ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ‌; ಸ್ವತಃ ಆರೋಪಿಸಿದ ಕಮಲ ನಾಯಕ ಸುಬ್ರಮಣಿಯನ್‌ ಸ್ವಾಮಿ

ಇತ್ತೀಚೆಗೆ ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ "ಆತ್ಮನಿರ್ಭರ್‌" ಹೆಸರಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಹಸನವನ್ನೂ ಸಹ ಸುಬ್ರಮಣಿಯನ್‌ ಸ್ವಾಮಿ ಕಟುವಾಗಿ ಟೀಕಿಸಿದ್ದರು. ಅವರ ಈ ವರ್ತನೆ ಹಲವು ಹಿರಿಯ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದ್ದವು.

ಸುಬ್ರಮಣ್ಯ ಸ್ವಾಮಿ.

ಸುಬ್ರಮಣ್ಯ ಸ್ವಾಮಿ.

  • Share this:
ನವ ದೆಹಲಿ (ಸೆಪ್ಟೆಂಬರ್‌ 07); ಕಳೆದ ಎರಡು ವರ್ಷಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಕೇಂದ್ರ ಸರ್ಕಾರ ಹಠಾತ್‌ ಘೋಷಿಸಿದ ನೋಟ್‌ ಬ್ಯಾನ್‌ ಮತ್ತು ಜಿಎಸ್‌ಟಿ ನೀತಿಯಿಂದಾಗಿ ಶೇ07 ರಿಂದ 08ರ ಆಸುಪಾಸಿನಲ್ಲಿದ್ದ ಭಾರತದ ಜಿಡಿಪಿ ಶೇ.2ಕ್ಕೆ ಕುಸಿದಿತ್ತು. ಇನ್ನೂ ಕೊರೋನಾ ಮತ್ತು ಕೊರೋನಾ ಕಾರಣದಿಂದಾಗಿ ದೇಶದ ಮೇಲೆ ಹೇರಲಾದ ಲಾಕ್‌ಡೌನ್‌ನಿಂದಾಗಿ ಭಾರತದ ಜಿಡಿಪಿ ಇದೀಗ ಶೇ-24ಕ್ಕೆ ಋಣಾತ್ಮಕವಾಗಿ ಕುಸಿಯುತ್ತಲೇ ಇದೆ. ಇದೀಗ ವಿಶ್ವದ ಅತಿಕೆಟ್ಟ ಆರ್ಥಿಕತೆಯಾಗಿ ಭಾರತದ ಆರ್ಧಿಕತೆ ಬದಲಾಗಿದೆ. ಸ್ವತಃ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಸುಬ್ರಮಣಿಯನ್‌ ಸ್ವಾಮಿ ಸಹ ಇದನ್ನು ಟೀಕಿಸುತ್ತಿದ್ದರು. ಬಿಜೆಪಿ ರಾಜ್ಯಸಭಾ ಸದಸ್ಯರಾದರೂ ಸಹ ಸುಬ್ರಮಣಿಯನ್‌ ಸ್ವಾಮಿ ಕಳೆದ ಎರಡು ವರ್ಷಗಳಿಂದ ಕೇಂದ್ರದ ಅಸಮರ್ಪಕ ಆರ್ಥಿಕ ನೀತಿಯ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಆದರೆ, ಅವರ ಈ ನೀತಿ ಇದೀಗ ಬಿಜೆಪಿ ಐಟಿ ಸೆಲ್‌ ಅನ್ನು ಕೆರಳಿಸಿದಂತೆ ಕಾಣುತ್ತಿದೆ. ಪರಿಣಾಮ ಬಿಜೆಪಿ ಐಟಿ ಸೆಲ್‌ ಪ್ರಸ್ತುತ ಸುಬ್ರಮಣಿಯನ್ ಸ್ವಾಮಿ ವಿರುದ್ಧವೇ ಸಮರ ಸಾರಲು ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತಿದೆ ಸುಬ್ರಮಣಿಯನ್ ಸ್ವಾಮಿ ಇಂದು ಮಾಡಿರುವ ಟ್ವೀಟ್.

ಸಾಮಾನ್ಯವಾಗಿ ಬಿಜೆಪಿ ವಿರೋಧಿಗಳನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಟ್ರೋಲ್ ಮಾಡುವುದು ಬಿಜೆಪಿ ಐಟಿ ಸೆಲ್‌ ಕೆಲಸ. ಆದರೆ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಆ ಒಂದು ಟ್ವೀಟ್‌ ಬಿಜೆಪಿ ಐಟಿ ಸೆಲ್‌ ಸತ್ಯವನ್ನು ಹೇಳಿದ ಒಂದು ಕಾರಣಕ್ಕೆ ಸ್ವತಃ ತಮ್ಮ ಪಕ್ಷದ ನಾಯಕರ ವಿರುದ್ಧವೇ ವ್ಯಯಕ್ತಿಕ ದಾಳಿಗೆ ಇಳಿದಿದೆಯೇ? ಎಂಬ ಅನುಮಾನ ಕಾಡದೆ ಇರದು.ಈ ಕುರಿತು ಇಂದು ಟ್ವೀಟ್ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ, "ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ. ಅದರ ಕೆಲವು ಸದಸ್ಯರು ಟ್ವಿಟರ್‌ನಲ್ಲಿ ನಕಲಿ ಐಡಿ ಮೂಲಕ ಖಾತೆ ತೆರೆದು ನನ್ನ ವಿರುದ್ಧ ವ್ಯಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ದಾಳಿಗಳಿಂದ ಕೋಪಗೊಂಡು ನನ್ನ ಹಿಂಬಾಲಕರೂ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಯಕ್ತಿಕ ದಾಳಿಗೆ ಇಳಿದರೆ ಅದಕ್ಕೆ ನಾನು ಹೊಣೆಯಾಗಲಾರೆ" ಎಂದು ಬಿಜೆಪಿ ವಿರುದ್ಧವೇ ಖಡಕ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : ಡ್ರಗ್ ಮಾಫಿಯಾದಲ್ಲಿರುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ; ಸಚಿವ ಭೈರತಿ ಬಸವರಾಜ್‌

ಇತ್ತೀಚೆಗೆ ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ "ಆತ್ಮನಿರ್ಭರ್‌" ಹೆಸರಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಹಸನವನ್ನೂ ಸಹ ಸುಬ್ರಮಣಿಯನ್‌ ಸ್ವಾಮಿ ಕಟುವಾಗಿ ಟೀಕಿಸಿದ್ದರು. ಅವರ ಈ ವರ್ತನೆ ಹಲವು ಹಿರಿಯ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದ್ದವು.
Published by:MAshok Kumar
First published: