Rameshwaram Bridge| ಹೇಗಿದೆ ಗೊತ್ತಾ ರಾಮೇಶ್ವರಂನಲ್ಲಿರುವ ನೂತನ ಪಂಬನ್ ಸೇತುವೆ..? ನೋಡಿದ್ರೆ ಬೆರಗಾಗ್ತೀರಾ..!

ಪಂಬನ್ ರೈಲ್ವೆ ಸೇತುವೆ ಅಮೆರಿಕದ ಫ್ಲೋರಿಡಾದ ನಂತರ ವಿಶ್ವದ ಎರಡನೇ ಅತ್ಯಂತ ಅಪಾಯಕಾರಿ ಸೇತುವೆಯಾಗಿದೆ. ಈ ಸ್ಥಳದಲ್ಲಿ ಚಂಡಮಾರುತ ಗಾಳಿ ಹೆಚ್ಚು ಬೀಸುತ್ತದೆ. 1964ರಂದು ರಾಮೇಶ್ವರಂ ಚಂಡಮಾರುತದ ಸಮಯದಲ್ಲಿ ಸೇತುವೆ ಹಾನಿಗೊಳಗಾಗಿತ್ತು.

ರಾಮೇಶ್ವರಂ.

ರಾಮೇಶ್ವರಂ.

 • Share this:
  ತಮಿಳುನಾಡಿನ ರಾಮೇಶ್ವರಂನಲ್ಲಿ (Rameshwaram) ನಿರ್ಮಿತವಾದ ನೂತನ ಪಂಬನ್ ಸೇತುವೆಯ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಟ್ವಿಟ್ಟರ್‌ನಲ್ಲಿ (Twitter) ಶೇರ್ ಮಾಡಿದ್ದಾರೆ. ಇದು ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಬಳಕೆಗೆ ಸಿದ್ಧವಾಗುವ ನಿರೀಕ್ಷೆಯಿದೆ.ಅರೇಬಿಯನ್ ಸಮುದ್ರದಲ್ಲಿರುವ (Arabian sea) ರಾಮೇಶ್ವರ ದ್ವೀಪವನ್ನು ಮುಖ್ಯ ಭೂಭಾಗಕ್ಕೆ ಜೋಡಿಸುವ 2 ಕಿಮೀ ಉದ್ದದ ಹೊಸ ಸೇತುವೆಯು ಈಗಿರುವ 104 ವರ್ಷಗಳ ಹಳೆಯ ವಿನ್ಯಾಸವನ್ನು ಬದಲಾಯಿಸುತ್ತದೆ. ಸೇತುವೆಯು 63 ಮೀಟರ್ ವಿಸ್ತಾರ ಹೊಂದಿದ್ದು, ಇದು ಲಂಬವಾಗಿ ಮೇಲಕ್ಕೆತ್ತಿ ಸಣ್ಣ ಹಡಗುಗಳಿಗೆ ಸಾಗಲು ಅನುವು ಮಾಡಿಕೊಡುತ್ತದೆ.

  ವೈಷ್ಣವ್ ಹಂಚಿಕೊಂಡಿರುವ ಚಿತ್ರಗಳಲ್ಲಿ, ಸ್ಪಷ್ಟವಾದ, ನೀಲಿ ಆಕಾಶದ ಅಡಿಯಲ್ಲಿ ಕೆಲಸಗಾರರು ಮತ್ತು ಯಂತ್ರೋಪಕರಣಗಳನ್ನು ಸ್ಥಳದಲ್ಲಿ ನಿಯೋಜಿಸಿರುವುದನ್ನು ನಾವು ನೋಡಬಹುದು.

  ಈ ಹಿಂದೆ, ರೈಲ್ವೆ ಸಚಿವಾಲಯವು ಹೊಸ ಪಂಬನ್ ಸೇತುವೆಯ ಕೆಲವು ಸ್ನ್ಯಾಪ್‍ಶಾಟ್‍ಗಳನ್ನು ಟ್ವಿಟ್ಟರ್‌ ಪೋಸ್ಟ್‌ ಮೂಲಕ ಹಂಚಿಕೊಂಡಿತ್ತು. ಇದನ್ನು ಎಂಜಿನಿಯರಿಂಗ್ ಅದ್ಭುತ ಎಂದು ಕರೆಯುವ ಸಚಿವಾಲಯ, "ಈ ಡ್ಯುಯಲ್-ಟ್ರ್ಯಾಕ್ ಅತ್ಯಾಧುನಿಕ ಸೇತುವೆ ದೇಶದ ಮೊದಲ ಲಂಬವಾದ ಲಿಫ್ಟ್ ರೈಲ್ವೇ ಸಮುದ್ರ ಸೇತುವೆಯಾಗಿದ್ದು, ಮಾರ್ಚ್ 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಟ್ವೀಟ್ ಮಾಡಿತ್ತು.

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಚ್‍ 2019ರಲ್ಲಿ ಶಿಲಾನ್ಯಾಸ ಮಾಡಿದ ನಂತರ ನವೆಂಬರ್ 9, 2019ರಂದು ನಿರ್ಮಾಣ ಆರಂಭವಾಯಿತು. ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಸೇತುವೆಯು ರಾಷ್ಟ್ರೀಯ ಸಾಗಣೆದಾರರಿಗೆ ಹೆಚ್ಚಿನ ವೇಗದಲ್ಲಿ ರೈಲುಗಳನ್ನು ಚಲಾಯಿಸಲು, ಹೆಚ್ಚಿನ ಭಾರ ಸಾಗಿಸಲು ಮತ್ತು ಸಂಚಾರದ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ರೈಲ್ವೇ ಹೇಳಿದೆ.

  ಸೇತುವೆಯು 101 ಸೇತು ಬಂಧಗಳನ್ನು ಹೊಂದಿದೆ ಮತ್ತು ಈಗ ಇರುವ ಸೇತುವೆಗಿಂತ 3 ಮೀಟರ್ ಎತ್ತರದಲ್ಲಿದೆ, ಇದು ಹಡಗುಗಳು ಹಾದುಹೋಗಲು ಹೆಚ್ಚು ನ್ಯಾವಿಗೇಷನಲ್ ಏರ್ ಕ್ಲಿಯರೆನ್ಸ್ ಅನ್ನು ಒದಗಿಸುತ್ತದೆ.

  ಈಗಿರುವ ಪಂಬನ್ ಸೇತುವೆ ಭಾರತದ ಮೊದಲ ಸಮುದ್ರ ಸೇತುವೆಯಾಗಿದ್ದು 1914ರಲ್ಲಿ ಕಾರ್ಯಾರಂಭ ಮಾಡಿತು. ಇದರ ನಿರ್ಮಾಣವು ಮೂರು ವರ್ಷಗಳಲ್ಲಿ ಪೂರ್ಣಗೊಂಡಿತು ಮತ್ತು 2010ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ತೆರೆಯುವವರೆಗೂ ಇದು ಭಾರತದ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

  1988ರಲ್ಲಿ ಈ ರೈಲು ಸೇತುವೆಗೆ ಸಮಾನಾಂತರವಾಗಿ ರಸ್ತೆ ಸೇತುವೆಯನ್ನೂ ನಿರ್ಮಿಸಲಾಯಿತು. ಈ ರಸ್ತೆ ಸೇತುವೆಯನ್ನು ಇಂದಿರಾಗಾಂಧಿ ರಸ್ತೆ ಸೇತುವೆ ಎಂದು ಕರೆಯುತ್ತಾರೆ. ಪಂಬನ್ ರಸ್ತೆ ಸೇತುವೆ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್49) ರಾಮೇಶ್ವರಂ ದ್ವೀಪದೊಂದಿಗೆ ಸಂಪರ್ಕಿಸುತ್ತದೆ. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉದ್ಘಾಟಿಸಿದರು. 2.345 ಕಿ.ಮೀ ಉದ್ದದ ಈ ಸೇತುವೆ ಪೂರ್ಣಗೊಳ್ಳಲು 14 ವರ್ಷ ತೆಗೆದುಕೊಂಡಿತು.

  ಇದನ್ನೂ ಓದಿ: Supreme Court| ಲಖೀಂಪುರ್​ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಿದ್ದೀರಿ? ವರದಿ ಕೇಳಿದ ಸುಪ್ರೀಂ

  ಪಂಬನ್ ರೈಲ್ವೆ ಸೇತುವೆ ಅಮೆರಿಕದ ಫ್ಲೋರಿಡಾದ ನಂತರ ವಿಶ್ವದ ಎರಡನೇ ಅತ್ಯಂತ ಅಪಾಯಕಾರಿ ಸೇತುವೆಯಾಗಿದೆ. ಈ ಸ್ಥಳದಲ್ಲಿ ಚಂಡಮಾರುತ ಗಾಳಿ ಹೆಚ್ಚು ಬೀಸುತ್ತದೆ. 1964ರಂದು ರಾಮೇಶ್ವರಂ ಚಂಡಮಾರುತದ ಸಮಯದಲ್ಲಿ ಸೇತುವೆ ಹಾನಿಗೊಳಗಾಗಿತ್ತು.
  Published by:MAshok Kumar
  First published: