Fake Documents: ಜರ್ಮನಿ ವೀಸಾಕ್ಕಾಗಿ ನಕಲಿ ದಾಖಲೆ ನೀಡ್ತಿದ್ದಾರಾ ಭಾರತೀಯ ವಿದ್ಯಾರ್ಥಿಗಳು?

ಜರ್ಮನ್ ವಿದ್ಯಾರ್ಥಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಅವಧಿಯಲ್ಲಿ ಸುಮಾರು 15% ಭಾರತೀಯ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಭಾರತದಲ್ಲಿರುವ ಜರ್ಮನ್ ರಾಯಭಾರಿ ಕಚೇರಿ ವರದಿ ಮಾಡಿದೆ. ಭಾರತದ ವಿದ್ಯಾರ್ಥಿಗಳು ಸ್ಟೂಡೆಂಟ್‌ ವೀಸಾ ಪಡೆಯಲು ಸಲ್ಲಿಸುವ ದಾಖಲೆಗಳ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಸುಮಾರು 10 ರಿಂದ 15 ಪ್ರತಿಶತ ವಿದ್ಯಾರ್ಥಿಗಳು ನಕಲಿ ದಾಖಲೆ ಸಲ್ಲಿಸಿ ವಂಚಿಸಿದ್ದಾರೆನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್‌ ನಂತರ ಹಲವಾರು ದೇಶಗಳು ಭಾರತೀಯ ವಿದ್ಯಾರ್ಥಿಗಳಿಗೆ (Indian Students) ವೀಸಾ ನೀಡಲು ನಿರ್ಧರಿಸಿವೆ. ಚೀನಾ, ಜರ್ಮನ್ (German) ಸೇರಿ ಕೆಲವು ದೇಶಗಳು ವಿದ್ಯಾರ್ಥಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿವೆ. ಇದೇ ವೇಳೆ ಜರ್ಮನ್ ವಿದ್ಯಾರ್ಥಿ ವೀಸಾಕ್ಕೆ (Student Visa) ಅರ್ಜಿ ಸಲ್ಲಿಸುವ ಅವಧಿಯಲ್ಲಿ ಸುಮಾರು 15% ಭಾರತೀಯ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು (Fake Documents) ಸಲ್ಲಿಸಿದ್ದಾರೆ ಎಂದು ಭಾರತದಲ್ಲಿರುವ ಜರ್ಮನ್ ರಾಯಭಾರಿ ಕಚೇರಿ (German Embassy in India) ವರದಿ ಮಾಡಿದೆ.  ಭಾರತದ ವಿದ್ಯಾರ್ಥಿಗಳು ಸ್ಟೂಡೆಂಟ್‌ ವೀಸಾ ಪಡೆಯಲು ಸಲ್ಲಿಸುವ ದಾಖಲೆಗಳ ಬಗ್ಗೆ ಗಂಭೀರವಾಗಿ ಆರೋಪ ಹೊರಬಂದಿದ್ದು, ಸುಮಾರು 10 ರಿಂದ 15 ಪ್ರತಿಶತ ವಿದ್ಯಾರ್ಥಿಗಳು ನಕಲಿ ದಾಖಲೆ ಸಲ್ಲಿಸಿ ವಂಚಿಸಿದ್ದಾರೆನ್ನಲಾಗಿದೆ.

ವೀಸಾ ಪಡೆಯಲು ಭಾರತೀಯ ವಿದ್ಯಾರ್ಥಿಗಳಿಂದ ನಕಲಿ ದಾಖಲೆ ಸಲ್ಲಿಕೆ
ಜರ್ಮನಿಯಲ್ಲಿ ಶೈಕ್ಷಣಿಕ ಕೋರ್ಸ್‌ಗಳಿಗೆ ಸೇರಲು ಸಾವಿರಾರು ಭಾರತೀಯ ವಿದ್ಯಾರ್ಥಿಗಳು ವೀಸಾಗಾಗಿ ಕಾಯುತ್ತಿರುವಾಗ, ಈ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ ಎಂದು  ಜರ್ಮನ್ ರಾಯಭಾರಿ‌ ಕಚೇರಿಯ ಅಧಿಕಾರಿ ಫಿಲಿಪ್ ಆಕರ್ಮನ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಮತ್ತು ದೇಶಕ್ಕೆ ಅವರ ಪ್ರಯಾಣವನ್ನು ಸುಲಭಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು  ಹೇಳಿದರು.

"ಭಾರತೀಯರು ಸುಲಭ ಮತ್ತು ತ್ವರಿತವಾಗಿ ವೀಸಾಗಳನ್ನು ಪಡೆಯಬೇಕು"
ಜರ್ಮನ್ ಅಧಿಕಾರಿಗಳು ಕೆಲವು ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆಕರ್ಮನ್ ತಿಳಿಸಿದ್ದಾರೆ. "ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವು ತುಂಬಾ ಅತೃಪ್ತರಾಗಿದ್ದೇವೆ. ಇದು ನಮಗೆ ದೊಡ್ಡ ಕಾಳಜಿಯಾಗಿದೆ, ಭಾರತೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕಾಳಜಿ. ಏಕೆಂದರೆ ಭಾರತೀಯರು ಸರಾಗವಾಗಿ ಮತ್ತು ತ್ವರಿತವಾಗಿ ವೀಸಾಗಳನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  Australia Visa: ಕಾರ್ಮಿಕರ ಕೊರತೆ ಪರಿಹಾರಕ್ಕೆ ವೀಸಾ ನಿಯಮ ಸಡಿಲಿಸಿದ ಆಸ್ಟ್ರೇಲಿಯಾ

ಕಾನೂನು ಪ್ರಕ್ರಿಯೆಯೊಂದಿಗೆ ಜರ್ಮನ್ ವಿದ್ಯಾರ್ಥಿ ವೀಸಾ ಪಡೆದ ಭಾರತೀಯ ವಿದ್ಯಾರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ, ವೀಸಾ ವಿಳಂಬದಿಂದಾಗಿ ಜರ್ಮನ್ ವಿಶ್ವವಿದ್ಯಾನಿಲಯಗಳಿಗೆ ಹಾಜರಾಗಲಿರುವ ಭಾರತೀಯ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ರಾಯಭಾರಿ ಈ ಹಿಂದೆ ಹೇಳಿತ್ತು, ಆದರೆ ಪ್ರಸ್ತುತ ಮತ್ತೆ ಸುಳ್ಳು ದಾಖಲೆ ಸಲ್ಲಿಕೆಯಿಂದ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಈ ಹಿಂದೆಯೂ ಸುಳ್ಳು ದಾಖಲೆ ನೀಡಿದ್ದ ಭಾರತೀಯರು
ಭಾರತೀಯ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ಸಲ್ಲಿಸುತ್ತಿರುವುದನ್ನು ಜರ್ಮನ್ ಅಧಿಕಾರಿಗಳು ಗಮನಿಸಿ ದೂರು ನೀಡಿರುವುದು ಇದೇ ಮೊದಲಲ್ಲ. ವರದಿಗಳ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟು 35 ಭಾರತೀಯರು ವೀಸಾ ಅರ್ಜಿಗಳಿಗಾಗಿ ಜರ್ಮನ್ ಕಾನ್ಸುಲೇಟ್‌ಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್‌ನಲ್ಲಿ 35 ಭಾರತೀಯರು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

35 ವ್ಯಕ್ತಿಗಳು ವೀಸಾ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರು ನಕಲಿ ಆಹ್ವಾನಗಳು, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಇತರ ಒಪ್ಪಂದಗಳನ್ನು ಜರ್ಮನ್ ದೂತಾವಾಸಕ್ಕೆ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ವಿದೇಶಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವೀಸಾ ಸಮಸ್ಯೆಗಳ ಬಗ್ಗೆ ಎಚ್ಚರಿಸಲು ಜರ್ಮನ್ ಅಧಿಕಾರಿಗಳು ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸುತ್ತಿದ್ದಾರೆ.

ಇದನ್ನೂ ಓದಿ:  Zomato: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಝೊಮ್ಯಾಟೋ, ಎಲ್ಲಿಂದ ಏನ್ ಬೇಕಾದ್ರೂ ಆರ್ಡರ್​ ಮಾಡಿ!

"ನಾವು ಸಾಧ್ಯವಾದಷ್ಟು ಬೇಗ ಆ ಪ್ರಕ್ರಿಯೆಯನ್ನು ಸರಿಪಡಿಸಲು ಬಯಸುತ್ತೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಕ್‌ಲಾಗ್ ಅನ್ನು ತೆರವುಗೊಳಿಸಲು ಸಚಿವಾಲಯವು ನಿಯಮಿತವಾಗಿ ಯುರೋಪಿಯನ್ ಮಿಷನ್‌ಗಳೊಂದಿಗೆ ಸಭೆಗಳನ್ನು ನಡೆಸುತ್ತಿದೆ. ಆದಾಗ್ಯೂ, ಲಭ್ಯವಿರುವ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಾಗಿ ಮತ್ತು ಅವರ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಭಾರತದ ನಾಗರಿಕರು ಬಹಳ ಸಮಯ ಕಾಯಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Published by:Ashwini Prabhu
First published: