Crime News: ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೆಂಡತಿಗೆ ಹಿಂಸೆ: ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಬಂಧನ

Weird Sex Crime News: ಬಂಧನಕ್ಕೊಳಗಾದ ಸಬ್​ ಇನ್ಸ್​ಪೆಕ್ಟರ್​ ಹೆಸರು ವಿಜಯ್​ ತಿವಾರಿ. ತಿವಾರಿ ಹೆಂಡತಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಹೆಂಡತಿ ನೀಡಿದ ದೂರಿನಲ್ಲಿ, ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಉತ್ತರಪ್ರದೇಶ: ಉತ್ತರಪ್ರದೇಶದ ಗೋರಖ್​ಪುರದಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹಿಂಸೆ (Unnatural Sex) ನೀಡುತ್ತಿದ್ದ ಆರೋಪದ ಮೇಲೆ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಂಡತಿಗೆ ಲೈಂಗಿಕ ಕಿರುಕುಳ ನೀಡುವುದಲ್ಲದೇ, ತಾನು ಹೇಳಿದಂತೆ ಕ್ರಿಯೆಯಲ್ಲಿ ಭಾಗಿಯಾಗಲು ಒಪ್ಪದಿದ್ದಾಗ ದೈಹಿಕ ಹಲ್ಲೆಯನ್ನೂ ಮಾಡಿದ ಆದರೋಪ ಸಬ್​ ಇನ್ಸ್​ಪೆಕ್ಟರ್​ ಮೇಲಿದೆ.

  ಬಂಧನಕ್ಕೊಳಗಾದ ಸಬ್​ ಇನ್ಸ್​ಪೆಕ್ಟರ್​ ಹೆಸರು ವಿಜಯ್​ ತಿವಾರಿ. ತಿವಾರಿ ಹೆಂಡತಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಹೆಂಡತಿ ನೀಡಿದ ದೂರಿನಲ್ಲಿ, ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಜತೆಗೆ ಹಣಕ್ಕಾಗಿಯೂ ಪೀಡಿಸುತ್ತಿದ್ದ ಎನ್ನಲಾಗಿದೆ. ರಾಂಪುರದ ಕರ್ಖಾನ ಪೊಲೀಸ್​ ಠಾಣೆಯಲ್ಲಿ ವಿಜಯ್​ ತಿವಾರಿ ಕೆಲಸ ಮಾಡುತ್ತಿದ್ದ. 2014ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಅದಾದ ಕೆಲವು ವರ್ಷ ಸಂಸಾರ ಸರಿಯಾಗಿಯೇ ಇತ್ತು, ಆದರೆ ನಂತರ ವಿಜಯ್​ ತಿವಾರಿ ಚಿತ್ರ ವಿಚಿತ್ರ ಲೈಂಗಿಕ ಕಾಮನೆಗಳನ್ನು ಬಯಸುತ್ತಿದ್ದ. ಅದು ಅಸಹಜವಾಗಿದ್ದು, ಒಪ್ಪದಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಸಂತ್ರಸ್ಥೆ ನೀಡಿರುವ ದೂರಿನಲ್ಲಿ ಅತ್ತೆ ಮಾವನ ಜೊತೆ ಇರಲು ಆರಂಭಿಸಿದ ದಿನದಿಂದ ತಿವಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ. ಅಸಹಜ ಸೆಕ್ಸ್​ ಮಾಡುವಂತೆ ಹೇಳುತ್ತಾನೆ, ಕೇಳದಿದ್ದಾಗ ಹೊಡೆಯುತ್ತಾನೆ, ಬಯ್ಯುತ್ತಾನೆ ಎಂದು ದೂರಿದ್ದಾರೆ. ಸಂತ್ರಸ್ಥೆ ಮೂಲತಃ ಡಿಯೋರಾ ಜಿಲ್ಲೆಯವರಾಗಿದ್ದು, ಮದುವೆಯ ನಂತರ ಗೋರಖ್​ಪುರದಲ್ಲಿ ವಾಸಿಸುತ್ತಿದ್ದರು. 2017ರಲ್ಲಿ ಆಕೆಯ ತಲೆಗೆ ಪೆಟ್ಟಾಗುವಂತೆ ಹೊಡೆದು, ಕತ್ತು ಹಿಡಿದು ಮನೆಯಿಂದ ತಿವಾರಿ ಆಚೆ ಹಾಕಿದ್ದ ಎನ್ನಲಾಗಿದೆ.

  ಮನೆಯಿಂದ ಆಚೆ ಹಾಕಿದ ನಂತರ ತವರು ಮನೆಗೆ ಹೋದ ಹೆಂಡತಿ ಅಲ್ಲೇ ಇರಲು ನಿರ್ಧರಿಸಿದ್ದರು. ಆದರೆ ಎರಡೂ ಕುಟುಂಬದವರು ಸಮಸ್ಯೆ ಮತ್ತೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾತನಾಡಿಕೊಂಡು ಆಕೆಯನ್ನು ಕರೆದುಕೊಂಡು ಹೋದರು. ಅದಾದ ನಂತರ ಸ್ಥಿತಿಯೇನು ಬದಲಾಗಲಿಲ್ಲ. ವಿಜಯ್​ ತಿವಾರಿಯ ವಿಚಿತ್ರ ಲೈಂಗಿಕ ಕಾಮನೆಗಳು ಹೆಚ್ಚುತ್ತಲೇ ಹೋದವು ಎನ್ನಲಾಗಿದೆ. ಒಂದೆಡೆ ಲೈಂಗಿಕ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರೆ, ಇನ್ನೊಂದೆಡೆ ವರದಕ್ಷಿಣೆ ತರುವಂತೆ ಅತ್ತೆ ಮಾವ ಮತ್ತು ಗಂಡ ಮೂವರೂ ಪೀಡಿಸಲು ಆರಂಭಿಸಿದ್ದರು. 20 ಲಕ್ಷ ರೂಪಾಯಿ ವರದಕ್ಷಿಣೆ ತಂದು ಕೊಡು ಎಂದು ಹೊಡೆಯಲು ಆರಂಭಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

  ಇದನ್ನೂ ಓದಿ: ಕ್ಯಾಬ್​ ಚಾಲಕನ ವಿರುದ್ಧ ಅತ್ಯಾಚಾರ ಆರೋಪ; ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

  ರಾಂಪುರ ಕರ್ಖಾನ ಪೊಲೀಸ್​ ಠಾಣೆ ಪೊಲೀಸ್​ ಅಧಿಕಾರಿ ಮನೋಜ್​ ಕುಮಾರ್​ ಹೇಳಿರುವ ಪ್ರಕಾರ ಈ ಬಗ್ಗೆ ಇದಾಗಲೇ ಪ್ರಕರಣ ದಾಖಲಿಸಿ, ವಿಜಯ್​ ತಿವಾರಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹೆಂಡತಿಯ ದೂರಿಗೆ ತಕ್ಕ ಸಾಕ್ಷಿ ಲಭ್ಯವಾದ ಹಿನ್ನೆಲೆಯಲ್ಲಿ ಆರೋಪಿ ವಿಜಯ್​ ತಿವಾರಿಯನ್ನು ಗೋರಖ್​ಪುರದಲ್ಲಿ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿದೆ.

  ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ:

  ಬೆಂಗಳೂರಿನ ಜೀವನ್​ ಭೀಮಾ ನಗರ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದ್ದು, ಆರೋಪಿ ಕ್ಯಾಬ್​ ಚಾಲಕನನ್ನು ಬಂಧಿಸಲಾಗಿದೆ. ಆರೋಪಿ ಉಬರ್​ ಟ್ಯಾಕ್ಸಿ ಓಡಿಸುತ್ತಿದ್ದು, ಯುವತಿ ಎಚ್​ಎಸ್​ಆರ್​ ಲೇಔಟ್​ನಿಂದ ಮುರುಗೇಶ್​ ಪಾಳ್ಯಕ್ಕೆ ಬುಧವಾರ ಮುಂಜಾನೆ 3.30ಕ್ಕೆ ಕ್ಯಾಬ್​ ಬುಕ್​ ಮಾಡಿದ್ದಳು. ಮುರುಗೇಶ್​ ಪಾಳ್ಯಕ್ಕೆ ಬಂದ ತಕ್ಷಣ, ಕಾರ್​ ಡೋರನ್ನು ಲಾಕ್​ ಮಾಡಿ ಯುವತಿಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

  ಇದನ್ನೂ ಓದಿ: Viral video: ಸೀರೆ ಉಟ್ಟವರಿಗೆ ರೆಸ್ಟೋರೆಂಟ್​ಗೆ​ ಪ್ರವೇಶ ಇಲ್ಲ ಎಂದ ಮಹಿಳೆಯನ್ನು ಹೊರಗೆ ಕಳುಹಿಸಿದ ಸಿಬ್ಬಂದಿ

  ಅತ್ಯಾಚಾರ ಮಾಡಿದ ನಂತರ ಯುವತಿ ಕ್ಯಾಬ್​ ಚಾಲಕನ ಫೋನ್​ ಕಸಿದುಕೊಂಡಿದ್ದಾಳೆ. ತಕ್ಷಣ ಚಾಲಕ ಕ್ಯಾಬ್​ನಿಂದ ಯುವತಿಯನ್ನು ಹೊರತಳ್ಳಿ, ಸ್ಥಳದಿಂದ ಹೋಗಿದ್ದಾನೆ. ಇದರ ಬೆನ್ನಲ್ಲೇ ಯುವತಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ವೈದ್ಯಕೀಯ ಪರೀಕ್ಷೆ ಕೂಡ ಮಾಡಲಾಗಿದ್ದು, ಆಕೆಯನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್​ ಆಯುಕ್ತ ಮುರುಗನ್​ ನ್ಯೂಸ್​ 18ಗೆ ಮಾಹಿತಿ ನೀಡಿದ್ದಾರೆ.

  ಅತ್ಯಾಚಾರ ಅಲ್ಲ, ಯತ್ನ ಎಂದ ಸಿಎಂ:

  ಈ ಬಗ್ಗೆ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಬಿ ನಗರ ಠಾಣೆಯಲ್ಲಿ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದೇವೆ. ಯಾವುದೇ ಪ್ರಕರಣಗಳಲ್ಲೂ ಪೊಲೀಸ್​ ಇಲಾಖೆ ನಿಧಾನ ಮಾಡುವುದಿಲ್ಲ ಎಂದರು. ಆದರೆ ಇದು ಅತ್ಯಾಚಾರ ಪ್ರಕರಣವಾಗಿದ್ದು, ಮುಖ್ಯಮಂತ್ರಿಗಳು ಅತ್ಯಾಚಾರ ಯತ್ನ ಎಂದು ಹೇಳಿರುವುದು ಯುವತಿಯ ದೂರು, ಪೊಲೀಸ್​ ಅಧಿಕಾರಿಗಳ ಹೇಳಿಕೆಗೆ ತದ್ವಿರುದ್ಧವಾಗಿದೆ.
  Published by:Sharath Sharma Kalagaru
  First published: