HOME » NEWS » National-international » SUBRAMANIAN SWAMY TWEETS SELLING AIR INDIA IS DEAL IS WHOLLY ANTI NATIONAL SESR

ಏರ್ ಇಂಡಿಯಾ ಮಾರಾಟ: ದೇಶದ್ರೋಹದ ಕೆಲಸ ಎಂದ ಸುಬ್ರಮಣಿಯನ್​ ಸ್ವಾಮಿ

ಈ ಒಪ್ಪಂದ ಸಂಪೂರ್ಣವಾಗಿ ದೇಶದ್ರೋಹ, ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಮ್ಜ ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವುದು ಸರಿಯಲ್ಲ

Seema.R | news18-kannada
Updated:January 27, 2020, 1:23 PM IST
ಏರ್ ಇಂಡಿಯಾ ಮಾರಾಟ: ದೇಶದ್ರೋಹದ ಕೆಲಸ ಎಂದ ಸುಬ್ರಮಣಿಯನ್​ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
  • Share this:
ಬೆಂಗಳೂರು (ಜ.27):  ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ  ನಡೆಸುತ್ತಿರುವ ಪ್ರಯತ್ನಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ದೇಶದ್ರೋಹದ ಕೆಲಸ ಎಂದು ಹರಿಹಾಯ್ದಿದ್ದಾರೆ.ಏರ್ ಇಂಡಿಯಾದಲ್ಲಿ ತಾನು ಹೊಂದಿರುವ ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲು ಸರ್ಕಾರ ನಿರ್ಧರಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಛಿಸುವವರು ಮಾರ್ಚ್ 17ರಷ್ಟರಲ್ಲಿ ಬಿಡ್ ಸಲ್ಲಿಸಬೇಕೆಂದು ಡೆಡ್​ಲೈನ್ ವಿಧಿಸಿದೆ. ಈ ಬಗ್ಗೆ ಟೀಕಿಸಿರುವ ಅವರು, ಈ ಒಪ್ಪಂದ ಸಂಪೂರ್ಣವಾಗಿ ದೇಶದ್ರೋಹ, ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಮ್ಜ ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವುದು ಸರಿಯಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ: ಏರ್ ಇಂಡಿಯಾ ಮಾರಾಟಕ್ಕೆ ಸರ್ಕಾರ ನಿರ್ಧಾರ; ಮಾ. 17ಕ್ಕೆ ಬಿಡ್ ಸಲ್ಲಿಸಲು ಕೊನೆಯ ದಿನ

ಏರ್​ ಇಂಡಿಯಾ ಮಾರಾಟ ಮಾಡುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್​ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಆರ್ಥಿಕವಾಗಿ ಕುಸಿದಿದೆ. ಹಣವಿಲ್ಲದ ಕಾರಣ ಸರ್ಕಾರದ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ ಎಂದು ಕಪಿಲ್​ ಸಿಬಲ್​ ಟೀಕಿಸಿದ್ದಾರೆ.
Youtube Video
First published: January 27, 2020, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories