SSLC ಪರೀಕ್ಷೆಯಲ್ಲಿ ಫೇಲ್ ಆದವ್ರಿಗೆ ಸವಿಯಲು ಬಿರಿಯಾನಿ, ಮಲಗಲು ರೂಂ ಉಚಿತ! ಬೇಸರ ಬಿಟ್ಟು ಡೀಟೆಲ್ಸ್ ನೋಡಿ

ಮಾರ್ಚ್​ 2021ರ ಎಲ್​ಎಸ್ಎಲ್​ಸಿ ಪರೀಕ್ಷೆಯಲ್ಲಿ 4.21 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ  ಶೇ. 99.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.  ಕೋವಿಡ್​ -19 ಪರಿಸ್ಥಿತಿಯನ್ನು ಗಮನಿಸಿ ಪ್ರಶ್ನೆಗಳನ್ನು ಹೊಂದಿಸಿ ಉದಾರವಾದಿ ನೀತಿಯ ಮೂಲಕ ನೀಡಲಾಗಿದೆ.

ಬಿರಿಯಾನಿ

ಬಿರಿಯಾನಿ

  • Share this:
    ದೇವರನಾಡು ಕೇರಳದಲ್ಲಿ ಈಗಾಗಲೇ ಎಲ್​ಎಸ್​ಎಲ್​ಸಿ ಪರೀಕ್ಷೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಅದರಲ್ಲಿ 4.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಯಶಸ್ಸು ಸಾಧಿಸಿದ್ದಾರೆ. 2,236 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಪಾಸ್​ ಆಗಿದ್ದೇನೆ ಎಂಬ ಸಂತೋಷ ಹಂಚಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಒಂದೆಡೆ ಇರುವಾಗ, ಮತ್ತೊಂದೆಡೆ ಫೇಲ್​ ಆಗಿರುವ ವಿದ್ಯಾರ್ಥಿಗಳ ದುಃಖವನ್ನು ಹೋಗಲಾಡಿಸಲು ಕೆಲವು  ಹೋಟೆಲ್ ವ್ಯಾಪಾರಸ್ಥರು ಉಚಿತ ರೂಂ​ ಮತ್ತು ಬಿರಿಯಾನಿ ನೀಡುವ ಮೂಲಕ ಅವರ ಬೇರಸನ್ನು ಹೋಗಲಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ವಿಶ್ಲೇಷನಾ ಅಭಿಯಾನವನ್ನು ಮೂಲಕ ಪರೀಕ್ಷಾ ನೀತಿಯ ಹೊರತಾಗಿ ವಿದ್ಯಾರ್ಥಿಗಳು ಸಾಮಾಜಿಕ ದುರ್ಬಲತೆಯ ಹಿನ್ನಲೆಯಿಂದ ಬಂದವರು ಎಂದು ತಿಳಿದು ಬಂದಿದೆ. ಜೊತೆಗೆ ಕಲಿಕಾ ನ್ಯೂನತೆಯಿಂದಾಗಿ ಬಳಲಿದ್ದರು ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಉತ್ನತ ವ್ಯಾಸಂಗಕ್ಕೂ ತೆರಳುವ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆಯೂ ಅನೇಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

    ಮಾರ್ಚ್​ 2021ರ ಎಲ್​ಎಸ್ಎಲ್​ಸಿ ಪರೀಕ್ಷೆಯಲ್ಲಿ 4.21 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ  ಶೇ. 99.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.  ಕೋವಿಡ್​ -19 ಪರಿಸ್ಥಿತಿಯನ್ನು ಗಮನಿಸಿ ಪ್ರಶ್ನೆಗಳನ್ನು ಹೊಂದಿಸಿ ಉದಾರವಾದಿ ನೀತಿಯ ಮೂಲಕ ನೀಡಲಾಗಿದೆ. ಹಾಗಾಗಿ ಈ ಯಶಸ್ಸಿಗೆ ಕಾರಣವಾಯಿತು. ಎಲ್ಲಾ ವಿಷಯದಲ್ಲಿ ಎ+ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಾಗಿದೆ. ಶೇ.0.53 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: Death Clock: ನಿಮ್ಮ ಸಾವಿನ ದಿನಾಂಕ ಹೇಳುತ್ತೆ ಈ ವೆಬ್​ಸೈಟ್​! ಕೊನೆಯ ಟಿಕೆಟ್​ ಯಾವಾಗ ಚೆಕ್​ ಮಾಡಿ

    ಪಾಸ್​ ಆಗಿರುವ ವಿದ್ಯಾರ್ಥಿಗಳು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿರುವ ಸಮಯದಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬವ ಮತ್ತು ಅವರನ್ನು ಸಂತೋಷದಿಂದ ಇರಿಸುವ ಕೆಲಸವನ್ನು ಕೇರಳದ ಕೋಝಿಕೋಡ್​ ಮೂಲದ ಸುಧೇಶ್​ ಮಾಡುತ್ತಿದ್ದಾರೆ.

    ಸುದೇಶ್​​ ಕೊಡೈಕೆನಲ್​ನಲ್ಲಿ ರೆಸಾರ್ಟ್​ ಮತ್ತು ಹೋಮ್​ ಸ್ಟೇ ನಡೆಸುತ್ತಿದ್ದಾರೆ. ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗಾಗಿ ಉಚಿತ ವಾಸ್ತವ್ಯವನ್ನು ನೀಡಿದ್ದಾರೆ. ಇದನ್ನು ಗಮನಿಸಿ ಅನೇಕ ವ್ಯಾಪಾರಸ್ಥರು ಈ ರೀತಿಯ ಕೊಡುಗೆ ನೀಡಲು ಮುಂದಾದರು. ಅಂತೆಯೇ ಕೊಚ್ಚಿ ಬಳಿಯ ಮುಲಾಂತುರುವಿನಲ್ಲಿರುವ ಅಂಗಡಿಯೊಂದು ಫೇಲ್​ ಆದ ವಿದ್ಯಾರ್ಥಿಗಳಿಗೆ ಉಚಿತ ಬಿರಿಯಾನಿ ಸವಿಯುವ ಕೊಡುಗೆ ನೀಡುತ್ತಿದೆ.

    Read: ಬಾವಿಗೆ ಬಿದ್ದ ಮಗುವನ್ನು ನೋಡೋಕೆ ಹೋಗಿ ತಾವೂ ಬಾವಿ ಪಾಲಾದ 40 ಜನ! 3 ಸಾವು, 11 ಮಿಸ್ಸಿಂಗ್

    ಕೇರಳದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತೀರ್ಣ ಪ್ರಮಾಣವು ಕಡಿಮೆಯಿದೆ. ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳು  ಸಾಮಾನ್ಯ ಶಿಕ್ಷಣಕ್ಕೆ ತುತ್ತಾಗಿ ಈ ಪರಿಸ್ಥಿತಿಯನ್ನು ಎದಿರಿಸಬೇಕಾಯಿತು ಎಂದು ಅಲ್ಲಿನ ಸಾಮಾನ್ಯ ಶಿಕ್ಷಣ ನಿರ್ದೇಶಕ ಜೀವನ್​ ಬಾಬು ಹೇಳಿದ್ದಾರೆ.

    ನಂತರ ಮಾತನಾಡಿದ ಅವರು, ಕೇರಳದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಕನಿಷ್ಠ ಪರೀಕ್ಷೆಗಳನ್ನು ನಡೆಸುವ ಮೂಲಕ ಮೌಲ್ಯಮಾಪನ ಮಾಡಲಾಗಿದೆ, ಸಿಬಿಎಸ್‌ಇ ಮತ್ತು ಐಸಿಎಸ್‌ಇಯಂತಹ ಇತರ ಹಲವು ಮಂಡಳಿಗಳಲ್ಲಿ ವಿದ್ಯಾರ್ಥಿಗಳನ್ನು ಹಿಂದಿನ ಸಾಧನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ’ ಎಂದು ಹೇಳಿದರು.

    ಕೇರಳದಲ್ಲಿ ಎಸ್‌ಎಸ್‌ಎಲ್‌ಸಿಗೆ ಆಲ್-ಪಾಸ್ ನೀತಿಯ ಬಗ್ಗೆ ಯಾವುದೇ ಸಲಹೆ ಇಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಗೆ ಪ್ರವೇಶ ದೊರೆಯುವಂತೆ ಸರ್ಕಾರ ಗರಿಷ್ಠ ಪ್ರಯತ್ನಗಳನ್ನು ಮಾಡಿದೆ ಎನ್ನುತ್ತಾರೆ ಜೀವನ್​ ಬಾಬು.
    Published by:Harshith AS
    First published: