HOME » NEWS » National-international » SUBWAY GUARD SACKED AFTER LEAKING X RAY SCAN OF SEX TOYS INSIDE WOMAN PASSENGERS BAG RHHSN STG

ಮಹಿಳೆಯ ಬ್ಯಾಗಿನಲ್ಲಿದ್ದ ಸೆಕ್ಸ್ ಟಾಯ್ಸ್‌ಗಳ ಎಕ್ಸರೇ ಸ್ಕ್ಯಾನ್ ಫೋಟೋ ಹಂಚಿಕೊಂಡಿದ್ದ ಭದ್ರತಾ ಸಿಬ್ಬಂದಿ ವಜಾ!

ಗುವಾಂಗ್ಜೋ ಮೆಟ್ರೋ ನಿಲ್ದಾಣದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ಇದು ಮೊದಲೇನಲ್ಲ. 2019ರಲ್ಲಿ ಭದ್ರತಾ ಸಿಬ್ಬಂದಿಯು ಮಹಿಳೆಯ ಗೋಥಿಕ್ ಮೇಕಪ್ ತೆಗೆಯಲು ಒತ್ತಾಯಿಸಿದ್ದರು. ಮಹಿಳೆಯ ಗುಪ್ತಾಂಗದ ಫೋಟೋಗಳನ್ನು ಕೇಳಿದ್ದ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

Trending Desk
Updated:May 31, 2021, 7:45 PM IST
ಮಹಿಳೆಯ ಬ್ಯಾಗಿನಲ್ಲಿದ್ದ ಸೆಕ್ಸ್ ಟಾಯ್ಸ್‌ಗಳ ಎಕ್ಸರೇ ಸ್ಕ್ಯಾನ್ ಫೋಟೋ ಹಂಚಿಕೊಂಡಿದ್ದ ಭದ್ರತಾ ಸಿಬ್ಬಂದಿ ವಜಾ!
ಪ್ರಾತಿನಿಧಿಕ ಚಿತ್ರ
  • Share this:
ಮಹಿಳೆಯ ಬ್ಯಾಗಿನಲ್ಲಿದ್ದ ಸೆಕ್ಸ್ ಟಾಯ್ಸ್‌ಗಳ ಎಕ್ಸರೇ ಸ್ಕ್ಯಾನ್ ಫೋಟೋಗಳನ್ನು ತೆಗೆದುಕೊಂಡು ಅದನ್ನು ಗ್ರೂಪ್‌ ಚಾಟ್‍ನಲ್ಲಿ ಹಂಚಿಕೊಂಡ ಚೀನಾದ ಗುವಾಂಗ್ಜೋ-ಫೋಶನ್ ಸಬ್‍ವೇಯ ಭದ್ರತಾ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಮೇ 7ರಂದು ಮಹಿಳೆಯ ಬ್ಯಾಗಿನಲ್ಲಿದ್ದ ಲೈಂಗಿಕ ಚಟುವಟಿಕೆ ಪ್ರಚೋದಿಸುವ ಆಟಿಕೆಗಳ ಎಕ್ಸರೇ ಸ್ಕ್ಯಾನ್ ಫೋಟೋಗಳನ್ನು ತೆಗೆದುಕೊಂಡು ಗ್ರೂಪ್‌ ಚಾಟ್‍ನಲ್ಲಿ ಹಾಕಿದ್ದ ಭದ್ರತಾ ಸಿಬ್ಬಂದಿಯನ್ನು ವಿಬೋ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಈತ, ಮಹಿಳೆಯ ಬ್ಯಾಗಿನಲ್ಲಿ ಹೆಚ್ಚು ಭಾರವಾದ ಲೋಹಭರಿತ ವಸ್ತುಗಳು ಸ್ಕ್ಯಾನ್ ವೇಳೆ ಕಂಡು ಬಂದಿತು. ಆದ್ದರಿಂದ ಬ್ಯಾಗನ್ನು ತೆರೆಯಲು ವಿನಂತಿಸಿದೆ. ಆಗ ಅವರ ಬ್ಯಾಗಿನಲ್ಲಿ ವಿಪ್, ಡಿಲ್ಡೋ ಮತ್ತು ಇನ್ನಿತರ ಆಟಿಕೆಗಳು ದೊರೆತವು. ಪ್ಲೇಯ್ಡ್ ಸ್ಕರ್ಟ್ ಧರಿಸಿದ್ದ ಅವರು ನೋಡಲು ಥೈವಾನ್‌ ರೂಪದರ್ಶಿ, ನಟಿ, ಗಾಯಕಿ ಲಿನ್ ಛೀ-ಲಿಂಗ್ ರೀತಿಯಲ್ಲಿ ಕಾಣುತ್ತಿದ್ದರು. ಆದರೆ ಅವರ ಬ್ಯಾಗಿನಲ್ಲಿ ಸೆಕ್ಸ್ ಟಾಯ್ಸ್‌ಗಳಿದ್ದವು ಎಂದು ಗ್ರೂಪಿನ ಚಾಟ್‍ನಲ್ಲಿ ಬರೆದು ಹಾಕಿದ್ದನು.ಭದ್ರತಾ ಸಿಬ್ಬಂದಿಯು ಹಂಚಿಕೊಂಡ  ಫೋಟೋಗಳನ್ನು ಬ್ಲಾಗರ್ ಒಬ್ಬರು ಶೇರ್ ಮಾಡಿರುವುದನ್ನು ಆಧರಿಸಿ ಪೊಲೀಸರು ಹಾಗೂ ಮೆಟ್ರೋ ನಿಲ್ದಾಣದಲ್ಲಿ ದೂರು ದಾಖಲಿಸಲಾಗಿದೆ. ಈ ಭದ್ರತಾ ಸಿಬ್ಬಂದಿ ಮಹಿಳೆಯ ಖಾಸಗಿ ವಿಷಯಗಳನ್ನು ಪ್ರಶ್ನಿಸಿ ಫೋಟೋಗಳನ್ನು ಹಂಚಿಕೊಂಡಿದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳ್ಳುತ್ತಿದ್ದಂತೆಯೇ ಈ ಭದ್ರತಾ ಸಿಬ್ಬಂದಿಯ ಮೇಲೆ ಬಳಕೆದಾರರು ಆಕ್ರೋಶಗೊಂಡರು. ಮಹಿಳೆಯ ಗೌಪ್ಯತೆಯನ್ನು ಪ್ರಶ್ನಿಸಿ, ಗುಂಪಿನಲ್ಲಿ ಹರಿಬಿಟ್ಟು ಬಹಿರಂಗಪಡಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬಂತಹ ಪ್ರಶ್ನೆಗಳು ಸಹ ಉದ್ಭವಿಸುವುದರ ಜೊತೆಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದರು.

ಈ ರೀತಿ ದುರ್ವರ್ತನೆಯ ಒಬ್ಬ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಎಂದು ಪರಿಗಣಿಸಲು ಹೇಗೆ ಸಾಧ್ಯ? ಅಲ್ಲದೇ ಪ್ರಯಾಣಿಕರ ವೈಯಕ್ತಿಕ ವಸ್ತುಗಳ ಫೋಟೋ ತೆಗೆಯಲು ಹಾಗೂ ಅನುಚಿತ ಕಮೆಂಟ್‍ಗಳನ್ನು ಮಾಡುವ ಹಕ್ಕನ್ನು ನೀಡಿದವರು ಯಾರು..? ಎಂದರೆ, ಇನ್ನು ಕೆಲವು ಬಳಕೆದಾರರು ಲೈಂಗಿಕ ಚಟುವಟಿಕೆಯ ಆಟಿಕೆಗಳನ್ನು ನಿಷೇಧಿಸುವಂತೆ ಹೇಳಿದರು.

ಬ್ಲಾಗರ್ ಶೇರ್ ಮಾಡಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಗುಂಪಿನಲ್ಲಿ ಹರಿಬಿಟ್ಟಿದ್ದ ಫೋಟೋಗಳನ್ನು ಈತನ ಸ್ನೇಹಿತನ ಜೊತೆಯೂ ಹಂಚಿಕೊಂಡಿದ್ದನು. ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದ ದಿನದಂದೇ ವಿಚಾರ ತಿಳಿದ ಗುವಾಂಗ್ಜೋ ಮೆಟ್ರೋ ನಿಲ್ದಾಣದ ಅಧಿಕಾರಿ ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

"ಪ್ರಯಾಣಿಕರ ಗೌಪ್ಯತೆಯನ್ನು ಸೋರಿಕೆ ಮಾಡುವ ಯಾವುದೇ ಕ್ರಮವನ್ನು ನಾವು ಸಹಿಸುವುದಿಲ್ಲ. ಅಂತಹ ನಡವಳಿಕೆಯನ್ನು ತಪ್ಪಿಸಲು ವೃತ್ತಿಪರ ತರಬೇತಿ ನೀಡಲು ತಮ್ಮ ಭದ್ರತಾ ಪರಿಶೀಲನಾ ಘಟಕವನ್ನು ಕೇಳಿದ್ದಾರೆ. ಆದರೆ, ಗುವಾಂಗ್ಜೋ ಮೆಟ್ರೋ ಈ ಘಟನೆಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗುವಾಂಗ್ಜೋ ಮೆಟ್ರೋ ಆನ್‍ಲೈನ್‍ನಲ್ಲಿ ಹೇಳಿಕೆ ನೀಡಿದೆ.

ಇದನ್ನು ಓದಿ: ಮುಂಗಾರಿನಲ್ಲಿ ನಿಮ್ಮ ಮೇಕಪ್ ಹಾಳಾಗಬಹುದೆಂಬ ಚಿಂತೆಯೇ..? ಇಲ್ಲಿದೆ ಸುಲಭ ಪರಿಹಾರ!ಗುವಾಂಗ್ಜೋ ಮೆಟ್ರೋ ನಿಲ್ದಾಣದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ಇದು ಮೊದಲೇನಲ್ಲ. 2019ರಲ್ಲಿ ಭದ್ರತಾ ಸಿಬ್ಬಂದಿಯು ಮಹಿಳೆಯ ಗೋಥಿಕ್ ಮೇಕಪ್ ತೆಗೆಯಲು ಒತ್ತಾಯಿಸಿದ್ದರು. ಮಹಿಳೆಯ ಗುಪ್ತಾಂಗದ ಫೋಟೋಗಳನ್ನು ಕೇಳಿದ್ದ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: HR Ramesh
First published: May 31, 2021, 7:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories