CBI Findings: ಪರೀಕ್ಷೆಯಲ್ಲಿ ಒಂದಕ್ಷರ ಬರೆಯದವರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು! ಸಿಬಿಐ ತನಿಖೆಯಲ್ಲಿ ಬಯಲು

ಅಭ್ಯರ್ಥಿಗಳು ಖಾಲಿ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ನಂತರವೂ ಅವರ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ನೇಮಕಾತಿಗಳನ್ನು ನೀಡಿದ ಉದಾಹರಣೆಗಳಿವೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ ಎಂದು CBI ಆರೋಪಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಲ್ಕತ್ತಾ(ಜೂ.12) ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ರಾಜ್ಯ ಸಾರ್ವಜನಿಕ ಸೇವಾ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರ (Corruption), ವಂಚನೆಗಳ ಪ್ರಕರಣಗಳು ಹೆಚ್ಚಾಗಿ ಬಹಿರಂಗವಾಗುತ್ತಿವೆ. ಕರ್ನಾಟಕದಲ್ಲಿ ಪಿಎಸ್​ಐ ಸ್ಕ್ಯಾಮ್ (PSI Scam) ಸೇರಿದಂತೆ ಹಲವು ರಾಜ್ಯಗಳಲ್ಲಿ ಸೇವಾ ಪರೀಕ್ಷೆಗಳಲ್ಲಿ ಫ್ರಾಡ್ ನಡೆಯುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಎಲ್ಲರಿಗೂ ಸರ್ಕಾರಿ ಉದ್ಯೋಗದ (Govt Job) ಅವಕಾಶವನ್ನು ಒದಗಿಸುವ ಇಂತಹ ಪರೀಕ್ಷೆಗಳಲ್ಲಿ ನಡೆಯುವ ವಂಚನೆ ಬಹಳಷ್ಟು ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತದೆ. ಕಷ್ಟಪಟ್ಟು ಶ್ರಮಿಸುವವರ ಶ್ರಮ ವ್ಯರ್ಥವಾಗುತ್ತದೆ. ಆದರೆ ಈ ರೀತಿಯ ಪ್ರಕರಣಗಳು ಮಾತ್ರ ನಡೆಯುತ್ತಲೇ ಇವೆ. ಇದೀಗ ಪಶ್ಚಿಮ ಬಂಗಾಳದಿಂದ (West Bengal) ಇದೇ ರೀತಿಯ ಪ್ರಕರಣವೊಂದು ಹೊರಬಿದ್ದಿದೆ.

ಸಿಬಿಐ ತನಿಖೆಯಲ್ಲಿ ಸತ್ಯ ಬಯಲು

ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳಲ್ಲಿ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐನ (CBI) ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಖಾಲಿ ಉತ್ತರ ಪತ್ರಿಕೆ ಕೊಟ್ಟವರಿಗೂ ಸಿಕ್ತು ಸರ್ಕಾರಿ ಕೆಲಸ

ಅಭ್ಯರ್ಥಿಗಳು ಖಾಲಿ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ನಂತರವೂ ಅವರ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ನೇಮಕಾತಿಗಳನ್ನು ನೀಡಿದ ಉದಾಹರಣೆಗಳಿವೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಆರೋಪಿಸಿದರು.

ಅಧಿಕಾರಿಗಳಿಂದ ಹಿಡಿದು ಗುಮಾಸ್ತರ ತನಕ ಹಲವರು ಅಕ್ರಮದಲ್ಲಿ ಭಾಗಿ

ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲೆಗಳಲ್ಲಿನ ನೇಮಕಾತಿಗಳಲ್ಲಿನ ಅಕ್ರಮಗಳಲ್ಲಿ ಗುಮಾಸ್ತರು ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಕಿರಿಯ ಮಟ್ಟದ ಕೆಲಸಗಾರರು ಭಾಗಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿ ಪಿಟಿಐಗೆ ತಿಳಿಸಿದರು.

ಸಿಬಿಐ ಅಧಿಕಾರಿಗಳ ಕೈಗೆ ಸಿಕ್ತು ಖಾಲಿ ಉತ್ತರ ಪತ್ರಿಕೆ

“ನಾವು ಹಲವಾರು ಉತ್ತರ ಪತ್ರಿಕೆಗಳನ್ನು ಕಂಡುಕೊಂಡಿದ್ದೇವೆ. ಅವುಗಳಲ್ಲಿ ಖಾಲಿ ಹೆಸರುಗಳು ಮತ್ತು ನೋಂದಣಿ ಸಂಖ್ಯೆಗಳನ್ನು ಮಾತ್ರ ಬರೆಯಲಾಗಿದೆ. ನಂತರ ಈ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗಿದೆ, ಎಂದು ಆರೋಪಿಸಿದರು.

ಅಧಿಕಾರಿ-ಅಭ್ಯರ್ಥಿಗಳ ನಡುವೆ ಭಾರೀ ನಗದು ವ್ಯವಹಾರ

ಈ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ನಡುವೆ ಭಾರೀ ಪ್ರಮಾಣದ ನಗದು ವಹಿವಾಟುಗಳು ನೇಮಕಾತಿ ಮಾಡುವ ಮೊದಲು ನಡೆದಿವೆ ಎಂದು ಅಧಿಕಾರಿ ಹೇಳಿಕೊಂಡಿದ್ದು, ಈ ಬಗ್ಗೆ ಸಂಸ್ಥೆಯು ಪುರಾವೆಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಅಭಿವೃದ್ಧಿ ಮಾಡಿರೋದು ಚುನಾವಣೆಗಾಗಿ ಅಲ್ಲ, ಜನರಿಗಾಗಿ ಎಂದ ಮೋದಿ

ಕೊಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ ಎಂಬ ಆರೋಪದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಉತ್ತರ 24 ಪರಗಣಗಳ ನಿವಾಸಿಯೊಬ್ಬರು ಪ್ರಾಥಮಿಕ ಶಿಕ್ಷಕರ ಉದ್ಯೋಗಗಳ ಮಾರಾಟದ ಆರೋಪಗಳನ್ನು ತನಿಖೆ ಮಾಡಲು ನ್ಯಾಯಾಲಯವು ಬುಧವಾರ ಏಜೆನ್ಸಿಗೆ ಸೂಚಿಸಿದೆ

ಜೂ.15ರಂದು ಸಿಬಿಐ ವರದಿ ಸಲ್ಲಿಕೆ

ಈ ಪ್ರಕರಣದಲ್ಲಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಏಜೆನ್ಸಿ ಪ್ರಶ್ನಿಸಿದೆ. ಮುಂದಿನ ವಿಚಾರಣೆಯ ದಿನಾಂಕದಂದು ಜೂನ್ 15 ರಂದು ತನ್ನ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.

ಇದನ್ನೂ ಓದಿ: Amit Shah: ಆದ್ಯತೆಯಲ್ಲಿ ರೇಪ್, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಅಮಿತ್ ಶಾ ಸೂಚನೆ

ಇತ್ತೀಚೆಗೆ ಕರ್ನಾಟಕದಲ್ಲಿ ಪಿಎಸ್​ಐ ನೇಮಕಾತಿ ಅಕ್ರಮ ವಿಚಾರವಾಗಿ ಭಾರಿ ಸುದ್ದಿಯಾಗಿತ್ತು. ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದಲ್ಲಿ ಬಹಳಷ್ಟು ಜನ ಅಕ್ರಮದಲ್ಲಿ ಭಾಗಿಯಾಗಿರುವುದು ಬಯಲಾಗಿತ್ತು. ಹಾಗೆಯೇ ಮರು ಪರೀಕ್ಷೆ ಬೇಕೇ ಬೇಡವೇ ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗುತ್ತಿವೆ.
Published by:Divya D
First published: