಟೀನ್ ನಡೆಸಲು 7 ಮಹಿಳೆಯರನ್ನು ನೇಮಕ ಮಾಡಲಾಗಿತ್ತು. 2021ರ ವೇಳೆಗೆ ಮಹಿಳೆಯರ ಕ್ಯಾಂಟೀನ್​ಗಳು ನಗರದ ವಿವಿಧ ಭಾಗಗಳಲ್ಲಿ ಆರು ಮಳಿಗೆಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷಕ್ಕೆ ಮೂರು ಕೋಟಿ ರೂ.ವರೆಗೆ ವಹಿವಾಟು ನಡೆಸಿ, ಸುಮಾರು 175 ಮಹಿಳೆಯರ ಜೀವನಕ್ಕೆ ಆಸರೆಯಾಗಿದೆ.90ರ ದಶಕದಲ್ಲಿ ಮಹಿಳೆಯರು ಕಂಪನಿಗಳಲ್ಲಿ ಕೆಲಸ ಪಡೆದುಕೊಂಡು ಜೀವನ ಸಾಗಿಸುವುದು ಸುಲಭ ಆಗಿರಲಿಲ್ಲ. 4-5ನೇ ತರಗತಿ ಓದಿ ಬಿಟ್ಟ ಅವರಿಗೆ ಉದ್ಯೋಗ ಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಅವರೆಲ್ಲರೂ ಅಡುಗೆ ವಿಷಯದಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಇದನ್ನೇ ಬಳಸಿಕೊಂಡು ಟ್ರಸ್ಟ್ ಆರಂಭವಾಯಿತು. ಇನ್ನು, ಟ್ರಸ್ಟ್ ಸಂಸ್ಥಾಪಕಿ ಜಯಶ್ರೀ ಸಮಂತ್ (69) ಅವರು ಕ್ಯಾಂಟೀನ್ಗೆ ಬೇಕಾದ ಪದಾರ್ಥಗಳನ್ನು ನೀಡುತ್ತಿದ್ದರು. ಪ್ರತಿ ವಾರಕ್ಕೆ ಪಾತ್ರೆ, ದಿನಸಿ, ತರಕಾರಿಯನ್ನು ಪೂರೈಸುತ್ತಿದ್ದರು.

ವೇತನದೊಂದಿಗೆ ಗೌರವದ ಜೀವನ:
ಹಲವು ಕಷ್ಟಗಳ ನಡುವೆ ಟ್ರಸ್ಟ್ ಸೇರಿದ್ದ ಮಹಿಳೆಯರಿಗೆ ಕ್ಯಾಂಟೀನ್ ಉತ್ತಮವಾಗಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಸಂಬಳ ಪಡೆಯುತ್ತಿದ್ದರು. ಇದರಿಂದಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಯಿತು ಎಂದು ಟ್ರಸ್ಟ್​ನಲ್ಲಿ 23 ವರ್ಷ ಕೆಲಸ ಮಾಡಿರುವ ಸುಮಿತ್ರಾ ಅವರು ಹೇಳುತ್ತಾರೆ. ನನ್ನ ಗಂಡ ತೀರಿಕೊಂಡ ಬಳಿಕ ನಾನು ಟ್ರಸ್ಟ್ ಸೇರಿಕೊಂಡೆ. ಟ್ರಸ್ಟ್​ನಲ್ಲಿರುವ ಮಹಿಳೆಯರ ಜೊತೆಗೆ ಸ್ನೇಹಿತೆಯರಂತೆ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಟ್ರಸ್ಟ್ ಭರಿಸುತ್ತಿರುವುದರಿಂದ ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ಜೀವನ ನಡೆದಿದೆ ಎಂದು ಹೇಳಿದ್ದಾರೆ. ಸುಮಿತ್ರಾ ರೀತಿಯ ಹಲವು ಮಹಿಳೆಯರು ಟ್ರಸ್ಟ್ ಮೂಲಕ ತಮ್ಮ ಆರ್ಥಿಕ ಸಮಸ್ಯೆಯನ್ನು ಸುಧಾರಿಸಿಕೊಂಡು ತಾವು ಉತ್ತಮವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ.

30 ವರ್ಷದಿಂದ ಟ್ರಸ್ಟ್​ನ ಸ್ಥಾಪಕಿ ಹಲವು ಏರಿಳಿತವನ್ನು ಕಂಡಿದ್ದಾರೆ. ಮಹಿಳೆಯರ ಶ್ರಮದೊಂದಿಗೆ ತಾವು ಇಟ್ಟ ಹೆಜ್ಜೆ ಹಿಂದೆ ಇಡಬಾರದು ಎಂದು ಮುಂದೆ ಸಾಗುತ್ತಿದ್ದೇವೆ ಎಂದು ಜಯಶ್ರೀ ಅವರು ಹೇಳುತ್ತಾರೆ. ಶಾಲೆ, ಕಾಲೇಜು, ಆಸ್ಪತ್ರೆ ರೀತಿಯ 6 ಕ್ಯಾಂಟೀನ್​ಗಳಿದ್ದು, ಎಲ್ಲಾ ಮಳಿಗೆಯಲ್ಲಿ ಉತ್ತಮ ವ್ಯಾಪಾರ ಆಗುತ್ತದೆ ಎಂದು ಹೇಳಲಾಗುವುದಿಲ್ಲ. 2 ಕ್ಯಾಂಟೀನ್​ಗಳಲ್ಲಿ ಲಾಭ ಕಾಣುತ್ತಿದ್ದೇವೆ. ಇತರೆ ರೆಸ್ಟೋರೆಂಟ್​ಗಳಿಗಿಂತ ನಾವು ಕಡಿಮೆ ಬೆಲೆಗೆ ಆಹಾರವನ್ನು ಪೂರೈಸುತ್ತೇವೆ. ಬೆಲೆಯನ್ನು ಏರಿಕೆ ಮಾಡುವುದಿಲ್ಲ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತೇವೆ ಎಂದು ಜಯಶ್ರೀ ಅವರು ಹೇಳುತ್ತಾರೆ.
Published by: Sushma Chakre
First published: February 26, 2021, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories