ಫೀಸ್​​ ಹೈಕ್​​ ವಿರುದ್ಧ ತಾರಕಕ್ಕೇರಿದ ಜೆಎನ್​​ಯು ಪ್ರತಿಭಟನೆ: ಸಂಸತ್ತಿನತ್ತ ವಿದ್ಯಾರ್ಥಿಗಳ ಮೆರವಣಿಗೆ; ಪೊಲೀಸರ ತಡೆ

ಸಂಸತ್​​​ ಕಡೆಗೆ ಮೆರವಣಿಗೆ ಹೊರಡುತ್ತಿದ್ದ ವಿದ್ಯಾರ್ಥಿಗಳನ್ನು ಬಾಬಾ ಗಂಗನಾಥ್ ಮಾರ್ಗ್​​​ ಸಮೀಪ ನೂರಾರು ದೆಹಲಿ ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನೆ ನೇತೃತ್ವವಹಿಸಿದ್ದ ಮುಂದಾಳುಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ಧಾರೆ. ಆದರೂ, ವಿದ್ಯಾರ್ಥಿಗಳ ಹೋರಾಟ ನಿಂತಿಲ್ಲ, ಬದಲಿಗೆ ಮತ್ತಷ್ಟು ತೀವ್ರಗೊಂಡಿದೆ.

news18-kannada
Updated:November 18, 2019, 3:31 PM IST
ಫೀಸ್​​ ಹೈಕ್​​ ವಿರುದ್ಧ ತಾರಕಕ್ಕೇರಿದ ಜೆಎನ್​​ಯು ಪ್ರತಿಭಟನೆ: ಸಂಸತ್ತಿನತ್ತ ವಿದ್ಯಾರ್ಥಿಗಳ ಮೆರವಣಿಗೆ; ಪೊಲೀಸರ ತಡೆ
ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್​​​ಯು ವಿದ್ಯಾರ್ಥಿಗಳ ಪ್ರತಿಭಟನೆ
  • Share this:
ನವದೆಹಲಿ(ನ.18): ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹೈಡ್ರಾಮಾ ಮುಂದುವರಿದಿದೆ. ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಇಂದು ಹಾಸ್ಟೆಲ್​​ ಶುಲ್ಕ ಹೆಚ್ಚಳ ಸಂಪೂರ್ಣ ವಾಪಸ್ಸು ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ಹೊರಟಿದ್ಧಾರೆ. ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಘೋಷಣೆಗಳು ಮೊಳಗಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಆದರೀಗ, ದಾರಿ ಮಧ್ಯೆಯೇ ಜೆಎನ್​​ಯು ಕ್ಯಾಂಪಸ್​​ನಿಂದ ಸಂಸತ್ತಿನತ್ತ ಹೊರಟ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆನ್ನಲಾಗಿದೆ.

ಕಳೆದ ಮೂರು ವಾರಗಳಿಂದ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ಆಡಳಿತ ಮಂಡಳಿ ಶುಲ್ಕ ಹೆಚ್ಚಳದಲ್ಲಿ ಶೇ. 50ರಷ್ಟು ಕಡಿಮೆಗೊಳಿಸಿದೆ. ಜೊತೆಗೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಜೆಎನ್​​ಯು ವಿದ್ಯಾರ್ಥಿಗಳು ಮಾತ್ರ ಶುಲ್ಕ ಹೆಚ್ಚಳದಲ್ಲಿ ಸಂಪೂರ್ಣ ಕಡಿಮೆ ಮಾಡಬೇಕೆಂದು ಆಗ್ರಹಿಸಿದೆ. ಅದಕ್ಕಾಗಿಯೇ ವಿದ್ಯಾರ್ಥಿಗಳು ಸಂಸತ್​​​ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಕೇಂದ್ರದ ವಿರುದ್ಧ ರಸ್ತೆಗಳಿದು ಪ್ರತಿಭಟಿಸುತ್ತಿದ್ಧಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತ ಮಂಡಳಿ ಶುಲ್ಕ ವೆಚ್ಚಳ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಯ ಜೆಎನ್​ಯು ಕ್ಯಾಂಪಸ್​ನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಹಾನಿ

ಸಂಸತ್​​​ ಕಡೆಗೆ ಮೆರವಣಿಗೆ ಹೊರಡುತ್ತಿದ್ದ ವಿದ್ಯಾರ್ಥಿಗಳನ್ನು ಬಾಬಾ ಗಂಗನಾಥ್ ಮಾರ್ಗ್​​​ ಸಮೀಪ ನೂರಾರು ದೆಹಲಿ ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನೆ ನೇತೃತ್ವವಹಿಸಿದ್ದ ಮುಂದಾಳುಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ಧಾರೆ. ಆದರೂ, ವಿದ್ಯಾರ್ಥಿಗಳ ಹೋರಾಟ ನಿಂತಿಲ್ಲ, ಬದಲಿಗೆ ಮತ್ತಷ್ಟು ತೀವ್ರಗೊಂಡಿದೆ.

ಜೆಎನ್​ಯು ಕಾರ್ಯಕಾರಿ ಸಮಿತಿ ಮಾಡಿರುವ ಹೊಸ ಪ್ರಸ್ತಾವದ ಪ್ರಕಾರ, ಡಬಲ್ ಸೀಟರ್ ಹಾಸ್ಟೆಲ್ ರೂಮಿನ ಶುಲ್ಕವನ್ನು 100 ರೂಪಾಯಿಗೆ ಇಳಿಕೆ ಮಾಡಲಾಗಿದೆ. 600ಕ್ಕೆ ಏರಿಕೆ ಮಾಡಲಾಗಿದ್ದ ಡಬಲ್ ಸೀಟರ್ ರೂಮನ್ನು 200 ರೂಗೆ ಇಳಿಸಲಾಗಿದೆ. ಇನ್ನು, ವರ್ಷಕ್ಕೆ ಮರುಪಾವತಿಯಾಗುವ ಮೆಸ್ ಸೆಕ್ಯೂರಿಟಿ ಶುಲ್ಕವನ್ನು 5,500 ರೂನಿಂದ 12,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಶುಲ್ಕ ಹೆಚ್ಚಳದಲ್ಲಿ ಕಡಿತ ಮಾಡಿದ ಜೆಎನ್​ಯು; ಪ್ರತಿಭಟನೆ ಕೈಬಿಡದ ವಿದ್ಯಾರ್ಥಿಗಳು

ಆದರೆ, ವಿದ್ಯಾರ್ಥಿಗಳ ಆಕ್ರೋಶಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಯುಟಿಲಿಟಿ ಚಾರ್ಜ್. ಹಿಂದೆ ಇಲ್ಲದ ಯುಟಿಲಿಟಿ ಶುಲ್ಕ ಅಥವಾ ಸವಲತ್ತು ಶುಲ್ಕವನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಈ ಶುಲ್ಕ 1,700 ರೂಪಾಯಿ ಇದೆ. ಜೆಎನ್​ಯುನ ಹೊಸ ಪ್ರಸ್ತಾವದಲ್ಲಿ ಈ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಶುಲ್ಕ ವಿಚಾರವೇ ವಾಸ್ತವವಾಗಿ ವಿದ್ಯಾರ್ಥಿ ಸಂಘಟನೆಯನ್ನು ಬೃಹತ್ ಪ್ರತಿಭಟನೆ ಎಡೆಗೆ ನೂಕಿದ್ದು. ಈಗ ಯುಟಿಲಿಟಿ ಚಾರ್ಜ್​ನಲ್ಲಿ ಯಾವುದೇ ಬದಲಾವಣೆ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ನಿಲ್ಲಿಸದಿರಲು ನಿರ್ಧರಿಸಿದ್ದಾರೆ.---------
First published: November 18, 2019, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading